fbpx
ಕಿರುತೆರೆ

ಕಿಚ್ಚನಿಂದಾಗಿ ತನ್ನ ಹೆಸರನ್ನೇ ಬದಲಾಯಿಸಿಕೊಂಡರು ಈ ನಟಿ! ಯಾಕೆ ಗೊತ್ತಾ?

ಕಿಚ್ಚನಿಂದಾಗಿ ತನ್ನ ಹೆಸರನ್ನೇ ಬದಲಾಯಿಸಿಕೊಂಡರು ಈ ನಟಿ! ಯಾಕೆ ಗೊತ್ತಾ?

 

 

ಸ್ಯಾಂಡಲ್’ವುಡ್ ನ ಆರಡಿ ಕಟಔ ಕಿಚ್ಚ ಸುದೀಪ್ ಅವರಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಅವರ ಅಭಿಮಾನಿಗಳು ತಮ್ಮ ತಮ್ಮ ಹೆಸರಿನ ಮುಂದೆ ಅಥವಾ ಹಿಂದೆ ಕಿಚ್ಚ ಅನ್ನೋ ಅಂಕಿತನಾಮವನ್ನು ಸೇರಿಸಿಕೊಂಡು ತಮ್ಮ ಹೆಸರುಗಳನ್ನೇ ಬದಲಾಯಿಸಿಕೊಂಡಿರುವುದನ್ನು ಸೋಷಿಯಲ್ ಮೀಡಿಯಾಗಳಲ್ಲಿ ನೀವೆಲ್ಲ ನೋಡಿರುತ್ತೀರಿ. ಆದರೆ ನಟ ಸುದೀಪ್ ಅವರಿಂದಲೇ ಇಲ್ಲೊಬ್ಬ ನಟಿ ತಮ್ಮ ಹೆಸರನ್ನೇ ಬದಲಾಯಿಸಿಕೊಂಡಿದ್ದಾರೆ.

 

 

ಧೈರ್ಯಮ್ ಚಿತ್ರದಲ್ಲಿ ಅಜಯ್ ರಾವ್ ಜೊತೆ ನಟಿಸಿರುವ ಮತ್ತು ಈಗ ನಾಗಕನ್ನಿಕೆ ಎಂಬ ಧಾರಾವಾಹಿಯಲ್ಲಿ ನಟಿಸುತ್ತಿರುವ ಅದಿತಿ ಪ್ರಭು ಕಿಚ್ಚನ ದೆಸೆಯಿಂದ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರಂತೆ. ಈಗಂತ ಸ್ವತಃ ಅವರೇ ನೆನ್ನೆಯ ಬಿಗ್ ಬಾಸ್ ನಲ್ಲಿ ಹೇಳಿಕೊಂಡಿದ್ದಾರೆ. ಕಿಚನ್ ಟೈಮ್ ಸಂಚಿಕೆಗೆ ವಿಶೇಷ ಅಥಿತಿಯಾಗಿ ಬಂದಿದ್ದ ಅದಿತಿ ಈ ಬಗ್ಗೆ ಕುತೂಹಲಕಾರಿ ಸಂಗತಿಯನ್ನು ಬಿಚ್ಚಿಟ್ಟರು.

 

 

ಅಧಿತಿಯ ಮೂಲ ಹೆಸರು ‘ಸುದೀಪನಾ’, ಈಕೆ ಹೆಸರನ್ನ ಬದಲಾಯಿಸಿಕೊಳ್ಳೋದಕ್ಕೆ ಕಿಚ್ಚನೇ ಕಾರಣವಂತೆ. ಹೌದು ‘ಸುದೀಪನಾ’ ಅವರನ್ನು ಕಾಲೇಜಿನಲ್ಲಿ ಎಲ್ಲರು ಆಕೆಯನ್ನು ಕಿಚ್ಚ.. ಕಿಚ್ಚ.. ಎಂದು ರೇಗಿಸುತ್ತಿದ್ದರಂತೆ.. ನಂತರ ಬಣ್ಣದ ಲೋಕಕ್ಕೆ ಕಾಲಿಟ್ಟ ಮೇಲೆ ಆಕೆಯನ್ನು ಲೇಡಿ ಕಿಚ್ಚ ,ಕಿಚ್ಚಿ, ಸುದೀಪಣ್ಣ ಎಂದೆಲ್ಲಾ ಕಾಲೆಳೆಯುತ್ತಿದ್ದಂತೆ. ಹಾಗಾಗಿ ಇದು ಅತಿಯಾಗಬಾರದು ಎಂದು ನಿರ್ದೇಶಕರೇ ಆಕೆಯ ಹೆಸರನ್ನು ಅದಿತಿ ಅಂತ ಚೇಂಜ್ ಮಾಡಿದ್ದರಂತೆ. ಹೆಸರನ್ನು ಚೇಂಜ್ ಮಾಡಿಕೊಂಡಿದ್ದರು “ನನಗೆ ಸುದೀಪನಾ ಹೆಸರೇ ಇಷ್ಟ, ಅದೇ ಇದ್ದಿದ್ರೆ ಎಷ್ಟು ಚೆನ್ನಾಗಿರುತ್ತಿತ್ತು” ಎಂದು ಸುದೀಪನ ಅರ್ಥಾತ್ ಅದಿತಿ ಹೇಳಿದರು.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top