fbpx
ಕಿರುತೆರೆ

ಜೆಕೆ ಜೊತೆಗಿನ ಲವ್ ಗಾಸಿಪ್ ಬಗ್ಗೆ ಕೊನೆಗೂ ತುಟಿಬಿಚ್ಚಿದ ಶೃತಿ..!!

ಜೆಕೆ ಜೊತೆಗಿನ ಲವ್ ಗಾಸಿಪ್ ಬಗ್ಗೆ ಕೊನೆಗೂ ತುಟಿಬಿಚ್ಚಿದ ಶೃತಿ..!!

 

 

 

 

ಬಿಗ್ ಬಾಸ್ ಪ್ರಾರಂಭವಾದಾಗಿನಿಂದಲೂ ಜೆಕೆ ಮತ್ತು ಶ್ರುತಿ ನಡುವೆ ಏನೋ ಕುಚ್ ಕುಚ್ ನಡೆಯುತ್ತಿದೆ ಎಂದು ಬಿಗ್ ಬಾಸ್ ಒಳಗೂ ಮತ್ತು ಹೊರಗೂ ಕೇಳಿ ಬರುತ್ತಿತ್ತು ಆದ್ರೆ ಈ ವಿಚಾರವಾಗಿ ಜೆಕೆಯಾಗಲಿ ಶ್ರುತಿಯಾಗಲಿ ಏನೂ ಹೇಳಿರಲಿಲ್ಲ ಈಗ ಈ ವಿಚಾರದ ಬಗ್ಗೆ ಸ್ವತಃ ಶ್ರುತಿ ಪ್ರಕಾಶ್ ಅವರೇ ಮಾತನಾಡಿದ್ದಾರೆ.

 

 

 

ನೆನ್ನೆಯ ಸಂಚಿಕೆಯಲ್ಲಿ ಬಿಗ್ ಬಾಸ್ ಮನೆಯ ಸದಸ್ಯರಿಗೆ ವಿಶೇಷ ಚಟುವಟಿಕೆಯೊಂದನ್ನ ನೀಡಲಾಗಿತ್ತು, ಅದರಂತೆ ಮನೆಯ ಕ್ಯಾಪ್ಟನ್ ಆಗಿದ್ದ ರಿಯಾಜ್ ಅವರು ಬಿಗ್ ಬಾಸ್ ಕಳುಹಿಸಿಕೊಟ್ಟಿದ್ದ ಪ್ರಶ್ನೆಯನ್ನು ಪ್ರತಿ ಸದಸ್ಯರಿಗೂ ಕೇಳಬೇಕಿತ್ತು. ಒಂದು ರೀತಿಯ ರ್ಯಾಪಿಡ್ ಫೈರ್ ಪ್ರಶ್ನೆಗಳಂತೆ ಇದು ಇತ್ತು. ಪ್ರಶೆಗಳನ್ನು ಕೈನಲ್ಲಿಡಿದು ಎಲ್ಲರನ್ನೂ ಪ್ರಶ್ನೆಗಳನ್ನ ಕೇಳಲು ರಿಯಾಜ್ ಶುರು ಮಾಡಿದ್ರು.

 

 

 

ಶ್ರುತಿ ಪ್ರಕಾಶ್ ಅವರ ಸರದಿ ಬಂದಾಗ ಬಿಗ್ ಬಾಸ್ ಮನೆಯಲ್ಲಿ ನೀವೂ ಕೇಳಿದ ದೊಡ್ಡ ಗಾಸಿಪ್ ಏನು ಎಂದು ರಿಯಾಜ್ ಕೇಳಿದರು. “ಎರಡನೇ ವಾರದಿಂದಲೂ ಬಿಗ್ ಬಾಸ್ ಒಳಗೆ ಎಲ್ಲರೂ ನನ್ನ ಮತ್ತು ಜೆಕೆ ನಡುವೆ ಏನೋ ನಡಿತಾ ಇದೆ ಎಂದು ಕಲ್ಪಿಸಿಕೊಳ್ಳುತ್ತಿದ್ದಾರೆ. ಈ ವಿಷಯ ನಿಜ ಅಲ್ಲ ನಮ್ಮಿಬ್ಬರ ನಡುವೆ ಅಂತದ್ದು ಏನು ಇಲ್ಲ” ಎಂದು ಶ್ರುತಿ ಹೇಳಿದರು.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top