fbpx
ಮನೋರಂಜನೆ

ಬಾಕ್ಸ್ ಆಫೀಸ್’ನಲ್ಲಿ ಚಮತ್ಕಾರ ಮಾಡಿದ ಚಮಕ್: ನಾಲ್ಕೇ ದಿನಕ್ಕೆ ಲೂಟಿ ಮಾಡಿದ್ದೆಷ್ಟು ಕೋಟಿ ಗೊತ್ತಾ?

ಬಾಕ್ಸ್ ಆಫೀಸ್’ನಲ್ಲಿ ಚಮತ್ಕಾರ ಮಾಡಿದ ಚಮಕ್: ನಾಲ್ಕೇ ದಿನಕ್ಕೆ ಲೂಟಿ ಮಾಡಿದ್ದೆಷ್ಟು ಕೋಟಿ ಗೊತ್ತಾ?

 

 

ಲವ್ವು, ಮದುವೆ, ಬ್ರೇಕಪ್ಪು, ಒದ್ದಾಟ, ಕಡೆಗೆ ಒಂದಾಗೋದು – ಸಿನಿಮಾ ಕಥೆಗಳ ಮಾಮೂಲಿ ಫಾರ್ಮುಲಾ. ಇಂಥಾ ಸೂತ್ರಗಳಾಚೆಗೂ ಸಾಕಷ್ಟು ಸಿನಿಮಾಗಳು ಬಂದಿವೆ. ಅದರಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಟಿಸಿರೋ ಚಿತ್ರಗಳದ್ದೇ ಮೇಲುಗೈ. ಅದೇ ರೀತಿಯಲ್ಲಿ ಗಣೇಶ್ ಅವರಿಗೆ ಒಪ್ಪುವಂಥ ಕಥಾ ಹಂದರದೊಂದಿಗೆ ತೆರೆ ಕಂಡಿರೋ ಮತ್ತೊಂದು ಸಿನಿಮಾ ಚಮಕ್!

 

 

ಚಮಕ್ ಚಿತ್ರ ಡಿಸೆಂಬರ್ 29ರಂದು ಬಿಡುಗಡೆಯಾಗಿದ್ದು, ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ವರ್ಷದ ಕೊನೆಯ ಸಿನಿಮಾವಾಗಿ ಬಿಡುಗಡೆ ಆಗಿರುವ ಚಮಕ್ ಬಾಕ್ಸ್ ಆಫೀಸ್ ನಲ್ಲಿ ಅಕ್ಷರಸಹ ಚಮತ್ಕಾರ ಮಾಡಿದೆ. ಚಿತ್ರ ಬಿಡುಗಡೆಯಾದ ನಾಲಕ್ಕೇ ದಿನಕ್ಕೆ ಬರೋಬ್ಬರಿ 6 ಕೋಟಿ 18 ಲಕ್ಷ ಹಣ ಗಳಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

 

 

ಯಶಸ್ವೀ ನಿರ್ದೇಶಕ ಸಿಂಪಲ್ ಸುನಿ ನಿರ್ದೇಶಿಸಿರುವ ಈ ಚಿತ್ರಕ್ಕೆ ಟಿ.ಆರ್ ಚಂದ್ರಶೇಖರ್ ಬಂಡವಾಳ ಹಾಕಿದ್ದಾರೆ. ಗಣೇಶ್ ಮೊದಲ ಬಾರಿಗೆ ಸ್ತ್ರೀ ರೋಗ ತಜ್ಞನ ಪಾತ್ರದಲ್ಲಿ ನಟಿಸಿದ್ದು, ಚಿತ್ರದಲ್ಲಿ ಗಣೇಶ್ ಗೆ ನಾಯಕಿಯಾಗಿ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಚಿತ್ರಕ್ಕೆ ಬಂಡವಾಳ ಹೂಡಿದ್ದು ಜೂಡಾ ಸ್ಯಾಂಡಿ ಸಂಗೀತ ನಿರ್ದೇಶನ ಮಾಡಿದ್ದು ಸಂತೋಷ್ ರೈ ಪಾತಾಜೆ ಕ್ಯಾಮೆರಾ ಹಿಡಿದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top