fbpx
ಕಿರುತೆರೆ

ಈ ವಾರ ಬಿಗ್ ಬಾಸ್’ನಿಂದ ಹೊರಹೋಗಲು ಬರೋಬ್ಬರಿ ಆರು ಮಂದಿ ಸದಸ್ಯರು ನಾಮಿನೇಟ್.

ಈ ವಾರ ಬಿಗ್ ಬಾಸ್’ನಿಂದ ಹೊರಹೋಗಲು ಬರೋಬ್ಬರಿ ಆರು ಮಂದಿ ಸದಸ್ಯರು ನಾಮಿನೇಟ್.

 

 

 

ಯಶಸ್ವಿ ಹನ್ನೊಂದು ವಾರಗಳನ್ನು ಮುಗಿಸಿ ಹನ್ನೆರೆಡನೆ ವಾರಕ್ಕೆ ಕಾಲಿಟ್ಟಿರುವ ಬಿಗ್ ಬಾಸ್ ಸೀಸನ್ 5ನಲ್ಲಿ ದಿನಕಳೆದಂತೆ ಕುತೂಹಲ ಹೆಚ್ಚಿಸುತ್ತಿದೆ. ಮನೆಗೆ ಎಂಟ್ರಿಕೊಟ್ಟಿದ್ದ 18 (2 ವೈಲ್ಡ್ ಕಾರ್ಡ್ ಎಂಟ್ರಿ)ಜನ ಸ್ಪರ್ಧಿಗಳ ಪೈಕಿ ಈಗಾಗಲೇ 10(ದಿವಾಕರ್ ಸೀಕ್ರೆಟ್ ರೂಮ್ ನಲ್ಲಿದ್ದಾರೆ) ಮಂದಿ ಮನೆಯಿಂದ ಹೊರ ಹೋಗಿದ್ದು ಈಗ ಕೇವಲ 8 ಜನ ಸದಸ್ಯರಷ್ಟೇ ಬಿಗ್ ಬಾಸ್ ಮನೆಯ ಮುಖ್ಯ ಮನೆಯಲ್ಲಿ ಉಳಿದುಕೊಂಡಿದ್ದಾರೆ.

 

 

 

ವಾರದಿಂದ ವಾರಕ್ಕೆ ನಾಮಿನೇಷನ್ ಪ್ರಕ್ರಿಯೆಯನ್ನು ವಿಭಿನ್ನವಾಗಿ ನಡೆಸುತ್ತಿರುವ ಬಿಗ್ ಬಾಸ್ ಈ ವಾರ ಯಾವುದೇ ಟ್ವಿಸ್ಟ್ ಇಲ್ಲದೇ ಸೀದಾ ಸೀದಾ ನಾಮಿನೇಷನ್. ಎಂದಿನಂತೆ ಒಬ್ಬೊಬ್ಬ ಸದಸ್ಯರನ್ನು ಕನ್ಫೆಷನ್ ರೂಮ್ ಗೆ ಕರೆದು ನಾಮಿನೇಷನ್ ಪ್ರಕ್ರಿಯೆ ನಡೆಸಲಾಯಿತು. ಈ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಪ್ರತಿ ಸದಸ್ಯನು ತಾವು ಮನೆಯಿಂದ ಹೊರಹಾಕಲು ಇಚ್ಛಿಸುವ ಎರಡು ಸದಸ್ಯರನ್ನು ಬಿಗ್ ಬಾಸ್ ಗೆ ತಿಳಿಸಬೇಕಾಗಿತ್ತು. ಆದರೆ ದಿವಾಕರ್ ನಿಂದ ವಿಶೇಷ ಅಧಿಕಾರವನ್ನು ಪಡೆದಿದ್ದ ರಿಯಾಜ್ ಮಾತ್ರ ನಾಲ್ಕು ಮತಗಳನ್ನು ಚಲಾಯಿಸಬಹುದಿತ್ತು.

 

 

 

ಅದರಂತೆ ಸದಸ್ಯರ ಆಯ್ಕೆಯ ಅನುಸಾರ ನಿವೇದಿತಾ, ಜಯರಾಮ್ ಕಾರ್ತಿಕ್, ರಿಯಾಜ್, ಶ್ರುತಿ ಮತ್ತು ಕೃಷಿ ನಾಮಿನೇಟ್ ಆದರು. ಈ ವಾರ ಮನೆಯ ಕ್ಯಾಪ್ಟನ್ ಆಗಿದ್ದ ಸಮೀರಾಚಾರ್ಯ ಅವರು ಅನುಪಮಾ ಅವರನ್ನು ನೇರವಾಗಿ ನಾಮಿನೇಟ್ ಮಾಡಿದರೆ. ಅಲ್ಲಿಗೆ ಮನೆಯಿಂದ ಈವಾರ ಹೊರಹೋಗಲು ಬರೋಬ್ಬರಿ ಆರು ಜನ ನಾಮಿನೇಟ್ ಆಗಿದ್ದಾರೆ. ಈ ಪೈಕಿ ಯಾವ ಸದಸ್ಯರನ್ನು ಮನೆಯಲ್ಲಿ ಉಳಿಸಲು ಬಯಸುತ್ತೀರಿ ಮತ್ತು ಯಾರನ್ನು ಹೊರ ಕಳುಹಿಸಲು ಇಷ್ಟ ಪಡುತ್ತೀರಿ ಎಂದು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top