ವಿಶೇಷ

ಎಷ್ಟು ವಿಭಿನ್ನ ರೀತಿಯ ರಸ್ತೆ ವೃತ್ತಗಳಿವೆ ನೋಡಿ .

ಎಷ್ಟು ವಿಭಿನ್ನ ರೀತಿಯ ರಸ್ತೆ ವೃತ್ತಗಳಿವೆ ನೋಡಿ .

 

 

 

ನಮ್ಮಲ್ಲಿ ರಾಮಕೃಷ್ಣ ಸರ್ಕಲ್ ಎಂದು, ನೆಹರು ಸರ್ಕಲ್ ಎಂದೆಲ್ಲಾ ಇರುತ್ತದೆ. ಅಲ್ಲಿ ಹೋಗಿ ನೋಡಿದರೆ… ಸಣ್ಣದೊಂದು ವೃತ್ತ ಕೂಡ ಇರದು. ಆದರೆ ಚೀನಿಯರು ಹಾಗಲ್ಲ. ಅಕ್ಷರಶಃ ಕೂಡು ರಸ್ತೆಯಲ್ಲಿ ವೃತ್ತ ಮಾಡಿದ್ದಾರೆ.

ಅನುಮಾನವಿದ್ದರೆ ಈ ಚಿತ್ರಗಳನ್ನೇ ನೋಡಿ…

 

 

6 ರಸ್ತೆಗಳ ಕೂಡು ಜಾಗದಲ್ಲಿನ ಸರ್ಕಲ್‍ಯಿದು. ಭೂಮಿ ದುಂಡಾಗಿದೆಯೋ ಇಲ್ಲವೊ ಬೇಕಿಲ್ಲ. ಇದಂತೂ ಗುಂಡಾಗಿದೆ. ಇದರ ಮೇಲೆ ವಾಕ್-ಟಾಕ್ ಮಾಡುತ್ತಾ ನಡೆದರೆ ಕಡೆಗೆ ನಾವು ಹೊರಟ ಜಾಗಕ್ಕೇ ಬಂದು ನಿಂತಿರುತ್ತೇವೆ. ಅಂದಹಾಗೆ ಈ ಮೇಲು ವೃತ್ತದ ಮೇಲೆ ಸಾಗುತ್ತಾ ಹೋದರೆ… ಮ್ಯೂಸಿಯಂ, ಅಕ್ವೇರಿಯಂ, ಸೇರಿದಂತೆ ಹಲವು ಕಟ್ಟಡಗಳÀ ಬಾಹ್ಯ ಸೊಗಸನ್ನು ಆಸ್ವಾದಿಸುತ್ತಾ ಸಾಗಬಹುದು. ನೆಲದಿಂದ 20 ಅಡಿಗಳಷ್ಟು ಮೇಲಿದೆ. ಒಟ್ಟಿಗೆ 15 ಜನ ಒಬ್ಬರ ಕೈ ಒಬ್ಬರು ಹಿಡಿದು ಸಾಗಬಹುದಾದಷ್ಟು ವಿಶಾಲವಾಗಿದೆ. ಈ ಬ್ರಿಡ್ಜ್ ಏರಲು ಹಲವು ಕಡೆಗಳಲ್ಲಿ ಮೆಟ್ಟಿಲು, ಎಸ್ಕಲೇಟರ್‍ಗಳೆಲ್ಲಾ ಇದೆ. ಚೀನಾಗೆ ಮಾತ್ರವಲ್ಲದೆ ವಿಶ್ವದ ಪ್ರಮುಖ ವೃತ್ತಗಳಲ್ಲಿ ಒಂದೆನಿಸಿದ್ದು, ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.

 

 

 

ಅಲ್ಲಾ ರೀ… ಈ ವೃತ್ತದ ಮೇಲೆ ಸಾಗುತ್ತಿರುವಾಗ ವಾಹನಗಳು ಬಂದು ಡಿಕ್ಕಿ ಹೊಡೆದರೆ ಏನು ಗತಿ?

ನೋ ಚಾನ್ಸ್… ಅದಕ್ಕೆ ಅವಕಾಶವೇ ಇಲ್ಲ. ಏಕೆಂದರೆ ಇದರ ಮೇಲೆ ವಾಹನಗಳ ಪ್ರವೇಶವೇ ಇಲ್ಲ! ಇದು ಕೇವಲ ಪಾದಚಾರಿ ರಸ್ತೆ. ಅಲಿಯಾಸ್ ಸ್ಕೈವಾಕ್.\

 

 

ಚೈನಾದೇಶದ ಶಾಂಘ್‍ಝೈ ಪಟ್ಟಣದ ಲೂಝಿಯಾಜಿಯ ಟ್ರಾಫಿಕ್ ಸರ್ಕಲಿದು. ವೃತ್ತಾಕಾರದ ಫುಟ್‍ಪಾಥ್‍ನ್ನು ವೃತ್ತ ಪಾಥ ಎಂಬುದೇ ಸೂಕ್ತ.

ನಮ್ಮಲಿ ಇಂತಹವುಗಳನ್ನು ನಿರ್ಮಾಣ ಮಾಡುವ ಮೊದಲು ಈಗಿರುವ ಸ್ಕೈವಾಕ್‍ಗಳನ್ನು ನೆಟ್ಟಗೆ ನಿರ್ವಹಣೆ ಮಾಡುವುದು ಒಳಿತು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top