fbpx
ಮಾಹಿತಿ

ದೇಶದ ಅತ್ಯುತ್ತಮ ಹತ್ತು ಐಪಿಎಸ್ ಅಧಿಕಾರಿಗಳ ಪಟ್ಟಿಯಲ್ಲಿ ಕನ್ನಡತಿ ‘ಡಿ ರೂಪಾ’

ದೇಶದ ಅತ್ಯುತ್ತಮ ಹತ್ತು ಐಪಿಎಸ್ ಅಧಿಕಾರಿಗಳ ಪಟ್ಟಿಯಲ್ಲಿ ಕನ್ನಡತಿ ‘ಡಿ ರೂಪಾ’

ರಾಷ್ಟ್ರೀಯ ಮಾಧ್ಯಮವೊಂದು ದೇಶದ ಅತ್ಯುತ್ತಮ ಹತ್ತು ಐಪಿಎಸ್ ಅಧಿಕಾರಿಗಳ ಪಟ್ಟಿಯೊಂದನ್ನು ಮಾಡಿದ್ದು, ಆ ಅಧಿಕಾರಿಗಳ ಪಟ್ಟಿಯಲ್ಲಿ ಕರ್ನಾಟಕದ ಐಪಿಎಸ್ ಅಧಿಕಾರಿ ರೂಪಾ ಡಿ ಮೌದ್ಗಿಲ್ ಅವರ ಹೆಸರು ಕೂಡ ಇದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿನ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರಕ್ಕೆ ದೂರು ನೀಡುವ ಮೂಲಕ ದೇಶದಾದ್ಯಂತ ಸುದ್ದಿಯಾದವರು ರೂಪಾ.

ಕಾರಾಗೃಹ ಡೆಪ್ಯೂಟಿ ಇನ್ ಸ್ಪೆಕ್ಟರ್ ಜನರಲ್ ಅಗಿದ್ದ ರೂಪಾ ಅವರು ಬಯಲು ಮಾಡಿದ್ದು ಎಐಎಡಿಎಂಕೆ ಪ್ರಭಾವಿ ಶಶಿಕಲಾ ನಟರಾಜನ್ ಗೆ ಸಿಗುತ್ತಿದ್ದ ರಾಜಾತಿಥ್ಯವನ್ನು. ಅದಕ್ಕೂ ಮುನ್ನ ಕೂಡ ಪೊಲೀಸ್ ಅಧಿಕಾರಿಯಾಗಿ ರೂಪಾ ಮೌದ್ಗಿಲ್ ಅವರ ದಾಖಲೆ ಚೆನ್ನಾಗಿದೆ. 2004ರಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಉಮಾಭಾರತಿ ಬಂಧನದಿಂದ ಆರಂಭವಾಗುತ್ತದೆ.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಆರ್ಡರ್ಲಿ ಹಾಗೂ ಬೆಂಗಾವಲು ವಾಹನವನ್ನು ತೆಗೆಸಿಹಾಕಿದ್ದು, ಸ್ಥಳೀಯ ರಾಜಕಾರಣಿಗಳ ವಿರೋಧ, ಕಡೆಗೆ ತಮ್ಮ ಹಿರಿಯ ಅಧಿಕಾರಿಯನ್ನು ಎದುರು ಹಾಕಿಕೊಳ್ಳುವ ಧೈರ್ಯ ತೋರಿದವರು ಅವರು. ಹದಿನೇಳು ವರ್ಷದ ವೃತ್ತಿ ಜೀವನದಲ್ಲಿ ಬಹುತೇಕ ಪ್ರತಿ ವರ್ಷವೂ ವರ್ಗಾವಣೆ ಕಂಡ ಅಧಿಕಾರಿ ಇವರು.

ಹಕ್ಕು ಚ್ಯುತಿ ಮಾಡಿದರು ಎಂಬ ಶಾಸಕರ ಆಕ್ಷೇಪಣೆಯ ಕಾರಣಕ್ಕೆ ಹಲವು ಬಾರಿ ಸ್ಪೀಕರ್ ಎದುರು ಹಾಜರಾಗಿದ್ದಾರೆ ರೂಪಾ ಮೌದ್ಗಿಲ್. ಇಂಥ ಅಧಿಕಾರಿಯ ಹೆಸರು ಈಗ ರಾಷ್ಟ್ರ ಮಟ್ಟದಲ್ಲಿ ಮಿಂಚುತ್ತಿದೆ.

 

ದೇಶದ ಟಾಪ್ 10 ಐಪಿಎಸ್ ಅಧಿಕಾರಿಗಳ ಪಟ್ಟಿ ಇಲ್ಲಿದೆ.

1)ಮನೀಶ್ ಶಂಕರ್ ಶರ್ಮಾ

ಕಾನೂನು ಜಾರಿಯಿಂದ ಮೊದಲುಗೊಂಡು ಸಂಚಾರ ಸುರಕ್ಷತೆ ಸೇರಿದಂತೆ ನಾನಾ ವಿಭಾಗಗಳಲ್ಲಿ ಕೆಲಸ ಮಾಡಿದ ಅಧಿಕಾರಿ. ಭಯೋತ್ಪಾದನಾ ನಿಗ್ರಹ ದಳದಲ್ಲಿ ಇವರು ಮಾಡಿದ ಕೆಲಸಗಳಿಗೆ ಭಾರೀ ಮನ್ನಣೆ ಸಿಕ್ಕಿದೆ. ಮಧ್ಯಪ್ರದೇಶದ ಇನ್ ಸ್ಪೆಕ್ಟರ್ ಆಫ್ ಜನರಲ್ ಹುದ್ದೆಯಲ್ಲಿರುವ ಇವರು ಹಲವಾರು ನಾಗರಿಕ ಸ್ನೇಹಿ ಕ್ರಮಗಳನ್ನು ಪರಿಚಯಿಸಿದ್ದಾರೆ.

2)ಆರ್ ಶ್ರೀಲೇಖಾ

ಮೂವತ್ತು ವರ್ಷಗಳ ಹಿಂದೆ ಕೇರಳದ ಮೊದಲ ಮಹಿಳಾ ಐಪಿಎಸ್ ಅಧಿಕಾರಿಯಾಗಿ ನೇಮಕಾ ಆದವರು ಶ್ರೀಲೇಖಾ. ಸದ್ಯಕ್ಕೆ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಆಗಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸೇವೆಗಳಿಗೆ ನಿಯೋಜನೆ ಮೇಲೆ ತೆರಳಿದ ಅನುಭವ ಇರುವ ಇವರು, ಸಿಬಿಐನಲ್ಲಿ ತೋರಿದ ಧೈರ್ಯ- ಸಾಹಸಕ್ಕೆ ‘ರೇಡ್ ಶ್ರೀಲೇಖಾ’ ಅಂತಲೇ ಹೆಸರುವಾಸಿ. ಸಂಚಾರ ಆಯುಕ್ತೆ ಆಗಿದ್ದಾಗ ಹೆದ್ದಾರಿ ದರೋಡೆಗಳ ಪ್ರಮಾಣವನ್ನು ಅತ್ಯಂತ ಕಡಿಮೆ ಮಟ್ಟಕ್ಕೆ ಇಳಿಸಿದ ಕೀರ್ತಿ ಇವರದು. ಸ್ಕಾಟ್ಲೆಂಡ್ ಯಾರ್ಡ್ ನ ವಿಶೇಷ ತರಬೇತಿ ಪಡೆದಿದ್ದು, ಅಪರಾಧ ತನಿಖೆಗೆ ಸಂಬಂಧಿಸಿದಂತೆ ಮೂರು ಪುಸ್ತಕ ಬರೆದಿದ್ದಾರೆ.

3)ಮಹೇಶ್ ಮುರಳೀಧರ್ ಭಾಗವತ್

ಸದ್ಯಕ್ಕೆ ರಚಕೊಂಡ ಪೊಲೀಸ್ ಕಮಿಷನರ್ ಆಗಿರುವ ಮಹೇಶ್ ಮುರಳೀಧರ್ ಭಾಗವತ್ ತೆಲಂಗಾಣ ಕೇಡರ್ ಐಪಿಎಸ್ ಅಧಿಕಾರಿ. ಮಾನವ ಕಳ್ಳಸಾಗಣೆ ತಡೆಯುವ ನಿಟ್ಟಿನಲ್ಲಿ ಇವರು ತೆಗೆದುಕೊಂಡ ಕ್ರಮಕ್ಕೆ ಅಮೆರಿಕ ದೇಶದಿಂದ ಮೆಚ್ಚುಗೆ ವ್ಯಕ್ತವಾಗಿದೆ. ಹದಿಮೂರು ವರ್ಷದ ತಮ್ಮ ಸೇವಾವಧಿಯಲ್ಲಿ ಸಾವಿರ ಮಹಿಳೆಯರು ಮತ್ತು ಮಕ್ಕಳನ್ನು ಲೈಂಗಿಕ ದಂಧೆ ಜಾಲದಿಂದ, ಎಂಟು ನೂರು ಮಕ್ಕಳನ್ನು ಬಲವಂತದ ಕೆಲಸದಿಂದ ರಕ್ಷಿಸಿದ್ದಾರೆ.

4)ಅಸ್ರಾ ಗರ್ಗ್

ತಮಿಳುನಾಡು ಕೇಡರ್ ನ ಅಸ್ರಾ ಗರ್ಗ್ ತಿರುನಲ್ವೇಲಿ ಗ್ರಾಮಾಂತರದ ಎಸ್ ಪಿ ಆದ ಮೇಲೆ ಸಾಲ ಕೊಟ್ಟು, ಆ ನಂತರ ಜನರ ರಕ್ತ ಹೀರುತ್ತಿದ್ದವರಿಂದ ನೆಮ್ಮದಿ ಕೊಡಿಸಿದ ಶ್ರೇಯ ಇವರದು. ಯಾರಾದರೂ ಆ ರೀತಿ ಹಿಂಸಿಸುತ್ತಿದ್ದರೆ ತನಗೇ ನೇರವಾಗಿ ಫೋನ್ ಮಾಡಿ ತಿಳಿಸಬಹುದು ಎಂದು ತಮ್ಮ ಸಂಪರ್ಕ ಸಂಖ್ಯೆಯನ್ನು ಜನರಿಗೆ ನೀಡಿದವರು. ಮದುರೈನಲ್ಲಿ ಚುನಾವಣೆ ವೇಳೆ ಮಾಡಿದ ಕೆಲಸಕ್ಕೆ ಒಳ್ಳೆ ಹೆಸರು ಬಂತು.

5)ಡಿ ರೂಪಾ

ಕಾರಾಗೃಹ ಡೆಪ್ಯೂಟಿ ಇನ್ ಸ್ಪೆಕ್ಟರ್ ಜನರಲ್ ಅಗಿದ್ದ ರೂಪಾ ಅವರು ಬಯಲು ಮಾಡಿದ್ದು ಎಐಎಡಿಎಂಕೆ ಪ್ರಭಾವಿ ಶಶಿಕಲಾ ನಟರಾಜನ್ ಗೆ ಸಿಗುತ್ತಿದ್ದ ರಾಜಾತಿಥ್ಯವನ್ನು. ಅದಕ್ಕೂ ಮುನ್ನ ಕೂಡ ಪೊಲೀಸ್ ಅಧಿಕಾರಿಯಾಗಿ ರೂಪಾ ಮೌದ್ಗಿಲ್ ಅವರ ದಾಖಲೆ ಚೆನ್ನಾಗಿದೆ. 2004ರಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಉಮಾಭಾರತಿ ಬಂಧನದಿಂದ ಆರಂಭವಾಗುತ್ತದೆ.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಆರ್ಡರ್ಲಿ ಹಾಗೂ ಬೆಂಗಾವಲು ವಾಹನವನ್ನು ತೆಗೆಸಿಹಾಕಿದ್ದು, ಸ್ಥಳೀಯ ರಾಜಕಾರಣಿಗಳ ವಿರೋಧ, ಕಡೆಗೆ ತಮ್ಮ ಹಿರಿಯ ಅಧಿಕಾರಿಯನ್ನು ಎದುರು ಹಾಕಿಕೊಳ್ಳುವ ಧೈರ್ಯ ತೋರಿದವರು ಅವರು. ಹದಿನೇಳು ವರ್ಷದ ವೃತ್ತಿ ಜೀವನದಲ್ಲಿ ಬಹುತೇಕ ಪ್ರತಿ ವರ್ಷವೂ ವರ್ಗಾವಣೆ ಕಂಡ ಅಧಿಕಾರಿ ಇವರು.

ಹಕ್ಕು ಚ್ಯುತಿ ಮಾಡಿದರು ಎಂಬ ಶಾಸಕರ ಆಕ್ಷೇಪಣೆಯ ಕಾರಣಕ್ಕೆ ಹಲವು ಬಾರಿ ಸ್ಪೀಕರ್ ಎದುರು ಹಾಜರಾಗಿದ್ದಾರೆ ರೂಪಾ ಮೌದ್ಗಿಲ್. ಇಂಥ ಅಧಿಕಾರಿಯ ಹೆಸರು ಈಗ ರಾಷ್ಟ್ರ ಮಟ್ಟದಲ್ಲಿ ಮಿಂಚುತ್ತಿದೆ.

6)ಸಂಜುಕ್ತಾ ಪರಾಶರ್

ಅಸ್ಸಾಂನ ಐಪಿಎಸ್ ಅಧಿಕಾರಿ. ಅಸ್ಸಾಂನ ಉಕ್ಕಿನ ಮಹಿಳೆ ಅಂತಲೇ ಹೆಸರುವಾಸಿ. ಈ ಅಧಿಕಾರಿ ಹದಿನೈದು ತಿಂಗಳ ಅವಧಿಯಲ್ಲಿ ಹದಿನಾರು ಬೋಡೋ ಉಗ್ರರನ್ನು ಮತ್ತು ಅರವತ್ತಕ್ಕೂ ಹೆಚ್ಚು ನುಸುಳುಕೋರರ ಹುಟ್ಟಡಗಿಸಿದ್ದಾರೆ. ಬೋಡೋ ಉಗ್ರರಿಗೆ ಸಂಜುಕ್ತಾ ಹೆಸರು ಕೇಳಿದರೆ ನಡುಕ. ರಾಷ್ಟ್ರೀಯ ತನಿಖಾ ದಳದ ನೇತೃತ್ವ ವಹಿಸುವ ಮೂಲಕ ಇವರು ಸುದ್ದಿಯಾದರು. ಮಹಿಳಾ ಸಬಲೀಕರಣಕ್ಕಾಗಿಯೂ ಈಕೆ ಶ್ರಮ ವಹಿಸುತ್ತಿದ್ದಾರೆ. ಅದಕ್ಕಾಗಿ ಮೆಚ್ಚುಗೆ ಪಡೆದಿದ್ದಾರೆ.

7)ಶಿವದೀಪ್ ಲಂಡೆ

ಬಿಹಾರ ಕೇಡರ್ ನ ಈ ಅಧಿಕಾರಿ ಪಾಟ್ನಾದಲ್ಲಿ ಕಾರ್ಯ ನಿರ್ವಹಿಸಿದ ಒಂಬತ್ತೇ ತಿಂಗಳಲ್ಲಿ ನಗರದಲ್ಲಿ ಅಪರಾಧ ತಡೆಯಲು ಕೈಗೊಂಡ ಕ್ರಮಗಳ ಮೂಲಕ ಪತ್ರಿಕೆಗಳಲ್ಲಿ ಶೀರ್ಷಿಕೆ ಆಗಿ ಮಿಂಚಿದರು. ನಗರದ ಮಹಿಳಾ ಕಾಲೇಜುಗಳ ವಿದ್ಯಾರ್ಥಿನಿಯರಿಗೆ ಬರುತ್ತಿದ್ದ ಹಿಂಸೆ ನೀಡುವ ಫೋನ್ ಕರೆಗಳನ್ನು ತಮಗೆ ವರ್ಗಾಯಿಸುವಂತೆ ಹೇಳಿದ್ದರು. ಇವರ ಕಾಲದಲ್ಲಿ ಪಾಟ್ನಾದ ಅಪರಾಧ ಪ್ರಮಾಣ ಕಡಿಮೆ ಆಯಿತು. ಆ ನಂತರ ಅರಾರಿಯಾಗೆ ವರ್ಗಾವಣೆ ಆದರು. ಅಲ್ಲಿಯೂ ರೌಡಿಗಳ ಹುಟ್ಟಡಗಿಸಿದರು. ಈಚೆಗೆ ಅಂತರರಾಜ್ಯ ನಿಯೋಜನೆ ಮೇಲೆ ಮುಂಬೈಗೆ ವರ್ಗಾವಣೆ ಆಗಿದ್ದಾರೆ. ಅಲ್ಲಿಯೂ ತಮ್ಮ ಖಡಕ್ ಕೆಲಸ ಮುಂದುವರಿಸಿದ್ದಾರೆ.

8)ಆರೀಫ್ ಶೇಖ್

ಬಸ್ತಾರ್ ನ ಎಸ್ ಪಿ ಆಗಿರುವ ಆರೀಫ್ ಶೇಖ್ ಗೆ ಪೆನ್ಸಿಲ್ವೇನಿಯಾದ ಪ್ರತಿಷ್ಠಿತ ಪ್ರಶಸ್ತಿ ಸತತವಾಗಿ ಎರಡು ಬಾರಿ ಬಂದಿದೆ. ಬುಡಕಟ್ಟು ಜನಾಂಗ ಹಾಗೂ ಪೊಲೀಸರ ಮಧ್ಯೆ ಉತ್ತಮ ಸಂಪರ್ಕ ಏರ್ಪಡಿಸುವ ಅಮ್ಚೋ ಬಸ್ತಾರ್, ಅಮ್ಚೋ ಪೊಲೀಸ್ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ಬಂತು. ಮಾವೋವಾದಿಗಳು ಮುಖ್ಯವಾಹಿನಿಗೆ ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಮಾವೋ ಬಾಲ ಸಂಘಂನಿಂದ ಕೆಲವು ಮಕ್ಕಳನ್ನು ರಕ್ಷಿಸಲಾಯಿತು.

9)ಅಕೆ ರವಿ ಕೃಷ್ಣ

ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಎಸ್ ಪಿ ಅಕೆ ರವಿಕೃಷ್ಣ. ಕಪತ್ರಲಾ ಗ್ರಾಮವನ್ನು ದತ್ತು ಪಡೆದು, ಅಲ್ಲಿ ನಡೆಯುತ್ತಿದ್ದ ದ್ವೇಷದ ಕೊಲೆಗಳನ್ನು ತಡೆದವರು. ಸರಕಾರಿ ಶಾಲೆಯಲ್ಲಿ ಕೋಣೆಗಳನ್ನು ನಿರ್ಮಿಸುವುದಕ್ಕೆ ಅರವತ್ತು ಲಕ್ಷ ಅನುದಾನ ಬಿಡುಗಡೆ ಮಾಡಿಸಿಕೊಳ್ಳಲಾಗಿದೆ. ಜತೆಗೆ ರಸ್ತೆ ಮುಂತಾದ ಅಗತ್ಯ ಕೆಲಸಗಳನ್ನು ಮಾಡಲಾಗಿದೆ.

10)ಶ್ರೇಷ್ಠಾ ಠಾಕೂರ್

ಉತ್ತರ ಪ್ರದೇಶ ಕೇಡರ್ ನ ಐಪಿಎಸ್ ಅಧಿಕಾರಿ. ಮೋಟಾರ್ ಬೈಕ್ ನ ಅಧಿಕೃತ ದಾಖಲೆಗಳಿಲ್ಲದೆ ಸಿಕ್ಕಿಬಿದ್ದ ಬಿಜೆಪಿ ಕಾರ್ಯಕರ್ತರನ್ನು ಬೆಂಡೆತ್ತುವ ಮೂಲಕ ಸುದ್ದಿಯಾದವರು ಶ್ರೇಷ್ಠಾ ಠಾಕೂರ್. ಒಂದಷ್ಟು ಮಂದಿ ಆಕೆಯನ್ನು ಸುತ್ತುವರಿದು ಹೆದರಿಸುವ ಪ್ರಯತ್ನ ಮಾಡಿದರೂ ಬಗ್ಗದ ಗಟ್ಟಿ ಅಧಿಕಾರಿ. ಸರಕಾರಿ ಕೆಲಸಕ್ಕೆ ಅಡ್ಡಿ ಮಾಡಿದ ಆರೋಪದಲ್ಲಿ ಐವರನ್ನು ಜೈಲಿಗೆ ಅಟ್ಟಿದರು. ಅವರ ಧೈರ್ಯವನ್ನು ದೇಶದಾದ್ಯಂತ ಮೆಚ್ಚಲಾಯಿತು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top