ತಿಂಡಿ ತೀರ್ಥ

ಉತ್ತರ ಕರ್ನಾಟಕದ ಕಡೆ ಹಬ್ಬ-ಹುಣ್ಣಿಮೆ-ಅಮಾವಾಸ್ಯೆ ದಿನ ಮಾಡುವ ಸಿಹಿ ಅಡುಗೆ – ಸಜ್ಜಕದ ಹೋಳಿಗೆ ಮಾಡುವ ವಿಧಾನ.

ಉತ್ತರ ಕರ್ನಾಟಕದ ಕಡೆ ಹಬ್ಬ-ಹುಣ್ಣಿಮೆ-ಅಮಾವಾಸ್ಯೆ ದಿನ ಮಾಡುವ ಸಿಹಿ ಅಡುಗೆ – ಸಜ್ಜಕದ ಹೋಳಿಗೆ ಮಾಡುವ ವಿಧಾನ.

ಕಣಕ ಮಾಡಲು ಬೇಕಾದ ಪದಾರ್ಥಗಳು:

1 ಲೋಟ ಚಿರೋಟಿ ರವೆ

1 ಲೋಟ ಗೋದಿ ಹಿಟ್ಟು

1 ಲೋಟ ಮೈದಾ ಹಿಟ್ಟು

ಸ್ವಲ್ಪ ನೀರು ಸೇರಿಸಿ ಚಪಾತಿ ಹಿಟ್ಟಿನಗಿಂತ ಸ್ವಲ್ಪ ತೆಳುವಾಗಿ ಹಿಟ್ಟು ಕಲಸಿ ಒಂದು ತಾಸು ನೆನೆಯಲು ಬಿಡಿ

 

Image result for ಸಜ್ಜಕದ ಹೋಳಿಗೆ

ಹೂರಣ ಮಾಡಲು ಬೇಕಾದ ಪದಾರ್ಥಗಳು:

4 ಲೋಟ ನೀರು

2 ಲೋಟ ಬನ್ಸಿರವೆ

2 ಲೋಟ ಬೆಲ್ಲ

4 ಏಲಕ್ಕಿ

2 ಚಮಚ ಗಸಗಸೆ

Image result for sajjakada holige

ಮಾಡುವ ಬಗೆ:

ನೀರು ಕಾಯಲು ಇಟ್ಟು, ಬೆಲ್ಲ ಹಾಕಿರಿ

ಬೆಲ್ಲ ಕರಗಿ ಒಂದು ಕುದಿ ಬಂದ ನಂತರ ಬನ್ಸಿರವೆ ಹಾಕಿ ಚೆನ್ನಾಗಿ ತಿರುಗಿಸಿ

ಬನ್ಸಿರವೆ-ಬೆಲ್ಲದ ಮಿಶ್ರಣ ಸ್ವಲ್ಪ ಗಟ್ಟಿ ಆಗುತ್ತಿರುವಂತೆ ಗ್ಯಾಸ್ ಆರಿಸಿರಿ

ಬಿಸಿ ತಗ್ಗಿದ ಮೇಲೆ, ಕೈಗೆ ನೀರು ಹಚ್ಚಿಕೊಂಡು ಬನ್ಸಿರವೆ-ಬೆಲ್ಲದ ಮಿಶ್ರಣಕ್ಕೆ ಏಲಕ್ಕಿ ಪುಡಿ, ಗಸಗಸೆ ಸೇರಿಸಿ, ಚೆನ್ನಾಗಿ ನಾದಿಕೊಂಡು ಹೋಳಿಗೆಗೆ ತುಂಬಲು ಹೂರಣದ ಉಂಡೆ ಮಾಡಿ ಇಟ್ಟುಕೊಳ್ಳಿ.

ಕಣಕದ ಹಿಟ್ಟು ಸ್ವಲ್ಪ ತೆಗೆದುಕೊಂಡು ದುಂಡಾಗಿ ಚಪ್ಪಟೆ ಮಾಡಿ ಹೂರಣ ತುಂಬಿ, ಹೋಳಿಗೆ ಲಟ್ಟಿಸಿರಿ.

ಕಾದ ತವೆ ಮೇಲೆ ಸ್ವಲ್ಪ ಎಣ್ಣೆ ಹಾಕಿ ಹೋಳಿಗೆಯ ಎರಡೂ ಬದಿ ಬೇಯಿಸಿರಿ.

ಸಜ್ಜಕದ ಹೋಳಿಗೆ ತುಪ್ಪದ ಜೊತೆ ಸವಿಯಿರಿ 🙂

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top