ತಿಂಡಿ ತೀರ್ಥ

ಕಬಾಬ್ ಕೂಡ ಅಂತರಿಕ್ಷ ದಾಟಿದೆ ನೋಡಿ .

ಕಬಾಬ್ ಕೂಡ ಅಂತರಿಕ್ಷ ದಾಟಿದೆ ನೋಡಿ .

 

 

 

ಅಂತರಿಕ್ಷ ದಾಟಿದ ಕಬಾಬ್!
ಹೌದು ರೀ… ಕಬಾಬ್ ಬೆಲೆ ಗಗನದಾಟಿದೆ!

ಛೇ…ಛೇ… ಅದಲ್ಲಾ ನಾವು ಹೇಳಲು ಹೊರಟಿದ್ದು. ಸಿದ್ದಪಡಿಸಿದ ಕಬಾಬ್‍ನ್ನು ಡಿಸೆಂಬರ್ ಕೊನೆಯವಾರದಲ್ಲಿ ಅಂತರಿಕ್ಷಕ್ಕೆ ಹಾರಿ ಬಿಟ್ಟಿದ್ದಾಋಎ. ಭೂ ವಾತಾವರಣದಿಂದ ಬರೋಬ್ಬರಿ 1,24,000ಅಡಿಗಳೆಷ್ಟು ಎತ್ತರಕ್ಕೆ ಹಾರಿದೆ.

ಆಮೇಲೆ?

ತಣ್ಣನೆಯ ವಾತಾವರಣಕ್ಕೆ ಐಸ್ ರೂಪವಾಗಿ ಚೆಲ್ಲಾಪಿಲ್ಲಿಯಾಗಿದೆ.

ಯಾಕೆ ಈ ಚೇಷ್ಟೆ?

 

 

 

ಸ್ವಿಟ್ಜರ್‍ಲ್ಯಾಂಡಿನ ಜೂರಿಚ್‍ನಲ್ಲಿ ಐವೆರ್ದಿಸ್ ರೆಸ್ಟೋರೆಂಟ್ ಆರಂಭವಾಗಿದೆ. ಜಾಹೀರಾತು ನೀಡಿ, ಟೇಪ್ ಕತ್ತರಿಸಿ ಹೋಟೆಲ್ ಪ್ರಾರಂಭಿಸುವುದಕ್ಕಿಂತಲೂ ಭಿನ್ನವಾಗಿರಲೆಂದು ಈ ಬಿಲ್ಡಪ್‍ಗಳು ಹೋಟೆಲ್ ಸ್ಟಾರ್ಟಪ್‍ಗೆ ಅದೆಷ್ಟು ಶ್ರಮಹಾಕಿದರೋ ತಿಳಿಯದು. ಆದರೆ ಕಬಾಬ್ ಉಡ್ಡಯನ ಹಾಗೂ ಅದರ ಹಾರಾಟದ ಚಿತ್ರೀಕರಣಕ್ಕೆ ಸುಮಾರು 3 ತಿಂಗಳ ಶ್ರಮಹಾಕಿದ್ದಾರೆ.

ಕಡೆಗೂ ಕ್ರಿಸ್ಮಸ್ ಮರುದಿನ ಭಾರಿ ಘಾತ್ರದ ಕಬಾಬ್ ಅತಿ ದೊಡ್ಡ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಗ್ಯಾಸ್ ಬೆಲೂನ್‍ಗೆ ಕಟ್ಟಿ ಆಗಸದತ್ತ ಬಿಟ್ಟಿದ್ದಾರೆ. ಹಾರಿಸಿದ ಎರಡು ಗಂಟೆಗಳ ಅವಧಿಯಲ್ಲಿ ಅಂತರಿಕ್ಷ ತಲುಪಿ ಚೆಲ್ಲಾಪಿಲ್ಲಿಯಾದ ಸುದ್ದಿಬಂದಿದೆ.

ಅಲ್ಲಾ ರೀ… ಹೀಗೆ ಸೇವಿಸುವ ಆಹಾರವನ್ನು ಹಾರಿಸಿ ವೇಸ್ಟ್ ಮಾಡುವ ಬದಲು ತಿನ್ನಲು ಕೊಡಬಹುದಿತ್ತು ಅಲ್ವಾ?

ತಿಂದಮೇಲೂ ‘ವೇಸ್ಟೇ’ ಅಲ್ವಾ ಆಗೋದು….!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top