ಭವಿಷ್ಯ

ವಾರ ಭವಿಷ್ಯ ಜನವರಿ 1 ನೇ ತಾರೀಖಿನಿಂದ 7 ನೇ ತಾರೀಖಿನವರೆಗೆ

ವಾರ ಭವಿಷ್ಯ ಹೊಸ ವರ್ಷ 2018 , ಜನವರಿ 1 ನೇ ತಾರೀಖಿನಿಂದ 7 ನೇ ತಾರೀಖಿನವರೆಗೆ

 

ಮೇಷ (Mesha)

 

ಈ ವಾರ  ಮಕ್ಕಳಿಂದ ಸಂತಸ ಲಭ್ಯವಾಗುತ್ತದೆ. ವ್ಯಾಪಾರ , ವ್ಯವಹಾರಗಳನ್ನು ಮಾಡುತ್ತಿರುವವರಿಗೆ ಅಧಿಕ ಧನ ಲಾಭ. ಖಾಸಗಿ ಕಂಪನಿಯ ನೌಕರರು ತಾವು ಮಾಡದೇ ಇರುವ ತಪ್ಪಿಗೆ ಶಿಕ್ಷೆಯನ್ನು ಅನುಭವಿಸಬೇಕಾಗುವುದು, ಎಚ್ಚರದಿಂದಿರಿ. ಈ ವಾರ ಖಾಸಗಿ ಉದ್ಯೋಗಸ್ಥರಿಗೆ ಸಂಕಷ್ಟ, ದೂರ ಪ್ರಯಾಣ, ವಿದ್ಯಾರ್ಥಿಗಳಿಗೆ ಮುನ್ನಡೆ.

ಪರಿಹಾರ :- ಪ್ರತಿ ದಿನ ಗೋಪೂಜೆ ಮಾಡಿ ಹಸು ಮತ್ತು  ಕರುವಿಗೆ ಬೆಲ್ಲ ಮತ್ತು ಬಾಳೆಹಣ್ಣನ್ನು ತಿನ್ನಿಸಿ.

 

ವೃಷಭ (Vrushabh)

ಈ ವಾರ ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ದಾಂಪತ್ಯದಲ್ಲಿ ವಿರಸ, ನೀವಾಡುವ ಮಾತಿನ ಮೇಲೆ ನಿಗಾ ಇರಲಿ. ಹಳೆಯ ಮಿತ್ರರ ಭೇಟಿ, ಸುಖ ಭೋಜನ ಪ್ರಾಪ್ತಿ, ಮಾನಸಿಕ ನೆಮ್ಮದಿ, ವಿದೇಶ ಪ್ರಯಾಣ, ವಾರದ ಮಧ್ಯದಲ್ಲಿ ನಾನಾ ಮೂಲಗಳಿಂದ ಧನ ಲಾಭವಾಗುವುದು.

ಪರಿಹಾರ:- ಅಶ್ವತ್ಥ ಮರಕ್ಕೆ ಪ್ರತಿದಿನ ಹದಿನೆಂಟು ಬಾರಿ ಪ್ರದಕ್ಷಿಣೆ ಮಾಡಿ, ಕಣ್ಣಿಲ್ಲದ ಮಕ್ಕಳಿಗೆ ಅನ್ನದಾನ ಮಾಡಿ.

 

ಮಿಥುನ (Mithuna)

ಅತಿಯಾದ ಆತ್ಮವಿಶ್ವಾಸ, ಆತುರದ ದುಡುಕು ಸ್ವಭಾವ, ತಾಳ್ಮೆ ಅತ್ಯಗತ್ಯ, ಮಾನಸಿಕ ಒತ್ತಡ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆಯಿರಿ, ಶತ್ರುಗಳ ಬಾಧೆ, ಮನ ಕ್ಲೇಶವಾಗುವುದು. ಹಿರಿಯರ ಮಾತನ್ನು ಗೌರವಿಸಿ, ಶತ್ರುಗಳು ಮಾಡಿದ ಷಡ್ಯಂತ್ರಕ್ಕೆ ಬಲಿಯಾಗದಿರಿ, ವಿನಾ ಕಾರಣ ನಿಷ್ಠರನ್ನು ಹೊಂದುವಿರಿ.

ಪರಿಹಾರ:- ಪ್ರತಿ ದಿನ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ, ಶ್ರೀಮನ್ನಾರಾಯಣನಿಗೆ  ಸಿಹಿ ನೈವೇದ್ಯವನ್ನು ಅರ್ಪಿಸಿ. ಅದನ್ನು ಮಕ್ಕಳಿಗೆ ಹಂಚಿ.

 

ಕರ್ಕ (Karka)

ಹಲವು ವಿಷಯಗಳಲ್ಲಿ ಗೊಂದಲಮಯವಾದ ವಾತಾವರಣ ಸೃಷ್ಟಿಯಾಗಲಿದೆ. ಶಾಂತಿಯಿಂದ ವರ್ತಿಸಿ, ಸ್ಥಿರಾಸ್ತಿ ವಿಚಾರಗಳ ಬಂಧುಗಳ ಮಧ್ಯೆ ಮನಸ್ತಾಪಗಳು, ಕಲಹಗಳು, ಜಗಳಗಳು ಆಗುವ ಸಾಧ್ಯತೆ ಹೆಚ್ಚಿದೆ. ಜಾಗರೂಕತೆಯನ್ನು ವಹಿಸಿ, ಕೆಲಸ ಕಾರ್ಯಗಳಲ್ಲಿ ಅಡೆತಡೆ ಉಂಟಾಗಲಿದೆ.

ಪರಿಹಾರ:- ಪ್ರತಿದಿನ ಸೂರ್ಯ ನಮಸ್ಕಾರ ಮಾಡಿ, ಶಿವ ದೇವಾಲಯಕ್ಕೆ ಪ್ರತಿ ಸೋಮವಾರ ಭೇಟಿ ನೀಡಿ ಬಿಲ್ವಾರ್ಚನೆಯನ್ನು ಮಾಡಿಸಿ, ಪ್ರದಕ್ಷಿಣೆ ಮತ್ತು ನಮಸ್ಕಾರವನ್ನು ಮಾಡಿ.

 

ಸಿಂಹ (Simha)

ಕುಟುಂಬದವರೊಡನೆ ದೇವಾಲಯಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ, ಮನಃಶಾಂತಿ ದೊರೆಯುವುದು, ಧನಲಾಭ, ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಹೆಚ್ಚಿದೆ. ಶೀತದಿಂದ ಬಾಧೆಗೆ ಒಳಗಾಗಿ ರೋಗಗಳು ಆಹ್ವಾನವಾಗುವ ಸಾಧ್ಯತೆ ಹೆಚ್ಚು ಕಂಡುಬರುತ್ತಿದೆ. ಆರೋಗ್ಯದ ಕಡೆ ಗಮನ ಹರಿಸಿ. ಬರುವ ಅವಕಾಶಗಳು ಕೈತಪ್ಪಿ ಹೋಗುವ ಸಾಧ್ಯತೆ ಇದೆ, ನೀವು ಮಾಡುವ ಕೆಲಸ ಕಾರ್ಯಗಳಲ್ಲಿ ಎಚ್ಚರವಹಿಸಿ. ಜ್ಞಾನ ಮತ್ತು  ಏಕಾಗ್ರತೆಯಿಂದ ಕೆಲಸ ಮಾಡಿ.

ಪರಿಹಾರ :- ಪ್ರತಿದಿನ ಹನುಮಾನ್ ಚಾಲೀಸವನ್ನು ಪಾರಾಯಣ ಮಾಡಿ, ದಕ್ಷಿಣಾಭಿಮುಖವಾಗಿರುವ ಆಂಜನೇಯ ಸ್ವಾಮಿಗೆ ನಾಟಿ ತುಳಸಿಯಿಂದ ಅರ್ಚನೆಯನ್ನು ಮಾಡಿಸಿ, ದೀರ್ಘದಂಡ ನಮಸ್ಕಾರ ಸಲ್ಲಿಸಿ.

 

ಕನ್ಯಾರಾಶಿ (Kanya)

ಮನಸ್ಸಿನಲ್ಲಿರುವ ಗೊಂದಲಮಯವಾದ ವಾತಾವರಣ ಸೃಷ್ಟಿಯಾಗಲಿದೆ, ಸ್ನೇಹಿತರಿಂದ ಸಹಾಯವನ್ನು ಪಡೆಯಲು ಇಚ್ಛಿಸುತ್ತೀರಾ, ಹೊಸ ಅವಕಾಶಗಳನ್ನು ತರುವ ವಾರವಾಗಿದೆ. ಯತ್ನ ಕೆಲಸಗಳಲ್ಲಿ, ಕಾರ್ಯಗಳಲ್ಲಿ ಜಯ ಸಿಗುವುದು. ಖರ್ಚು ವೆಚ್ಚಗಳು ಹೆಚ್ಚಾಗಲಿವೆ. ಸುಖ ಭೋಜನ ಪ್ರಾಪ್ತಿ, ಶತ್ರುಗಳ ಬಾಧೆ ಮತ್ತು  ಶತ್ರುಗಳು ಮಾಡುವ ಷಡ್ಯಂತ್ರಕ್ಕೆ ಬಲಿಯಾಗುವಿರಿ.

ಪರಿಹಾರ:-  ಪ್ರತಿದಿನ ಲಕ್ಷ್ಮೀ ಅಷ್ಟೋತ್ತರವನ್ನು ಪಠಿಸಿ, ಶುಕ್ರವಾರ ಎಂಟು ಜನ ಸುಮಂಗಲಿಯರಿಗೆ ಕುಂಕುಮವನ್ನು ಕೊಟ್ಟು ನಮಸ್ಕಾರ ಮಾಡಿ.

 

ತುಲಾ (Tula)

ಈ ವಾರ ಹಿರಿಯರ ಆಶೀರ್ವಾದ ಲಭ್ಯವಾಗುವುದು, ದುಃಖದಾಯಕ ಪ್ರಸಂಗಗಳು, ಹಿರಿಯರ ಭೇಟಿ. ಹೇಳಿಕೊಳ್ಳಲು ಆಗುವುದಿಲ್ಲ ಹೇಳಿಕೊಂಡರೂ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ಇಂತಹ ದುಃಖದಾಯಕ ಪ್ರಸಂಗಗಳನ್ನು ಅನುಭವಿಸಬೇಕಾಗುವುದು. ನಿರೀಕ್ಷಿತ ಆದಾಯ ಒದಗಿ ಬರಲಿದೆ. ನಂಬಿಕೆ ದ್ರೋಹಕ್ಕೆ ಒಳಗಾಗುವಿರಿ, ಆದ್ದರಿಂದ ಎಚ್ಚರ ವಹಿಸಿ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವ ಶುಭ ಯೋಗ ಕೂಡಿ ಬರುವುದು, ಅಧಿಕ ಆದಾಯ, ಕೃಷಿಯಲ್ಲಿ ಧನಲಾಭ, ಶತ್ರುಗಳ ಬಾಧೆ ಮತ್ತು ಷಡ್ಯಂತ್ರಕ್ಕೆ ಒಳಗಾಗುವಿರಿ, ಜಾಗ್ರತೆಯನ್ನು ವಹಿಸಿ.

ಪರಿಹಾರ:- “ಓಂ ನಮೋ ನಾರಾಯಣಾಯ ನಮಃ ”   ಈ ಅಷ್ಟಾಕ್ಷರಿ ಮಂತ್ರವನ್ನು ನೂರಾ ಎಂಟು ಬಾರಿ ಜಪಿಸಿ.

 

ವೃಶ್ಚಿಕ (Vrushchika)

ಹಣಕಾಸಿನ ವಿಚಾರಗಳಲ್ಲಿ ಹೆಚ್ಚಿನ ಎಚ್ಚರವನ್ನು ವಹಿಸಿ, ಇಲ್ಲವೆಂದರೆ ಮೋಸಕ್ಕೆ ಒಳಗಾಗಬೇಕಾಗುವುದು, ಶುಭ ಕಾರ್ಯಗಳಲ್ಲಿ ಭಾಗಿಯಾಗುವಿರಿ, ಸಂತಸ ಹೊಂದುವಿರಿ, ವಿದೇಶ ಪ್ರಯಾಣಕ್ಕೆ ತಯಾರಿ ಮಾಡುವಿರಿ, ಹೆಚ್ಚಿನ ಜವಾಬ್ದಾರಿ ಪ್ರಾಪ್ತಿಯಾಗಲಿದೆ. ಸಣ್ಣ ಮಾತಿನಿಂದ ಅನರ್ಥ ಮಾಡಿಕೊಳ್ಳುವರು, ಹೆಚ್ಚಾಗಿ ಮಾತನಾಡಬೇಡಿ, ಮಾತು ಮನೆ ಕೆಡಿಸಿತು ತೂತು ಒಲೆ ಕೆಡಿಸಿತು ಎನ್ನುವ ಗಾದೆ ಮಾತಿನಂತೆ ನಿಮ್ಮ ಮಾತಿನಿಂದ ಮನಸ್ಸಿಗೆ ನೋವುಂಟಾಗಿ ಅನಗತ್ಯವಾಗಿ ಕಲಹಗಳು  ಉಂಟಾಗುವವು. ಆರೋಗ್ಯದ ಕಡೆ ಗಮನ ಹರಿಸಿ, ಉದರ ಬಾದೆ ಉಂಟಾಗುವ ಸಾಧ್ಯತೆ ಇದೆ.

ಪರಿಹಾರ:- “ಓಂ ಬೃಹಸ್ಪತಿಯೇ ನಮಃ” ಈ ಮಂತ್ರವನ್ನು ನೂರಾ ಎಂಟು ಬಾರಿ ಜಪಿಸಿ, ಔದುಂಬರ ವೃಕ್ಷಕ್ಕೆ ಪ್ರದಕ್ಷಿಣೆ ಮಾಡಿ.

 

ಧನು ರಾಶಿ (Dhanu)

ಸರ್ಕಾರಿ ಕೆಲಸ ಕಾರ್ಯಗಳಲ್ಲಿ ವಿಳಂಬ ನೀತಿಯನ್ನು ಅನುಭವಿಸಬೇಕಾಗುವುದು, ಮಾನಸಿಕ ಒತ್ತಡ ಹೆಚ್ಚಾಗುವ ಸಾಧ್ಯತೆಯಿದೆ, ದೂರ ಪ್ರಯಾಣ ಮಾಡುವ ಸಾಧ್ಯತೆ ಇದೆ, ಅವಿವಾಹಿತರಿಗೆ ವಿವಾಹ ಯೋಗ, ಬಣ್ಣದ ಮಾತುಗಳಿಗೆ ಮರುಳಾಗಬೇಡಿ, ದುಷ್ಟ ಜನರಿಂದ ತೊಂದರೆಗಳಿಗೆ ಒಳಗಾಗಬೇಕಾಗುವುದು, ಅನಗತ್ಯ ತೊಂದರೆಗಳನ್ನು ಜನರು ನಿಮಗೆ ತಂದೊಡ್ಡುವರು, ಆದ್ದರಿಂದ ಸ್ವಲ್ಪ ಜಾಗರೂಕತೆಯನ್ನು ವಹಿಸಿ.

ಪರಿಹಾರ:-  ಪ್ರತಿ ದಿನ ವೃದ್ಧ ದಂಪತಿಗಳ ಪಾದಪೂಜೆ ಮಾಡಿ, ಆಶೀರ್ವಾದ ಪಡೆದು ಬಡ ಮಕ್ಕಳಿಗೆ ಅನ್ನದಾನ ಮಾಡಿ.

 

ಮಕರ (Makara)

ನಿಮ್ಮ ಸ್ವಾರ್ಥಕ್ಕಾಗಿ ನೀವು ಇತರರನ್ನು ಬಳಸಿಕೊಳ್ಳುವಿರಿ, ಇದರಿಂದ ಮುಂದೆ ತೊಂದರೆಗಳನ್ನು ಅನುಭವಿಸಬೇಕಾಗುವುದು. ಸ್ವಲ್ಪ ಜಾಗರೂಕತೆಯನ್ನು ವಹಿಸಿ. ಅಕಾಲ ಭೋಜನ, ಮಹತ್ವದ ಕೆಲಸ ಕೈಗೂಡಿ ಸಂತಸದ ವಾತಾವರಣ ಕಂಡುಬರುವುದು. ತಂದೆ ತಾಯಿಯರ ಪಾದಪೂಜೆ ಮಾಡಿ ಅಥವಾ ಕುಲದೇವರನ್ನು ಭಕ್ತಿಯಿಂದ ಧ್ಯಾನ ಮಾಡಿ.

ಪರಿಹಾರ:- ಶುಕ್ರವಾರ ಸುಮಂಗಲಿಯರಿಗೆ ಅರಿಶಿನ, ಕುಂಕುಮವನ್ನು ನೀಡಿ ಪ್ರತಿದಿನ ಲಲಿತ ಸಹಸ್ರನಾಮವನ್ನು ಪಾರಾಯಣ ಮಾಡಿ.

 

ಕುಂಭರಾಶಿ (Kumbha)

ಈ ವಾರ ಶ್ರಮ ಪಡದೇ ಯಾವುದೇ ಕೆಲಸಗಳು ಆಗುವುದಿಲ್ಲ. ದೊಡ್ಡವರು ಹೇಳುತ್ತಾರೆ “ಆಲಸ್ಯಂ ಅಮೃತಂ ವಿಷಂ” ಎನ್ನುವ ಹಾಗೆ ಸೋಂಬೇರಿತನ ಬಿಟ್ಟು ಕೆಲಸ ಕಾರ್ಯಗಳನ್ನು ಮಾಡಿ. ಕೌಟುಂಬಿಕ ಜೀವನದಲ್ಲಿ ಆಗ ನೆಮ್ಮದಿ ನಿಮಗೆ ಲಭ್ಯವಾಗುವುದು. ಇಷ್ಟಾರ್ಥ ಸಿದ್ಧಿ, ಈ ವಾರ ದೊರೆಯಲಿದೆ. ವಿದ್ಯಾರ್ಥಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ, ಕೆಲಸ ಕಾರ್ಯಗಳಲ್ಲಿ ವಿಳಂಬವಾದರೂ ಕೂಡ ಅವೆಲ್ಲವೂ ಕೈಗೂಡಲಿವೆ.

ಪರಿಹಾರ:- ಪ್ರತಿದಿನ ಗಣಪತಿಯ ದೇವಾಲಯಕ್ಕೆ ಭೇಟಿ ನೀಡಿ,ಮಂಗಳವಾರ ಗರಿಕೆಯಿಂದ ಅರ್ಚನೆ ಮಾಡಿಸಿ, 21 ಬಾರಿ ನಮಸ್ಕಾರ ಮಾಡಿ.

 

ಮೀನರಾಶಿ (Meena)

ಪಿತ್ರಾರ್ಜಿತ ಆಸ್ತಿಯನ್ನು ಮಾರಾಟ ಮಾಡುವುದಕ್ಕೆ ಓಡಾಡುತ್ತೀರಿ, ಸಕಾಲ ಭೋಜನ ಇರುವುದಿಲ್ಲ, ಶತ್ರು ಬಾಧೆಗೆ ಒಳಗಾಗುವಿರಿ. ವೃತ್ತಿಯಲ್ಲಿ ಹೊಸ ಹೊಸ ಅವಕಾಶಗಳು ಕಂಡುಬರುತ್ತವೆ, ಜಾಗರೂಕತೆಯಿಂದ ವೃತ್ತಿಯನ್ನು ಆರಿಸಿಕೊಳ್ಳಿ, ಲೇವಾದೇವಿ ವ್ಯವಹಾರ ಮಾಡುವವರಿಗೆ ಬಹಳಷ್ಟು ಲಾಭ, ದಾಂಪತ್ಯದಲ್ಲಿ ಪ್ರೀತಿ ವಾತ್ಸಲ್ಯ ಹೆಚ್ಚಾಗುವುದು.

ಪರಿಹಾರ:- ಪ್ರತಿದಿನ “ಓಂ ನಮೋ ಮಹಾಲಕ್ಷ್ಮಿಯೇ ನಮಃ” ಎಂಬ ಮಂತ್ರವನ್ನು ನಲವತ್ತೆಂಟು ಬಾರಿ ಜಪಿಸಿರಿ. ಶನಿವಾರ ಬಡ ಮಕ್ಕಳಿಗೆ, ಅನಾಥ ಮಕ್ಕಳಿಗೆ ಅಥವಾ ಅಂಧ ಮಕ್ಕಳಿಗೆ ಅನ್ನದಾನ ಮಾಡಿ ಇದರಿಂದ ವಿಶೇಷ ಪಲ ಪ್ರಾಪ್ತಿಯಾಗುವುದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top