fbpx
ಮನೋರಂಜನೆ

2017ರ ಅತ್ಯುತ್ತಮ ಛಾಯಾಗ್ರಾಹಕ : ಕಿರಣ್ ಹಂಪಾಪುರ ( ಬ್ಯುಟಿಫುಲ್ ಮನಸುಗಳು )

2017ರ ಅತ್ಯುತ್ತಮ ಛಾಯಾಗ್ರಾಹಕ : ಕಿರಣ್ ಹಂಪಾಪುರ ( ಬ್ಯುಟಿಫುಲ್ ಮನಸುಗಳು )

ಇದನ್ನು ಪ್ರಶಸ್ತಿ ಅನ್ನಬೇಕಾ? ಗೌರವದ ಕಾಣಿಕೆ ಅನ್ನಬೇಕಾ ಎಂಬುದು ಓದುಗರಿಗೆ ಬಿಟ್ಟದ್ದು. ಆದರೆ ಒಂದು ವರ್ಷದ ಅಷ್ಟೂ ಚಿತ್ರಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ, ಪ್ರತಿಭೆಯಿಂದ ಪ್ರೇಕ್ಷಕರ ಮನ ಗೆದ್ದ, ಕ್ರಿಯೇಟಿವಿಟಿಯಿಂದ ಗಮನ ಸೆಳೆದವರನ್ನು ವರ್ಷದ ಕೊನೆಯಲ್ಲಿ ನೆನೆಸಿಕೊಂಡು ಗೌರವಿಸೋ ಮಹದಾಸೆಯಿಂದ ಸಿನಿಬಜ಼್ ಸ್ಟಾರ್ ಆಫ್ ದಿ ಇಯರ್ -2017 ರೂಪಿಸಲ್ಪಟ್ಟಿದೆ. ಒಂದು ಸಿನಿಮಾ ರೂಪುಗೊಳ್ಳಬೇಕೆಂದರೆ ಅದರ ವಿವಿಧ ವಿಭಾಗಗಳಲ್ಲಿ ಹಲವು ಮಂದಿ ಕೆಲಸ ಮಾಡಿರುತ್ತಾರೆ. ಅದನ್ನೇ ಉಸಿರಾಡಿರುತ್ತಾರೆ. ಅಂಥಾ ಎಲ್ಲಾ ವಿಭಾಗಗಳನ್ನೂ ಜಾಲಾಡಿ ಒಬ್ಬೊಬ್ಬರನ್ನು ಗೌರವಿಸೋ ಪ್ರಯತ್ನವನ್ನು ನಾವು ಮಾಡಿದ್ದೇವೆ. ಇದರಾಚೆಗೆ ಈ ಪುರಸ್ಕಾರಕ್ಕೆ ಪಾತ್ರರಾಗೋ ಅರ್ಹತೆ ಇರುವವರು ಖಂಡಿತಾ ಇದ್ದಾರೆ. ಆದರೆ ಒಂದು ಮಿತಿಯೊಳಗೆ ಗೌರವವನ್ನಿಲ್ಲಿ ಕೊಡಮಾಡಿದ್ದೇವೆ…
ನಮ್ಮ ಆಯ್ಕೆಯ ಒಬ್ಬೊರ ಹೆಸರೂ ಒಂದೊಂದು ಪೋಸ್ಟ್ ಮೂಲಕ ಇಲ್ಲಿ ಅನಾವರಣಗೊಳ್ಳಲಿದೆ…

 

 

ಕ್ಯಾಮೆರಾವನ್ನು ಕುಂಚದಂತೆ ಬಳಸಿ ಮೈ ನವಿರೇಳಿಸೋ ದೃಷ್ಯಗಳನ್ನು ಸೆರೆ ಹಿಡಿಯುವ ಪ್ರತಿಭಾವಂತ ಛಾಯಾಗ್ರಾಹಕ ಕಿರಣ್ ಹಂಪಾಪುರ. ಇವರ ಕೈಚಳಕದಲ್ಲಿ ದೃಷ್ಯಗಳೂ ಪಾತ್ರಗಳಾಗುತ್ತವೆ. ಜಯತೀರ್ಥ ನಿರ್ದೇಶನದ ಬ್ಯೂಟಿಫುಲ್ ಮನಸುಗಳು ಚಿತ್ರದ ಮೂಲಕ ಹಂಪಾಪುರ ಅವರ ಕ್ಯಾಮೆರಾ ಕುಸುರಿ ವ್ಯಾಪಕವಾಗಿ ಮೆಚ್ಚುಗೆ ಗಳಿಸಿಕೊಂಡಿದೆ. ಲೈಟ್ ಬಾಯ್ ಆಗಿದ್ದುಕೊಂಡು ಹಂತ ಹಂತವಾಗಿ ಪ್ರತಿಭೆಯಿಂದಲೇ ಲೈಮ್‌ಲೈಟಿಗೆ ಬಂದಿರೋ ಕಿರಣ್ ಹಂಪಾಪುರ ಇದೀಗ ಬಹುಬೇಡಿಕೆಯಲ್ಲಿರೋ ಛಾಯಾಗ್ರಾಹಕ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top