fbpx
ಮನೋರಂಜನೆ

2017ರ ಅತ್ಯುತ್ತಮ ಸಂಗೀತ : ಅನೂಪ್ ಸೀಳಿನ್ ( ದಯವಿಟ್ಟು ಗಮನಿಸಿ )

2017ರ ಅತ್ಯುತ್ತಮ ಸಂಗೀತ : ಅನೂಪ್ ಸೀಳಿನ್ ( ದಯವಿಟ್ಟು ಗಮನಿಸಿ )

 

 

ಇದನ್ನು ಪ್ರಶಸ್ತಿ ಅನ್ನಬೇಕಾ? ಗೌರವದ ಕಾಣಿಕೆ ಅನ್ನಬೇಕಾ ಎಂಬುದು ಓದುಗರಿಗೆ ಬಿಟ್ಟದ್ದು. ಆದರೆ ಒಂದು ವರ್ಷದ ಅಷ್ಟೂ ಚಿತ್ರಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ, ಪ್ರತಿಭೆಯಿಂದ ಪ್ರೇಕ್ಷಕರ ಮನ ಗೆದ್ದ, ಕ್ರಿಯೇಟಿವಿಟಿಯಿಂದ ಗಮನ ಸೆಳೆದವರನ್ನು ವರ್ಷದ ಕೊನೆಯಲ್ಲಿ ನೆನೆಸಿಕೊಂಡು ಗೌರವಿಸೋ ಮಹದಾಸೆಯಿಂದ ಸಿನಿಬಜ಼್ ಸ್ಟಾರ್ ಆಫ್ ದಿ ಇಯರ್ -2017 ರೂಪಿಸಲ್ಪಟ್ಟಿದೆ. ಒಂದು ಸಿನಿಮಾ ರೂಪುಗೊಳ್ಳಬೇಕೆಂದರೆ ಅದರ ವಿವಿಧ ವಿಭಾಗಗಳಲ್ಲಿ ಹಲವು ಮಂದಿ ಕೆಲಸ ಮಾಡಿರುತ್ತಾರೆ. ಅದನ್ನೇ ಉಸಿರಾಡಿರುತ್ತಾರೆ. ಅಂಥಾ ಎಲ್ಲಾ ವಿಭಾಗಗಳನ್ನೂ ಜಾಲಾಡಿ ಒಬ್ಬೊಬ್ಬರನ್ನು ಗೌರವಿಸೋ ಪ್ರಯತ್ನವನ್ನು ನಾವು ಮಾಡಿದ್ದೇವೆ. ಇದರಾಚೆಗೆ ಈ ಪುರಸ್ಕಾರಕ್ಕೆ ಪಾತ್ರರಾಗೋ ಅರ್ಹತೆ ಇರುವವರು ಖಂಡಿತಾ ಇದ್ದಾರೆ. ಆದರೆ ಒಂದು ಮಿತಿಯೊಳಗೆ ಗೌರವವನ್ನಿಲ್ಲಿ ಕೊಡಮಾಡಿದ್ದೇವೆ…
ನಮ್ಮ ಆಯ್ಕೆಯ ಒಬ್ಬೊರ ಹೆಸರೂ ಒಂದೊಂದು ಪೋಸ್ಟ್ ಮೂಲಕ ಇಲ್ಲಿ ಅನಾವರಣಗೊಳ್ಳಲಿದೆ…

 

 

ಕೇಳುಗರ ಎದೆಯಲ್ಲಿ ನಾನಾ ಭಾವದ ವೀಣೆ ನುಡಿಸುವಂಥಾ ಚೆಂದದ ಹಾಡುಗಳ ಮೂಲಕವೇ ಚಿರಪರಿಚಿತರಾಗಿರುವವರು ಸಂಗೀತ ನಿರ್ದೇಶಕ ಅನೂಪ್ ಸೀಳಿನ್. ಒಂದು ಚಿತ್ರವನ್ನು ಒಪ್ಪಿಕೊಂಡರೆ ತಪಸ್ಸಿನಂತೆ ಕೆಲಸ ಮುಗಿಸಿಕೊಡುವ, ಪ್ರತೀ ಚಿತ್ರದಲ್ಲಿಯೂ ಹೊಸಾ ಫೀಲ್ ಹುಟ್ಟಿಸುವಂಥಾ ಸಂಗೀತ ಸೃಷ್ಟಿಸುವ ಅನೂಪ್ ಈ ವರ್ಷ ದಯವಿಟ್ಟು ಗಮನಿಸಿ ಚಿತ್ರದ ಮೂಲಕ ಎಲ್ಲರ ಗಮನವನ್ನು ತಮ್ಮತ್ತ ಸೆಳೆದುಕೊಂಡಿದ್ದಾರೆ. ಯಾವತ್ತಿಗೂ ಗುನುಗುವಂಥಾ, ಎಲ್ಲರೊಳಗಿನ ಏಕಾಂತಕ್ಕೆ, ತಲ್ಲಣಕ್ಕೆ, ಖುಷಿಗೆ ಸಾಥ್ ನೀಡುವಂಥಾ ಎವರ್‌ಗ್ರೀನ್ ಹಾಡುಗಳ ಸೃಷ್ಟಿಕರ್ತ ಅನೂಪ್ ಸೀಳಿನ್ ಕನ್ನಡ ಚಿತ್ರರಂಗದ ಮುಖ್ಯ ಸಂಗೀತ ನಿರ್ದೇಶಕರಲ್ಲೊಬ್ಬರು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top