ಭವಿಷ್ಯ

ಜನವರಿ 1 : ನಿತ್ಯಭವಿಷ್ಯ ಮತ್ತೆ ಪಂಚಾಂಗ

`ಸೋಮವಾರ, ೦೧ ಜನವರಿ ೨೦೧೮
ಸೂರ್ಯೋದಯ : ೦೬:೪೫
ಸೂರ್ಯಾಸ್ತ : ೧೮:೦೦
ಶಕ ಸಂವತ : ೧೯೩೯ ಹೇವಿಲಂಬಿ
ಅಮಂತ ತಿಂಗಳು : ಪುಷ್ಯ
ಪಕ್ಷ : ಶುಕ್ಲ ಪಕ್ಷ
ತಿಥಿ : ಚತುರ್ದಶೀ
ನಕ್ಷತ್ರ : ಮಾರ್ಗಶಿರ
ಯೋಗ : ಶುಕ್ಲ
ಪ್ರಥಮ ಕರಣ : ವಣಿಜ – ೧೧:೪೪ ವರೆಗೆ
ಸೂರ್ಯ ರಾಶಿ : ಧನು
ಅಭಿಜಿತ್ ಮುಹುರ್ತ : ೧೨:೦೦ – ೧೨:೪೫
ಅಮೃತಕಾಲ : ೦೭:೧೧ – ೦೮:೩೫
ಅಮೃತಕಾಲ : ೨೭:೦೫+ – ೨೮:೨೮+
ರಾಹು ಕಾಲ: ೦೮:೦೯ – ೦೯:೩೪
ಗುಳಿಕ ಕಾಲ: ೧೩:೪೭ – ೧೫:೧೨
ಯಮಗಂಡ: ೧೦:೫೮ – ೧೨:೨೩

ಸರ್ವರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು

 

ಮೇಷ (Mesha)

ನಿಮ್ಮ ಪ್ರೇಮ ಜೀವನದಲ್ಲಿ ಎಚ್ಚರಿಕೆಯಿಂದಿರುವುದು ಉತ್ತಮ. ಹಾಗೆಯೇ, ಕಾರಣವಿಲ್ಲದೇ ನಿಮ್ಮ ಸಂಗಾತಿಯ ಮೇಲೆ ಅನುಮಾನ ವ್ಯಕ್ತಪಡಿಸುವುದನ್ನು ದೂರವಿಡಿ. ನೀವು ವಿದ್ಯಾರ್ಥಿಯಾಗಿದ್ದರೆ, ನೀವು ಸ್ವಲ್ಪ ಕಠಿಣ ಪರಿಶ್ರಮ ವಹಿಸಬೇಕಾದೀತು.

 

ವೃಷಭ (Vrushabha)

ಪರಿಪೂರ್ಣವಾದ ಯಶಸ್ಸನ್ನು ಹೊಂದಲು ಬಂಧುಗಳು ಹಾಗೂ ಸಹಪಾಠಿಗಳು ಸಹಕರಿಸುವರು. ಗುಣವಂತರ ದರ್ಶನ ಮತ್ತು ಅವರೊಡನೆ ಒಡನಾಟವು ವೃದ್ಧಿಸುವುದು. ಇದರಿಂದ ಸಾಮಾಜಿಕ ಪ್ರತಿಷ್ಟೆ ಹೆಚ್ಚಾಗುವುದು.

 

ಮಿಥುನ (Mithuna)

ನಿಮ್ಮಲ್ಲಿನ ಸಾಮಾಜಿಕ ಕಳಕಳಿಯು ಹಿರಿಯರಿಂದ ಪ್ರಶಂಸೆಗೆ ಕಾರಣವಾಗುವುದು. ದೀರ್ಘಕಾಲದ ನಂತರ ಮನಸ್ಸಿಗೆ ನೆಮ್ಮದಿ ದೊರೆಯುವುದು. ಆಂಜನೇಯ ಸ್ತೋತ್ರವನ್ನು ಪಠಿಸುವುದು ಒಳ್ಳೆಯದು.

 

ಕರ್ಕ (Karka)

ಚಿಕ್ಕ ಪ್ರಯತ್ನ ಚಿಕ್ಕ ಹೂಡಿಕೆ ಮಾಡುವ ಚಿಕ್ಕ ಸಹಾಯ ಇಂದು ನೀವು ಊಹಿಸದ ದೊಡ್ಡ ಫಲ ನೀಡುತ್ತದೆ ಆದರೆ ಆಲಸ್ಯ ಬಿಟ್ಟು ನೀವು ಅಂಥ ಪ್ರಯತ್ನಕ್ಕೆ ಕೈ ಹಾಕ ಬೇಕು ಅಷ್ಟೇ. ಹಣ ಖರ್ಚು ಮಾಡುವ ವಿಚಾರದಲ್ಲಿ ಎಚ್ಚರಿಕೆ ವಹಿಸಿ ದುಂದು ವೆಚ್ಚ ನಿಯಂತ್ರಿಸಿ

 

ಸಿಂಹ (Simha)

ಹೆದರಿಕೆ ನಿಮ್ಮ ಸಂತೋಷವನ್ನು ಹಾಳುಗೆಡವಬಹುದು.ನೀವು ಒಂದು ತಪ್ಪು ಮಾಹಿತಿಯನ್ನು ಪಡೆಯಬಹುದು ಹಾಗೂ ಇದು ಮಾನಸಿಕ ಒತ್ತಡ ತರುತ್ತದೆ

 

ಕನ್ಯಾರಾಶಿ (Kanya)

ಹಿರಿಯರ ಕೃಪಾಶೀರ್ವಾದಗಳ ಫಲವಾಗಿ ಹೆಚ್ಚಿನದನ್ನು ಗಳಿಸಲು ನಿಮಗೆ ಉತ್ತಮವಾದ ಅವಕಾಶಗಳು ಲಭ್ಯವಾಗಲಿದೆ. ಸಮಯ ಮೀರಿ ಆಹಾರ ಸೇವಿಸುವುದರಿಂದ ಉದರ ಶೂಲೆ ಕಾಡುವ ಸಾಧ್ಯತೆ ಇರುತ್ತದೆ.

 

ತುಲಾ (Tula)

ಸದಾ ಪಾದರಸದಂತೆ ಚುರುಕಾಗಿರುವ ನಿಮ್ಮನ್ನು ಕಂಡು ಹಲವರಿಗೆ ಅಚ್ಚರಿ. ನಿಮ್ಮ ಈ ಉತ್ಸಾಹಶೀಲತೆಯನ್ನು ಮೆಚ್ಚಿ ಹಲವರಿಂದ ಪ್ರಶಂಸೆಗೆ ಒಳಗಾಗುವಿರಿ ಮತ್ತು ಈ ದಿನ ವಿವಿಧ ಮೂಲಗಳಿಂದ ಹಣ ಒದಗಿ ಬರುವುದು.

 

ವೃಶ್ಚಿಕ (Vrushchika)

ನೀವು ಸಾಮಾಜಿಕವಾಗಿ ನಡೆಸಲಿರುವಂತಹ ಚಟುವಟಿಕೆಗಳಿಂದ ಒತ್ತಡವಿದ್ದರು ಅದು ಸಂತೋಷವನ್ನುಂಟು ಮಾಡುವುದು. ಜ್ಞಾನದ ಸಂವರ್ಧನೆಗಳಿಗಾಗಿ ಪ್ರವಾಸವನ್ನು ಕೈಗೊಳ್ಳುವಿರಿ. ಇದಕ್ಕೆ ಪೂರಕವಾಗಿ ಹಣಕಾಸು ಒದಗಿ ಬರುವುದು.

 

ಧನು ರಾಶಿ (Dhanu)

ಉತ್ತಮವಾದ ದಿನ ಮನಸ್ಸು ಅತ್ಯಂತ ಸಂತೋಷದಲ್ಲಿ ಇರುತ್ತದೆ. ಎಲ್ಲೆಡೆ ನಿಮಗೆ ಸ್ವಾಗತ ಗೌರವ ಮರ್ಯಾದೆಗಳು ಲಭಿಸುತ್ತದೆ. ಧನ ಲಾಭ ಸಹ ಆಗುವ ಸಾಧ್ಯತೆಗಳು ಇವೆ. ದ್ವಿಚಕ್ರ ವಾಹನ ಬದಲು ಚತುಷ್ಚಕ್ರ ವಾಹನ ಅಥವಾ ಸಾಮೂಹಿಕ ವಾಹನ ಬಳಸಿ

 

ಮಕರ (Makara)

ಬದಲಾವಣೆಯ ಮಾರ್ಗವನ್ನು ಬಯಸುವಿರಿ. ಕೆಲವು ಉತ್ತಮ ಗೆಳೆಯರು ನಿಮಗೆ ಸರಿಯಾದ ಮಾರ್ಗದರ್ಶನ ನೀಡುವರು. ನಿಮ್ಮ ಬರಹಗಳಿಗೆ ಜನರಿಂದ ಮೆಚ್ಚುಗೆ ವ್ಯಕ್ತವಾಗುವುದು ಮತ್ತು ಕೆಲವು ನಿಗೂಢ ವಿಚಾರಗಳು ನಿಮಗೆ ಇಂದು ಗೋಚರಿಸುವುದು.

 

ಕುಂಭರಾಶಿ (Kumbha)

ಪ್ರೇಮಿಗಳ ಬಗ್ಗೆ ಮಾತನಾಡುವುದಿದ್ದರೆ, ಅವರಿಗೂ ಸಮಯ ಧನಾತ್ಮಕವಾಗಿರುತ್ತದೆ. ಆದಾಗ್ಯೂ, ಸಂಗಾತಿಯ ಅನುಮಾನಕರ ನಡೆಯಿಂದ ಕೆಲವು ಸಂಬಂಧಗಳು ತೊಂದರೆಗೊಳಗಾಗಬಹುದು ಮತ್ತು ಇಬ್ಬರೂ ಕಡಿಮೆ ಸಮಯವನ್ನು ಕಳೆಯುತ್ತೀರಿ.

 

ಮೀನರಾಶಿ (Meena)

ಆರೋಗ್ಯ ಸಂಬಂಧಿತ ಸಮಸ್ಯೆಗಳು ಅನಾನುಕೂಲತೆಯನ್ನು ಉಂಟುಮಾಡಬಹುದು. ಕೆಲಸದ ನಡುವೆ ವಿಶ್ರಾಂತಿ ಪಡೆಯಲು ಪ್ರಯತ್ನಿಸಿ

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top