fbpx
ಕಿರುತೆರೆ

ಬಿಗ್ ಬಾಸ್ ಮನೆಯಲ್ಲಿರುವಾಗಲೇ ಚಂದನ್ ಶೆಟ್ಟಿಗೆ ಗಾಂಧಿನಗರದಿಂದ ಬಂತು ಬಿಗ್ ಆಫರ್.

ಬಿಗ್ ಬಾಸ್ ಮನೆಯಲ್ಲಿರುವಾಗಲೇ ಚಂದನ್ ಶೆಟ್ಟಿಗೆ ಗಾಂಧಿನಗರದಿಂದ ಬಂತು ಬಿಗ್ ಆಫರ್.

 

 

 

ಈ ಭಾರಿಯ ಬಿಗ್ ಬಾಸ್ ಕಾರ್ಯಕ್ರಮದ ಬಲಿಷ್ಠ ಸ್ಪರ್ದಿಗಳಲ್ಲಿ ಒಬ್ಬರಾದ ಚಂದನ್ ಶೆಟ್ಟಿ ಬಿಗ್ ಬಾಸ್ ಒಳಗೆ ಮತ್ತು ಹೊರಗೆ ಎಲ್ಲರಿಗೂ ಇಷ್ಟವಾಗಿದ್ದಾರೆ. ಕೈಗೆ ಸಿಕ್ಕ ವಸ್ತುಗಳನ್ನೇ ಸಂಗೀತ ಸಂಯೋಜನೆಗೆ ಉಪಕರಣಗಳನ್ನಾಗಿ ಉಪಯೋಗಿಸಿಕೊಂಡು, ಸ್ಥಳದಲ್ಲೇ ರ‍್ಯಾಪ್‌ ಸಾಂಗ್‌ ಮಾಡುವ ಚಂದನ್‌ ಟ್ಯಾಲೆಂಟ್‌ಗೆ ಎಲ್ಲರೂ ಫಿದಾ ಆಗಿದ್ದಾರೆ..

 

 

ಚಂದನ್ ಅವರು ಇನ್ನೂ ಬಿಗ್ ಬಾಸ್ ಮನೆಯಲ್ಲಿಯೇ ಇರುವಾಗ ಅವರಿಗೆ ದೊಡ್ಡ ಆಫರ್ ಬಂದಿದೆ, ಆಫರ್ ಅಂದ್ರೆ ಹಾಡು ಹಾಡಲೋ, ಅಥವಾ ಬರೆಯಲೋ ಅಲ್ಲಾ ಬದಲಾಗಿ ಹೀರೋ ಆಗಿ. ಹೌದು ಚಂದನ್ ಶೆಟ್ಟಿ ಸದ್ಯದಲ್ಲೇ ನಾಯಕನಾಗಿ ಮಿಂಚಲಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರ ಬಂದ ಕೂಡಲೇ ಚಿತ್ರವೊಂದರಲ್ಲಿ ಹೀರೋ ಆಗಿ ನಟಿಸಲಿದ್ದಾರೆ ಚಂದನ್.

 

 

‘ಸಂಗಮ’, ‘ಜೈ ಭಜರಂಗಬಲಿ’ ಸಿನಿಮಾಗಳನ್ನು ನಿರ್ದೇಶಿಸಿದ್ದ ರವಿವರ್ವ ಗುಬ್ಬಿ ಅವರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಈಗಾಗಲೇ ಚಿತ್ರಕ್ಕೆ ಸ್ಕ್ರೀನ್ ಪ್ಲೆ ಬರೆದಿರುವ ರವಿವರ್ಮ ಬಿಗ್ ಬಾಸ್ ನಿಂದ ಚಂದನ್ ಹೊರಬರುತ್ತಿದ್ದಂತೆಯೇ ಚಿತ್ರಕ್ಕೆ ಚಾಲನೆ ಕೊಡುತ್ತಾರಂತೆ. ಚಿತ್ರದಲ್ಲಿ ಚಂದನ್ ಗೆ ನಾಯಕಿಯಾಗಿ ‘ವಾಸು ನಾನ್ ಪಕ್ಕಾ ಕಮರ್ಷಿಯಲ್’ ಹಾಗೂ ಅಮ್ಮಾ ಐ ಲವ್ ಯೂ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿರುವ ನಿಶ್ವಿಕಾ ನಾಯ್ಡು ನಟಿಸಲಿದ್ದಾರಂತೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top