ಮಾಹಿತಿ

ಪ್ರಪಂಚದ ಈ ಐದು ಅತಿಚಿಕ್ಕ ದೇಶಗಳ ಬಗ್ಗೆ ತಿಳ್ಕೊಂಡ್ರೆ ಬಾಯಿ ಮೇಲೆ ಬೆರಳಿಡ್ಕೋತೀರಾ?

ಪ್ರಪಂಚದ ಈ ಐದು ಅತಿಚಿಕ್ಕ ದೇಶಗಳ ಬಗ್ಗೆ ತಿಳ್ಕೊಂಡ್ರೆ ಬಾಯಿ ಮೇಲೆ ಬೆರಳಿಡ್ಕೋತೀರಾ?

ದೇಶ ಎಂಬ ಪದವನ್ನು ನಾವು ಕೇಳಿದೊಡನೆ ಅತಿ ದೊಡ್ಡ ಭೂ ಭಾಗವಿರುತ್ತದೆ ಮತ್ತು ಅತಿ ಜನಸಂಖ್ಯೆ ಇರುತ್ತದೆ ಎಂಬ ವಿಷಯ ನಮ್ಮ ಮನಸಿಗೆ ಬರುತ್ತದೆ. ಪ್ರಪಂಚದಲ್ಲಿರುವ ಅತಿ ಚಿಕ್ಕ ದೇಶಗಳು ಇತರ ರಾಷ್ಟ್ರಗಳೊಳಗಿನ ನಗರಗಳಿಗೆ ಹೋಲಿಸಿದರೆ ಬಹಳ ಚಿಕ್ಕವು. ತಮ್ಮದೇ ಆದ ಸರ್ಕಾರಗಳು ಮತ್ತು ಸ್ವಂತ ಸಂಸ್ಕೃತಿಯೊಂದಿಗೆ, ಈ ಸಣ್ಣ ದೇಶಗಳು ವಿಶ್ವದಲ್ಲೇ ಅತ್ಯಂತ ಶ್ರೀಮಂತ, ಸುಂದರ ತಾಣಗಳಾಗಿವೆ. ಅವುಗಳ ಬಗ್ಗೆ ತಿಳಿಯೋಣ ಬನ್ನಿ.

 

1. ವ್ಯಾಟಿಕನ್ ಸಿಟಿ:

ವಿಶ್ವದ ಅತ್ಯಂತ ಚಿಕ್ಕ ದೇಶವೆಂದರೆ ವ್ಯಾಟಿಕನ್, ಇದು ಹೋಲಿ ಸೀ ಎಂದೂ ಕರೆಯಲ್ಪಡುತ್ತದೆ. ಕೇವಲ 0.44 ಸ್ಕ್ವೇರ್ ಕಿಲೋಮೀಟರ್ಗಳಷ್ಟು ವಿಸ್ತೀರ್ಣ ಹೊಂದಿರುವ ವ್ಯಾಟಿಕನ್ ಸಿಟಿ ಭೂಪ್ರದೇಶದ ಆಧಾರದಲ್ಲಿ ಪ್ರಪಂಚದ ಅತಿ ಚಿಕ್ಕ ದೇಶವಾಗಿದೆ. ಈ ದೇಶ ಸಂಪೂರ್ಣವಾಗಿ ರೋಮ್ನ ಇಟಾಲಿಯನ್ ರಾಜಧಾನಿ ನಗರದೊಳಗೆ ಇದ್ದು ಕ್ಯಾಥೊಲಿಕ್ ಚರ್ಚಿನ ಮಧ್ಯಭಾಗದಲ್ಲಿದೆ.

 

 

2.ಮೊನ್ಯಾಕೋ:

ಮೊನಾಕೊ ವಿಶ್ವದಲ್ಲೇ ಅತಿ ಹೆಚ್ಚು ಲಕ್ಷಾಧಿಪತಿಗಳು ಮತ್ತು ಶತಕೋಟ್ಯಾಧಿಪತಿಗಳಿಗೆ ನೆಲೆಯಾಗಿದೆ. ಕೇವಲ 2 ಚದರ ಕಿಲೋಮೀಟರ್ಗಳಷ್ಟು ವಿಸ್ತೀರ್ಣವನ್ನು ಮಾತ್ರ ಹೊಂದಿರುವ ಮೊನ್ಯಾಕೋ ವಿಶ್ವದ ಎರಡನೇ ಚಿಕ್ಕ ದೇಶವೂ ಕೂಡಾ ಆಗಿದೆ.36,000 ಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ, ಮೊನಾಕೊ ವಿಶ್ವದ ಅತ್ಯಂತ ಜನನಿಬಿಡ ದೇಶವಾಗಿದೆ.

 

 

3.ನೌರು:

ಆಸ್ಟ್ರೇಲಿಯಾದ ಪೂರ್ವಕ್ಕೆ ಇರುವ ಒಂದು ದ್ವೀಪ ರಾಷ್ಟ್ರವಾದ ನೌರು ವಿಶ್ವದಲ್ಲೇ ಅತಿ ಚಿಕ್ಕ ದ್ವೀಪವಾಗಿದೆ. ಈ ದೇಶದ ವಿಸ್ತೀರ್ಣ ಕೇವಲ 21 ಚದರ ಕಿಲೋ ಮೀಟರ್ ಗಳಷ್ಟು. ನೌರು ವಿಶ್ವದ ಹೆಚ್ಚು ದಡೂತಿ ಜನರನ್ನು ಹೊಂದಿರುವ ದೇಶವೆಂದು ಕರೆಯಲ್ಪಡುತ್ತದೆ, ಅದರಲ್ಲಿ 97% ನಷ್ಟು ಪುರುಷರು ಮತ್ತು 93% ರಷ್ಟು ಮಹಿಳೆಯರಲ್ಲಿ ಬೊಜ್ಜು ಅಥವಾ ಅತಿಯಾದ ತೂಕ ಇದ್ದಾರೆ.

 

 

 

4.ಟುವಾಲು:
ಟುವಾಲು ಆಸ್ಟ್ರೇಲಿಯಾದ ಪೆಸಿಫಿಕ್ ಮಹಾಸಾಗರದ ಈಶಾನ್ಯದಲ್ಲಿದೆ. ಒಟ್ಟು 26 ಚದರ ಕಿಲೋಮೀಟರ್ಗಳೊಂದಿಗೆ, ಟುವಾಲು ವಿಶ್ವದ ನಾಲ್ಕನೇ ಅತಿ ಚಿಕ್ಕ ದೇಶವಾಗಿದೆ. ಸುಮಾರು 10,000 ನಿವಾಸಿಗಳು, 8 ಕಿ.ಮೀ ರಸ್ತೆ ಇರುವ ಈ ದ್ವೀಪದಲ್ಲಿ ಇರುವುದು ಕೇವಲ ಒಂದು ಆಸ್ಪತ್ರೆ ಮಾತ್ರ. ಈ ದೇಶವು ಒಮ್ಮೆ ಬ್ರಿಟಿಷ್ ಆಡಳಿತದಲ್ಲಿತ್ತು ಆದರೆ 1978 ರಲ್ಲಿ ಸ್ವತಂತ್ರವಾಯಿತು.

 

 

 

5.ಸ್ಯಾನ್ ಮರಿನೋ:
ಇಟಲಿಯಿಂದ ಸಂಪೂರ್ಣವಾಗಿ ಸುತ್ತುವರಿಯಲ್ಪಟ್ಟ ಸ್ಯಾನ್ ಮರಿನೋ ಅತ್ಯಂತ ಪ್ರಶಾಂತ ರಿಪಬ್ಲಿಕ್ ದೇಶ ಎಂದೂ ಕರೆಯಲ್ಪಡುತ್ತದೆ. ಒಟ್ಟು 61 ಚದರ ಕಿಲೋಮೀಟರ್ಗಳಷ್ಟು ವಿಸ್ತೀರ್ಣ ಹೊಂದಿರುವ ಇದು ವಿಶ್ವದಲ್ಲೇ ಐದನೇ ಚಿಕ್ಕ ದೇಶವಾಗಿದೆ. ಇದು ಕೇವಲ 30,000 ಜನಸಂಖ್ಯೆಯನ್ನು ಹೊಂದಿದೆ, ಜಗತ್ತಿನ ಅತಿ ಕಡಿಮೆ ನಿರುದ್ಯೋಗ ದರವನ್ನು ಹೊಂದಿರುವುದರ ಬಗ್ಗೆ ಹೆಮ್ಮೆಪಡುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top