ವಿಶೇಷ

ಈ ವ್ಯಕ್ತಿಯ ಕೂದಲು ನಿಂತಿರೋದು ಏಕೆ ಅಂತ ತಿಳ್ಕೊಳ್ಳಿ .

ಈ ವ್ಯಕ್ತಿಯ ಕೂದಲು ನಿಂತಿರುವುದು ಏಕೆ ಅಂತ ತಿಳ್ಕೊಳ್ಳಿ .

 

 

 

ರಂಗಾಯಣ ರಘು ಅವರ ‘ಪೌಡ್ರು ಹಾಕೊಳ್ಳಿ ತಲೆ ಬಾಚ್ಕೊಳ್ಳಿ’ ಡೈಲಾಗ್ ಕನ್ನಡದಲ್ಲಿ ಬೇಜಾನ್ ಪಾಪ್ಯುಲರ್. ಆದರೆ ಈ ಮಾತುಗಳು ಶಿಲಾಹ್ ಕಾಲ್ವರ್ಟಿನ್‍ಳ ಮುಂದೆ ನಡೆಯದು. ಎಷ್ಟೇ ತಿಕ್ಕಿ-ತೀಡಿದರೂ ಅವಳ ಕೂದಲು ಶಾಶ್ವತವಾಗಿ ನಿಮಿರಿರುತ್ತದೆ.

ಎಣ್ಣೆ ಹಚ್ಚಿ, ನೀರು ಬಳಿದು ತಲೆ ಬಾಚಬಹುದಲ್ಲಾ?

ಹೌದು. ಕೆಲವು ಕ್ಷಣ ಸರಿಯಿರಲಿದೆ. ನಂತರ ನಾಯಿ ಬಾಲ ಡೊಂಕು ಎನ್ನುವಂತೆ ಇವಳ ಕೂದಲು ನೆಟ್ಟಗಾಗುತ್ತದೆ! ಒಂದು ರೀತಿಯಲ್ಲಿ ಇವಳು ಬೆದರಿದ ಕೂದಲ ವಿಜ್ಞಾನಿ ಐನ್‍ಸ್ಟೈನ್‍ಳನ್ನು ಹೋಲುತ್ತಾಳೆ!

ಕಾಷ್ಟದಂತ ಕೂದಲಿನ 7ರ ಕೂಸು ಆಸ್ಟ್ರೇಲಿಯಾದ ಮೆಲ್ಬೋರ್ನ್‍ನಲ್ಲಿದ್ದಾಳೆ.

 

 

 

ಅಲ್ಲಾ ಪುಟ್ಟಿ ಹೀಗೆ ನಿಮಿರಿದ ಕಾಷ್ಟದ ಕೂದಲು ನಿನಗೆ ಕಷ್ಟವಾಗಿಲ್ವಾ? ‘ಖಂಡಿತ ಇಲ್ಲ…ಬದಲಿಗೆ ಪ್ರತಿಯೊಬ್ಬರಿಗೂ ನನ್ನ ಹೆಸರು ಗೊತ್ತಾಗಿದೆ. ಶಾಲೆಯಲ್ಲಿ ನಮ್ಮ ರಸ್ತೆಯಲ್ಲಿ ನಾನು ಫೇಮಸ್’ ಎನ್ನುತ್ತಾಳೆ ಈ ಪೋರಿ. ಮಕ್ಕಳು ರೇಗಿಸಿದಾಗ, ತಮಾಷೆ ಮಾಡಿದಾಗ ಸಹೋದರ ಸಹಾಯಕ್ಕೆ ಬರುತ್ತಾನೆ ಎನ್ನುವಳು.

ವೈದ್ಯರ ಸಲಹೆ ಏನು?

 

 

ಹೌದು… ಹಲವು ವೈದ್ಯರ/ತಜ್ಞ ವೈದ್ಯರ ಸ¯ಹೆ ಪಡೆಯಲಾಗಿದೆ. ಅವರ ಅಭಿಪ್ರಾಯದಲ್ಲಿ ಇದೊಂದು ವಿಲಕ್ಷಣವಂತೆ. ಪಿಎಡಿ13, ಟಿಜಿಎಂ3, ಟಿಸಿಹೆಚ್‍ಹೆಚ್‍ಗಳೆಂಬ ಜೀನ್ಸ್‍ಗಳಲ್ಲಿನ ರೂಪಾಂತರವೇ ಈ ಅವಾಂತರಕ್ಕೆ ಕಾರಣ ಎನ್ನುತ್ತಾರೆ. ಗುಣಪಡಿಸಲಾಗದಂತೆ. ಜೀವನದ ಉದ್ದಕ್ಕೂ ಇರಲಿದೆಯಂತೆ. ಕೂದಲು ಹೇಗಾದರೂ ಇರ್ಲಿ… ಮಗು ಆರೋಗ್ಯವಾಗಿದೆ. ಕಲಿಕೆಯಲ್ಲಿ ಚುರುಕು ಎನ್ನುತ್ತಾಳೆ ತಾಯಿ ಶಿಲಾಹಿನ್.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top