fbpx
ಹೆಚ್ಚಿನ

ಕೇಂದ್ರದ ಎನ್ಎಂಸಿ ಮಸೂದೆ ವಿರೋಧಿಸಿ ವೈದ್ಯರ ಮುಷ್ಕರ, ಇಂದು ಖಾಸಗಿ ಆಸ್ಪತ್ರೆಯ ಹೊರರೋಗಿಗಳ ವಿಭಾಗ ಬಂದ್

ಕೇಂದ್ರದ ಎನ್ಎಂಸಿ ಮಸೂದೆ ವಿರೋಧಿಸಿ ವೈದ್ಯರ ಮುಷ್ಕರ, ಇಂದು ಖಾಸಗಿ

ಆಸ್ಪತ್ರೆಯ ಹೊರರೋಗಿಗಳ ವಿಭಾಗ ಬಂದ್

 

ಕಳೆದ ತಿಂಗಳು ರಾಜ್ಯ ಅರೋಗ್ಯ ವಿಧೇಯಕ ಮಂಡನೆಯ ಜಾರಿ ವಿರೋಧಿಸಿ ಕಳೆದ ತಿಂಗಳು ಖಾಸಗಿ ವೈದ್ಯರು ಆಸ್ಪತ್ರೆ ಬಂದ್ ಮಾಡಿ ಪ್ರತಿಭಟನೆ ಮಾಡಿದ್ದರು. ಇದರಿಂದ ಅನೇಕ ರೋಗಿಗಳಿಗೆ ಸಮಸ್ಯೆಯಾಗಿತ್ತು. ಈಗ ನ್ಯಾಷನಲ್ ಮೆಡಿಕಲ್ ಕಮಿಷನ್ (ಎನ್ಎಂಸಿ) ಮಸೂದೆ ವಿರೋಧಿಸಿ ರಾಜ್ಯದ ಕೆಲವು ಜಿಲ್ಲೆಗಳ್ಲಲಿ ವೈದ್ಯರು ಮುಷ್ಕರ ಕೈಗೊಂಡಿದ್ದಾರೆ ಇದರಿಂದ ಖಾಸಗಿ ಆಸ್ಪತ್ರೆಗಳ ಹೊರ ರೋಗಿಗಳ ವಿಭಾಗವನ್ನು ಬಂದ್ ಮಾಡಿದ್ದಾರೆ.

 

ಕೇಂದ್ರ ಸರ್ಕಾರ ರಾಷ್ಟ್ರೀಯ ವೈದ್ಯಕೀಯ ಆಯೋಗದ ಮಸೂದೆ (ಎನ್‌ಎಂಸಿ) ಕೈಬಿಡುವುದರ ಜತೆಗೆ ಕಾಯ್ದೆಯಲ್ಲಿ ತಿದ್ದುಪಡಿ ಮಾಡಿ ಸ್ವಾಯತ್ತತೆಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ| ಸುರೇಶ ಸಗರದ ಆಗ್ರಹಿಸಿದರು. ತಮ್ಮ ಬೇಡಿಕೆಗಳ ಕುರಿತು ಅನೇಕ ಬಾರಿ ಕೇಂದ್ರ ಸರ್ಕಾರ ಭರವಸೆ ನೀಡುತ್ತಾ ಬಂದಿತ್ತು. ಈ ನಿಟ್ಟಿನಲ್ಲಿ ಕಳೆದ ವರ್ಷ ನಡೆಸಬೇಕಿದ್ದ ಸತ್ಯಾಗ್ರಹ ಹಿಂಪಡೆಯಲಾಗಿತ್ತು. ಆದರೆ, ಅನಿವಾರ್ಯ ಕಾರಣಗಳಿಂದ ಪ್ರಮುಖ ನಾಲ್ಕು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮುಷ್ಕರಕ್ಕೆ ಮುಂದಾಗಬೇಕಾಗಿದೆ ಎಂದು ಸ್ಪಷ್ಟಪಡಿಸಿದರು.

 

 

ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ’ ಸಂಸ್ಥೆಯನ್ನು ಬದಲು ಮಾಡಲು ಕೇಂದ್ರ ಸರ್ಕಾರ ಹೊರಟಿದೆ. ಪಾರದರ್ಶಕ ಆಡಳಿತ ಜಾರಿಗೆ ತರಲು ಇನ್ನೊಂದು ಸಂಸ್ಥೆಯನ್ನು ಹುಟ್ಟುಹಾಕಲು ಹೊರಟಿದ್ದಾರೆ. ವಿಧೇಯಕದಲ್ಲಿರುವ ಹಲವು ನಿಯಮಗಳು ವೈದ್ಯರ ಕೆಂಗಣ್ಣಿಗೆ ಗುರಿಯಾಗಿವೆ, ಇದರಿಂದ ಇಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ ೬ ಗಂಟೆವರೆಗೂ ವೈದ್ಯರು ಮುಷ್ಕರ ಕೈಗೊಳ್ಳಲಿದ್ದಾರೆ.

 

 

ರಾಜ್ಯದ ಕಲಬುರಗಿ, ವಿಜಯಪುರ ಹಾಗು ಬೆಳಗಾವಿ ಯಲ್ಲಿ ಮುಷ್ಕರ ನಡೆಯುತ್ತಿದೆ ಹಲವು ವೈದ್ಯರು ಬೆಂಬಲ ಸೂಚಿಸಿದ್ದಾರೆ. ಪ್ರತಿಭಟನೆಯ ಕುರಿತು ಮಾತನಾಡಿದ ರಾಮಲಿಂಗಾರೆಡ್ಡಿ ಹೆಚ್ಚಿನ ಸರ್ಕಾರೀ ವೈದ್ಯರನ್ನು ನಿಯೋಜಿಸಿದ್ದೇವೆ ರೋಗಿಗಳಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top