fbpx
ಹೆಚ್ಚಿನ

ಮೇಕೆ ಮರವೇರುತಿದೆ ಕಂಡಿರಾ…? ಈ ಮೇಕೆಗಳ ಬಗ್ಗೆ ತಿಳಿದುಕೊಳ್ಳಿ.

ಮೇಕೆ ಮರವೇರುತಿದೆ ಕಂಡಿರಾ…?

ಈ ಮೇಕೆಗಳ ಬಗ್ಗೆ ತಿಳಿದುಕೊಳ್ಳಿ.

ಹಕ್ಕಿ ಹಾರುತಿದೆ ನೋಡಿದಿರಾ…? ಎಂಬಂತೆ ಮೇಕೆ ಮರ ಏರುತಿದೆ ಕಂಡಿರಾ? ಎನ್ನಬೇಕು.

 

 

 

ಮೇಕೆ ಏಕೆ ಹೀಗೆ ಮಾಡುತ್ತವೆ ಅಂದರೆ ಮೇಧ್ಯ ಹುಡುಕಿ ಮರವೇರುತ್ತವೆ. ಮೇಕೆ ಮುಟ್ಟದ ಸೊಪ್ಪಿಲ್ಲ ಎನ್ನುವಂತಿರುವಾಗ ಇವುಗಳೇಕೆ ಹೀಗೆ?

 

 

‘ಆರ್ಗಾನ್’ ವೃಕ್ಷದ ಹಣ್ಣುಗಳೆಂದರೆ ಮೇಷಗಳಿಗೆ ಆಪ್ಯಾಯಮಾನ. ಜಿಹ್ವಾಚಾಪಲ್ಯಕ್ಕೆ ಮನಸೋತು ಮರವೇರುವುದನ್ನು ಕರಗತ ಮಾಡಿಕೊಂಡಿವೆ. ಹಣ್ಣು ಕೀಳಲು ಹವಣಿಸುವ ಮೇಕೆಗೆ ಉಳಿದ ಮೇಕೆಗಳು ಸಾಥ್ ನೀಡುತ್ತವೆ. ನಮ್ಮ ಹುಡುಗರು ಶ್ರೀ ಕೃಷ್ಣ ಜನ್ಮಾಷ್ಠಮಿಯಂದು ಮೊಸರಿನ ಗಡುಗೆ ಒಡೆಯುತ್ತಾರಲ್ಲಾ ಹಾಗೆ…ತುದಿಗೇರಿದ ಮೇಕೆ ಕೊಂಬೆ ಆಡಿಸಿ ಹಣ್ಣುಗಳನ್ನು ಉದುರಿಸುವುದು ಉಂಟಂತೆ.

 

 

ಕೊಂಬೆಗಳ ಮೇಲೆ ಚಮತ್ಕಾರಿಕ ಕೌಶಲ್ಯಗಳನ್ನು ಮೆರೆದಾಗ ಉದುರುವ ಹಣ್ಣುಗಳೇ ಇನ್ನಷ್ಟು ಮೇಕೆಗಳಿಗೆ ಆಹಾರವಾಗಲಿದೆ.

ಅಂಬರೀಶ್ ಅಣ್ಣ ಈ ದೃಶ್ಯ ಕಂಡರೆ ‘ಕೊಂಬೆ ಆಡ್ಸೋನು ಮ್ಯಾಲೆ ಕುಂತವ್ನೋ…’ ಎಂದು ಹಾಡಬಹುದು. ಆದರೆ ಅವು ಹಾಗೆ ಮಾಡುವುದನ್ನೇ ಕಾದಿದ್ದು ಅವುಗಳ ಮಾಲೀಕ ಕೆಳಗೆ ಬಿದ್ದ ಹಣ್ಣುಗಳನ್ನು ಬಳಿದು ಹೋಗಿರುವ ಉದಾಹರಣೆಗಳಿವೆ. ಹೀಗಾಗಿ ಅವುಗಳು ಸಾಮೂಹಿಕವಾಗಿ ಮರ ಏರುವುದನ್ನು ಚಾಳಿ ಮಾಡಿಕೊಂಡಿವೆ. ಮರವೇರುವ ಮೇಷಗಳು ಮೊರೆಕಾದೇಶದ ತಾಮರಿ ಪ್ರದೇಶದಲ್ಲಿವೆ.

ಮರವೇರಿದ ಮೇಕೆ ಆದರೂ ಅಷ್ಟೇ ಗರಿಕೆ ತಿಂದು ಬೆಳೆದ ಮೇಕೆಯಾದರೂ ಅಷ್ಟೇ ಅವುಗಳಿಗೆಲ್ಲಾ ಮಾನವರ ಉದರದಲ್ಲೇ ಸಂಸ್ಕಾರ!

ಪುಷ್ಪೋದ್ಯಮದ ಹೊಸ ‘ಅರ್ಥ’ ವಿದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top