fbpx
ಕನ್ನಡ

ಕುವೆಂಪು ಅವರಿಗೆ  ಕನ್ನಡಲ್ಲೇ ಗೌರವ ಸಲ್ಲಿಸಿದ ಗೂಗಲ್.

 ಕನ್ನಡಲ್ಲೇ ಕುವೆಂಪು ಅವರಿಗೆ ಗೌರವ ಸಲ್ಲಿಸಿದ ಗೂಗಲ್.

 

 

 

ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಭಾಷೆ ಮಿಂಚುತ್ತಿದೆ. ಹೌದು ರಾಷ್ಟ್ರಕವಿ ಕುವೆಂಪು ಅವರ 113ನೇ ಹುಟ್ಟುಹಬ್ಬದ(ಡಿ.29) ಅಂಗವಾಗಿ ಜಗತ್ತಿನ ಪ್ರಸಿದ್ಧ ಅಂತರ್ಜಾಲ ಜಾಲತಾಣ ‘ಗೂಗಲ್’ ಡೂಡಲ್‌ ಕುವೆಂಪು ಅವರಿಗೆ ಗೌರವ ಸಲ್ಲಿಸಿದೆ. ವಿಶೇಷವೆಂದರೆ ಗೂಗಲ್ ಡೂಡಲ್ ತನ್ನ ಮುಖಪುಟದಲ್ಲಿ ಕುವೆಂಪು ಅವರ ಭಾವಚಿತ್ರವನ್ನ ಭಿತ್ತರಿಸುವ ಮತ್ತು ಕನ್ನಡದಲ್ಲೇ ಡೂಡಲ್ ಅಕ್ಷರಗಳನ್ನು ಬರೆದು ವಿನ್ಯಾಸಗೊಳಿಸಿ ಕನ್ನಡಕ್ಕೆ ಮತ್ತು ಕುವೆಂಪು ಅವರಿಗೆ ಗೌರವ ಸಲ್ಲಿಸಿದೆ.

 

 

 

ಉಪಮನ್ಯು ಭಟ್ಟಾಚಾರ್ಯ ಎಂಬುವವರು ಈ ಸುಂದರವಾದ ಡೂಡಲ್‌ ವಿನ್ಯಾಸಗೊಳಿಸಿದ್ದು ಕುವೆಂಪು ಅವರಿಗೆ ಬಲು ಇಷ್ಟವಾದ ಮಲೆನಾಡಿನ ಮಡಿಲ ಮದ್ಯದಲ್ಲಿ ಒಂದು ಬಂಡೆಯ ಮೇಲೆ ಕುಳಿತು ಬರೆಯುದರಲ್ಲಿ ಮಗ್ನವಾಗಿರುವ ಕುವೆಂಪು ಅವರ ಚಿತ್ರವನ್ನು ಚಿತ್ರಿಸಲಾಗಿದ್ದು ಚಿತ್ರದ ಹಿಂಬಾಗದಲ್ಲಿ ಗೂಗಲ್ ಎಂದು ಕನ್ನಡಲ್ಲಿಯೇ ಬರೆಯಲಾಗಿದೆ.

 

 

 

ತಮ್ಮ ‘ಶ್ರೀ ರಾಮಾಯಣ ದರ್ಶನಂ’ ಕೃತಿಯಿಂದ ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಕುವೆಪು ರಾಜ್ಯ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಪದ್ಮಭೂಷಣ, ಪಂಪ ಪ್ರಶಸ್ತಿ ಸೇರಿ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.ಕನ್ನಡ ಸಾಹಿತ್ಯ ಕ್ಷೇತ್ರವನ್ನು ಉತ್ತುಂಗಕ್ಕೆ ಕೊಂಡೊಯ್ದವರಲ್ಲಿ ಪ್ರಮುಖರಾಗಿರುವ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅರ್ಥಾತ್ ಕುವೆಂಪು ಅವರ ಜನುಮದಿನದ ಈ ಸಂದರ್ಭದಲ್ಲಿ ಗೂಗಲ್​ ಅವರಿಗೆ ಗೌರವ ಸಲ್ಲಿಸಿರುವುದು ಕನ್ನಡಿಗರಾದ ನಮಗೆಲ್ಲರಿಗೂ ಹೆಮ್ಮೆ ತರುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top