fbpx
ಕಿರುತೆರೆ

ನ್ಯೂ ಇಯರ್ ಸೆಲೆಬ್ರೇಷನ್ ಮಾಡಲು ಬಿಗ್’ಬಾಸ್ ಹತ್ತಿರ ವೈನ್ ಕೇಳಿದ ದಿವಾಕರ್.

ನ್ಯೂ ಇಯರ್ ಸೆಲೆಬ್ರೇಷನ್ ಮಾಡಲು ಬಿಗ್’ಬಾಸ್ ಹತ್ತಿರ ವೈನ್ ಕೇಳಿದ ದಿವಾಕರ್.

 

 

ಬಿಗ್ ಬಾಸ್ ಸೀಸನ್ 5 ಹನ್ನೊಂದು ವಾರಗಳನ್ನು ಮುಗಿಸಿದ್ದು ಫಿನಾಲೆಗೆ ಇನ್ನು ಕೇವಲ ನಾಲ್ಕು ವಾರಗಳು ಮಾತ್ರ ಬಾಕಿ ಇದೆ. ಬಿಗ್ ಬಾಸ್ ಮನೆಯಿಂದ ಹನ್ನೊಂದನೇ ವಾರ ಎಲಿಮಿನೇಟ್ ಆಗಿ ಈಗ ಸೀಕ್ರೆಟ್ ರೂಮ್ ನಲ್ಲಿರುವ ದಿವಾಕರ್ ನೆನ್ನೆ ನ್ಯೂ ಇಯರ್’ಅನ್ನು ಸೆಲೆಬ್ರೇಟ್ ಮಾಡಲು ಬಿಗ್’ಬಾಸ್ ಬಳಿ ಕೇಕ್, ಸಿಹಿಗಳನ್ನು ಕೇಳುವ ಬದಲು ವೈನ್ ಕೇಳಿದ್ದು ಎಲ್ಲರಿಗೂ ಆಶ್ಚರ್ಯವಾಗುವಂತೆ ಮಾಡಿದೆ.

 

 

ಸೀಕ್ರೆಟ್ ರೂಂನಲ್ಲಿ ಒಬ್ಬರೇ ಇರುವ ದಿವಾಕರ್,” ನಾನು ಯಾರಿಗೂ ಹೇಳಲ್ಲ ದಯವಿಟ್ಟು ಒಂದು ಸಣ್ಣ ಬಾಟಲ್ ವೈನ್ ಕೊಡಿ. ನೀವು ಲೈಟ್ ಆಫ್ ಮಾಡಿದಾಗ ಕೊಡಿ. ಹ್ಯಾಪಿ ನ್ಯೂ ಇಯರ್ ನ ನಾನೊಬ್ಬನೇ ಸೆಲೆಬ್ರೇಷನ್ ಮಾಡ್ತೀನಿ., ಕುಡಿದು ಊಟ ಮಾಡಿ ಸುಮ್ಮನೆ ಮಲಗುತ್ತೇನೆ., ವೈನ್ ಏನು ಕಿಕ್ ಏರಲ್ಲ, ನೀವು ಕೊಟ್ರಿ ಎಂದು ನಾನು ಯಾರಿಗೂ ಹೇಳಲ್ಲ” ಎಂದು ಬಿಗ್ ಬಾಸ್ ಬಳಿ ಮನವಿ ಮಾಡಿಕೊಂಡರು.

 

 

ಆದರೆ ಬಿಗ್ ಬಾಸ್ ದಿವಾಕರ್ ಮನವಿಯನ್ನು ಪುರಸ್ಕರಿಸಲಿಲ್ಲ. ಅದು ಅಸಾಧ್ಯವಾದುದು ಏಕೆಂದರೆ ಬಿಗ್ ಬಾಸ್ ಮದ್ಯಪಾನಕ್ಕೆ ಅವಕಾಶವಿಲ್ಲ ಮದ್ಯಪಾನವನ್ನು ವಿತರಿಸುವುದೂ ಇಲ್ಲ. ಧೂಮಪಾನ ಮಾಡುವುದಕ್ಕೆ ಅವಕಾಶವಿರುತ್ತದೆ ಮತ್ತು ನಿಯಮಿತವಾಗಿ ಮಾತ್ರ ಸಿಗರೇಟ್ ಗಳನ್ನೂ ಸಪ್ಲೈ ಮಾಡಲಾಗುತ್ತದೆ.

ನಂತರ ಹೊಸ ವರ್ಷದ ಪ್ರಯುಕ್ತ ಸದಸ್ಯರಿಗೆ ವಿಶೇಷ ಔತಣ ನೀಡಿದರು. ಮನೆಯ ಸದಸ್ಯರೆಲ್ಲಾ ಒಟ್ಟಿಗೆ ಕುಳಿತು ಊಟಮಾಡಿ ನಂತರ ಕೇಕ್ ಕತ್ತರಿಸಿ, ಹಾಡಿ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದಾರೆ. ಬಿಗ್ ಬಾಸ್ ಕಡೆಯಿಂದ ಪಟಾಕಿಗಳನ್ನು ಸಿಡಿಸಲಾಯಿತು. ಕೆಲವರು ತಮ್ಮ ಮನೆಯವರನ್ನ ನೆನೆದು ಕಣ್ಣೀರಿಟ್ಟಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top