ವಿಶೇಷ

ಪ್ರಪಂಚದಾದ್ಯಂತ ಹೇಗೆಲ್ಲಾ ನ್ಯೂ ಇಯರ್ ಸೆಲೆಬ್ರೇಶನ್ ಮಾಡ್ತಾರೆ ಅಂತ ನೀವು ಕೇಳಿದರೆ ಅಚ್ಚರಿ ಪಡುತ್ತೀರಿ

ಪ್ರಪಂಚದಾದ್ಯಂತ ಹೇಗೆಲ್ಲಾ ನ್ಯೂ ಇಯರ್ ಸೆಲೆಬ್ರೇಶನ್ ಮಾಡ್ತಾರೆ ಅಂತ ನೀವು ಕೇಳಿದರೆ ಅಚ್ಚರಿ ಪಡುತ್ತೀರಿ

ಪ್ರಪಂಚದ ಎಲ್ಲರಿಗೂ ವಿಶಿಷ್ಟವಾದ ದಿನ. ಜ. 01 ನ್ನೇ ಎಲ್ಲಾ ದೇಶ, ಎಲ್ಲಾ ಸಮುದಾಯಗಳಲ್ಲಿ ಹೊಸವರ್ಷವೆಂದು ಪರಿಗಣಿಸದಿದ್ದರೂ ಅವರವರ ಸಂಸ್ಕೃತಿ, ಆಚಾರ-ವಿಚಾರಗಳಿಗೆ ತಕ್ಕಂತೆ ಚರ್ಷದ ಯಾವುದೋ ಒಂದು ದಿನವನ್ನು ಹೊಸವರ್ಷವೆಂದು ಆಚರಿಸುವ ಪದ್ಧತಿ ಇದೆ. ಈ ಕುರಿತ ಕುತೂಹಲಕರ ಮಾಹಿತಿ ಇಲ್ಲಿದೆ.

ನಮ್ಮ ಭಾರತ ದೇಶದಲ್ಲಿ ರಾವಣ ಪ್ರತಿಕೃತಿಯನ್ನು ದಹನ ಮಾಡಿದಂತೆ ದುಷ್ಟ ಶಕ್ತಿಗಳನ್ನು ವಿನಾಶ ಮಾಡಿ ಹೊಸ ವರ್ಷಕ್ಕೆ ಕಾಲಿಡುತ್ತೇವೆ ಎಂಬ ನಂಬಿಕೆಯಲ್ಲಿ ಈ ರೀತಿ ವಿಚಿತ್ರ ಸಂಪ್ರದಾಯವನ್ನು ಆಚರಿಸುತ್ತಾರೆ.

Image result for ರಾವಣ ಪ್ರತಿಕೃತಿಯನ್ನು ದಹನ

*ಡೆನ್ಮಾರ್ಕ ನಲ್ಲಿರುವ ಕೆಲ ಸಮುದಾಯಗಳಲ್ಲಿ ತಮ್ಮಲ್ಲಿರುವ ಬಳಕೆಯಾಗುವ ಎಲ್ಲಾ ಪ್ಲೇಟ್ ಗಳನ್ನು ಡಿಸೆಂಬರ್ 31 ರಂದು ಒಡೆದು ಮನೆಯಿಂದ ಹೊರಹಾಕುತ್ತಾರೆ.

Related image

*ದಕ್ಷಿಣ ಆಫ್ರಿಕಾ: ಅದೇ ರೀತಿ ದಕ್ಷಿಣ ಆಫ್ರಿಕಾದಲ್ಲಿ ಹಳೆಯ ಪೀಠೋಪಕರಣಗಳನ್ನು ಹೊರಹಾಕಿ ಹೊಸವರ್ಷವನ್ನು ಬರಮಾಡಿಕೊಳ್ಳುತ್ತಾರೆ.

Image result for furniche throw out side

*ಈಕ್ವೆಡಾರ್ : ಈಕ್ವೆಡಾರ್ ನಲ್ಲಿ ಕಾಗದಗಳನ್ನು ತುಂಬಿದ ಗುಮ್ಮಗಳನ್ನು ಸುಟ್ಟು ಹೊಸ ವರ್ಷವನ್ನು ಬರಮಾಡಿಕೊಳ್ಳುತ್ತಾರೆ.

*ಡೆನ್ಮಾರ್ಕ್ : ಡೆನ್ಮಾರ್ಕ್ ನಲ್ಲಿ ಹೊಸವರ್ಷದ ಮುನ್ನಾ ದಿನ ಅಂದರೆ ಡಿಸೆಂಬರ್ 31 ರಂದು ಕುರ್ಚಿಗಳ ಮೇಲೆ ಏರಿ ಜಿಗಿಯುತ್ತಾರೆ. ಯುವಕರು, ಮಹಿಳೆಯರು ಹಿರಿಯರು, ಮಕ್ಕಳು ಎಂಬ ಬೇದವಿಲ್ಲದೆ ಹೈಜಂಪ್ ಮಾಡಿ ಪರಸ್ಪರ ಸಂತೋಷದಿಂದ ಕುಣಿದು ಕುಪ್ಪಳಿಸಿ ಹೊಸವರ್ಷವನ್ನು ಬರಮಾಡಿಕೊಳ್ಳುತ್ತಾರೆ.

Related image

*ಬೆಲ್ಜಿಯಂ: ಬೆಲ್ಜಿಯಂನಲ್ಲಿರುವಂತೆಯೇ ರೊಮೇನಿಯನ್ ರೈತರೂ ಕೂಡ ತಮ್ಮ ಹಸುಗಳೊಂದಿಗೆ ಮಾತನಾಡಲು ಪ್ರಯತ್ನಿಸುತ್ತಾರೆ. ಅದು ಸಫಲವಾದರೆ ಆ ವರ್ಷ ಅದೃಷ್ಟದಿಂದ ಕೂಡಿರುತ್ತದೆ ಎಂದು ಪರಿಗಣಿಸಲಾಗುತ್ತದೆ.

Image result for belgium cow talking

*ಸ್ಪೆನ್ : ಸ್ಪೆನ್ ನಲ್ಲಿ ಸಾಂಪ್ರದಾಯಿಕವಾಗಿ ಡಿಸೆಂಬರ್ 31ರ ಮಧ್ಯರಾತ್ರಿಯಲ್ಲಿ 12 ದ್ರಾಕ್ಷಿಗಳನ್ನು ತಿನ್ನುವುದರ ಮೂಲಕ ಹೊಸವರ್ಷವನ್ನು ಕಾಲಿಡುತ್ತಾರೆ. ದ್ರಾಕ್ಷಿಗಳನ್ನು ತಿನ್ನುವುದರಿಂದ ಅದೃಷ್ಟ ಕುಲಾಯಿಸುತ್ತದೆ ಎನ್ನುವುದು ಅವರ ನಂಬಿಕೆ.

Related image

ಸ್ವಿಜರ್ಲೆಂಡ್ :ಸ್ವಿಜರ್ಲೆಂಡ್ ನಲ್ಲಿ ಐಸ್ ಕ್ರೀಮ್ ಅನ್ನು ನೆಲಕ್ಕೆ ಬೀಳಿಸುವುದರ ಮೂಲಕ ಹೊಸವರ್ಷವನ್ನು ಆಚರಿಸಲಾಗುತ್ತದೆ.

Related image

ಜಪಾನ್ : ಜಪಾನ್ ನಲ್ಲಿ ಹೊಸವರ್ಷದ ಮುನ್ನಾ ದಿನ ಬುದ್ಧ ಮಂದಿರಗಳಲ್ಲಿನ ಗಂಟೆಗಳನ್ನು 108 ಬಾರಿ ಬಾರಿಸಲಾಗುತ್ತದೆ.

Image result for japan new year's eve bel

ಪೋರ್ಟೋರಿಕೊ: ಪೋರ್ಟೋರಿಕೊದ ಕೆಲವು ಭಾಗಗಳಲ್ಲಿ ದುಷ್ಟಶಕ್ತಿಗಳನ್ನು ಓಡಿಸಲು ತಮ್ಮ ಮನೆಯ ಕಿಟಕಿಗಳಿಂದ ನೀರು ತುಂಬಿದ ಬಕೆಟ್ ಗಳನ್ನು ಹೊರಕ್ಕೆ ಎಸೆಯುತ್ತಾರೆ.

Image result for puerto rico new year throw water

ಬ್ರೆಜಿಲ್ : ಬ್ರೆಜಿಲ್ ನಲ್ಲಿ ದುಷ್ಟಶಕ್ತಿಗಳನ್ನು ದೂರಮಾಡಲು ಪ್ರತಿಯೊಬ್ಬರೂ ನ್ಯೂ ಇಯರ್ ಈವ್’ನಂದು ಬಿಳಿಯ ಬಟ್ಟೆ ಧರಿಸುತ್ತಾರೆ. ಬಿಳಿ ಬಟ್ಟೆಗಳನ್ನು ಧರಿಸುವುದರಿಂದ ದುಷ್ಟ ಶಕ್ತಿಗಳು ದೂರವಾಗುತ್ತವೆ ಎಂಬುದು ಅವರ ನಂಬಿಕೆ.

Related image

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top