fbpx
ಕಿರುತೆರೆ

ಹರಹರ ಮಹಾದೇವ ಧಾರಾವಾಹಿಯನ್ನು ಅರ್ಧಕ್ಕೆ ನಿಲ್ಲಿಸಿದ ಸ್ಟಾರ್ ಸುವರ್ಣ! ಕಾರಣ ಏನು ಗೊತ್ತಾ?

ಹರಹರ ಮಹಾದೇವ ಧಾರಾವಾಹಿಯನ್ನು ಅರ್ಧಕ್ಕೆ ನಿಲ್ಲಿಸಿದ ಸ್ಟಾರ್ ಸುವರ್ಣ! ಕಾರಣ ಏನು ಗೊತ್ತಾ?

 

 

ಸ್ಟಾರ್ ಸುವರ್ಣ ಚಾನೆಲ್ ನಲ್ಲಿ ಪ್ರಸಾರವಾಗುತ್ತಿದ್ದ ಪೌರಾಣಿಕ ಧಾರಾವಾಹಿ ‘ಹರ ಹರ ಮಹಾದೇವ’ ಗೆ ವಾಹಿನಿ ಗೇಟ್ ಪಾಸ್ ಕೊಟ್ಟಿದೆ. ‘ದೇವೊಂಕಿ ದೇವ್ ಮಹಾದೇವ್’ ಹೆಸರಿನಲ್ಲಿ ಹಿಂದಿಯಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿಯ ಕನ್ನಡ ಅವತರಿಣಿಕೆಯಾಗಿರುವ ಈ ಧಾರಾವಾಹಿ ಇದೇ ಜನವರಿ 12ರಿಂದಾಚೆಗೆ ಸ್ಟಾರ್ ಸುವರ್ಣ ಚಾನೆಲ್ ನಲ್ಲಿ ಪ್ರಸಾರವಾಗೋದಿಲ್ಲ. ಇದ್ದಕ್ಕಿದ್ದ ಹಾಗೇ ಯಾಕೆ ಈ ಧಾರವಾಹಿಯನ್ನು ನಿಲ್ಲಿಸುತ್ತಿದ್ದಾರೆ ಗೊತ್ತಾ? ಮುಂದೆ ಓದಿ

 

 

ಕಿರುತೆರೆಯಲ್ಲಿ ಹೊಸ ಪ್ರಯತ್ನದೊಂದಿಗೆ ಅದ್ದೂರಿ ವೆಚ್ಚದ ಸೆಟ್ ಗಳು ಗ್ರಾಫಿಕ್ಸ್ ನೊಂದಿಗೆ ನಿರ್ಮಾಣವಾಗಿದ್ದ ಹರಹರ ಮಹಾದೇವಾ ಧಾರಾವಾಹಿ ಇಷ್ಟು ದಿನ ಯಶಸ್ವಿಯಾಗಿ ಪ್ರಸಾರವಾಗುತ್ತಿತ್ತು. ಪ್ರಾರಂಭದಲ್ಲಿ ಇದನ್ನ ವೀಕ್ಷಕರು ಕೂಡ ತುಂಬಾ ಮೆಚ್ಚಿಕೊಂಡಿದ್ದರು. ಆದರೆ ದಿನ ಕಳೆದಂತೆ ಈ ಧಾರಾವಾಹಿಯನ್ನು ನೋಡುವ ಜನರ ಸಂಖ್ಯೆ ಕಡಿಮೆಯಾಗುತ್ತಾ ಬಂದಂತೆ ಧಾರಾವಾಹಿಯ ಟಿ.ಆರ್.ಪಿ ಕೂಡ ಕುಸಿದಿದೆ. ಈಗ ಧಾರಾವಾಹಿಯ ಟಿ.ಆರ್.ಪಿ ರೇಟಿಂಗ್ಸ್ ಏರದೆ ಧಾರಾವಾಹಿಯ ತಂಡ ಕಂಗಾಲಾಗಿದೆ.

 

 

ಟಿ.ಆರ್.ಪಿ ಇಲ್ಲದ ಕಾರಣ ಬೇಸರಗೊಂಡ ಸ್ಟಾರ್ ಸುವರ್ಣ ಚಾನೆಲ್ ಈ ಧಾರಾವಾಹಿಯ ಪ್ರಸಾರವನ್ನು ಜನವರಿ 12 ಕ್ಕೆ ನಿಲ್ಲಿಸಲಾಗುತ್ತದೆ ಎಂದು ಹೇಳಿದೆ. ಕಿರುತೆರೆಯ ವಾಹಿನಿಗಳಲ್ಲಿ ಇತ್ತೀಚಿಕೆ ಬಿಗ್ ಬಾಸ್, ಕಾಮಿಡಿ ಷೋ, ಸಿಂಗಿಂಗ್ ಷೋಗಳು ಸೇರಿ ಅನೇಕ ರಿಯಾಲಿಟಿ ಶೋಗಳು ಹೆಚ್ಚಾಗಿರುವುದರಿಂದ ಧಾರಾವಾಹಿಗಳಿಗೆ ಅದರಲ್ಲೂ ಇಂತಹ ಪೌರಾಣಿಕ ಧಾರಾವಾಹಿಗೆ ವೀಕ್ಷಕರ ಸಂಖ್ಯೆ ಬಹಳ ಕಮ್ಮಿಯಾಗಿಬಿಟ್ಟಿದೆ. ರಿಯಾಲಿಟಿ ಶೋಗಳ ಹಾವಳಿಯ ಮುಂದೆ ಇಂತಹ ಪೌರಾಣಿಕ ಧಾರಾವಾಹಿಗಳ ಪಾಡು ಹೀನಾಯವಾಗಿಬಿಟ್ಟಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top