fbpx
ಸಮಾಚಾರ

ಭಿಕ್ಷಕನಲ್ಲ – ಶ್ರೀಮಂತ ಎನ್ನಲು ‘ಆಧಾರ’ವಿದೆ!

ಭಿಕ್ಷಕನಲ್ಲ – ಶ್ರೀಮಂತ ಎನ್ನಲು ‘ಆಧಾರ’ವಿದೆ!

 

 

 

ಅವನು ಆಧಾರವಿದ್ದ ಶ್ರೀಮಂತ ಆದರೆ ಭಿಕ್ಷಕನಂತೆ ಅಲೆಯುತ್ತಿದ್ದ. ಇವನ ಅಸಲಿಯತ್ತು ಬಹಿರಂಗವಾಗಿದ್ದು ಆಧಾರ್ ಕಾರ್ಡ್‍ನಿಂದ

ಏನದು ಕಥೆ ಅದರ ಹಿಂದಿನ ವ್ಯಥೆ ಇಲ್ಲಿದೆ ವಿವರ…

ಮುತ್ತಯ್ಯ ನಡಾರ್ ಓರ್ವ ಶ್ರೀಮಂತ ಉದ್ಯಮಿ. ತಮಿಳುನಾಡಿನ ತಿರುನಲ್ವೇಲಿಯಲ್ಲಿ ನೆಲೆಸಿದ್ದ. ಇವರ ಕುಟುಂಬ ಇದೇ ಜೂನ್ ತಿಂಗಳಲ್ಲಿ ಉತ್ತರ ಪ್ರದೇಶಕ್ಕೆ ಪ್ರವಾಸಕ್ಕೆ ತೆರಳಿದ್ದರು. ಅಲ್ಲಿ ಮುತ್ತಯ್ಯ ಕಣ್ಮರೆಯಾದರು. ಅಂದಿನಿಂದಲೂ ಇವರನ್ನು ಕುಟುಂಬ ತಲಾಶ್ ಮಾಡುತ್ತಲೇ ಇತ್ತು. ಪತ್ತೆಯಾಗಿರಲಿಲ್ಲ. ಕುಟುಂಬಸ್ತರು ಪೊಲೀಸರಿಗೆ ದೂರು ನೀಡಿದ್ದರೂ ಪ್ರಯೋಜನವಾಗಲಿಲ್ಲ. ನಾಪತ್ತೆಯಾಗಿದ್ದ ವೇಳೆಯಲ್ಲಿ ಯಾರೋ ಮುತ್ತಯ್ಯಗೆ ಅಮಲಿನ ಇಂಜಕ್ಶನ್ ನೀಡಿರಬಹುದು. ಹೀಗಾಗಿ ಹಿಂದಿನ ನೆನಪು ಮೂಡಿರಲಿಲ್ಲವೆಂದು ಹೇಳಲಾಗುತ್ತಿದೆ.

 

 

 

ಅಲೆಯುತ್ತಾ ಮುತ್ತಯ್ಯ ಕಡೆಗೆ ರಾಯ್‍ಬರೇಲಿಗೆ ಬಂದರು. ಅಲ್ಲಿ ಪ್ರಬೋದ್ ಪರಮಹಂಸ ಕಾಲೇಜಿನ ಸ್ವಾಮಿ ಭಾಸ್ಕರ್ ಎಂಬುವರ ಕಣ್ಣಿಗೆ ಬಿದ್ದರು. ಹಸಿದಿದ್ದ ನಾಡಾರ್‍ಗೆ ಊಟ ಉಪಚಾರ ಮಾಡಿಸಿದರು. ಹೇರ್ ಕಟಿಂಗ್ ಮಾಡಿಸಿ, ಶುಭ್ರಗೊಳಿಸಿದರು. ಸ್ನಾನಕ್ಕೆ ತೆರಳಿದಾಗ ಇವರ ನೈಜ ಮುಖದ ಅರಿವಾಯಿತು. ಇವರ ಕಿಸೆಯಲ್ಲಿ ರೂ. 1,63,93,000 ಠೇವಣಿ ಇರುವುದು ಪತ್ತೆಯಾಯಿತು. ಜತೆಗೆ ಆಧಾರ್ ಕಾರ್ಡಿತ್ತು. ಕಾರ್ಡಿನಲ್ಲಿದ್ದ ದೂರವಾಣಿ ನಂಬರ್‍ಗೆ ಫೋನ್ ಮಾಡಿ, ಕುಟುಂಬಸ್ಥರನ್ನು ರಾಯಬರೇಲಿಗೆ ಕರೆಸಿಕೊಂಡರು.

ಮುತ್ತಯ್ಯ ಈಗ ತನ್ನ ಕುಟುಂಬದೊಂದಿಗೆ ತಿರುನಲ್ವೇಲಿಯಲ್ಲಿ ನೆಲೆಸಿದ್ದಾರೆ. ಭಿಕ್ಷಕನಲ್ಲ – ಶ್ರೀಮಂತ ಎಂಬ ಸತ್ಯ ಆಧಾರ್‍ನಿಂದ ಬಹಿರಂಗವಾಗಿದೆ.

ನೀತಿ: ಗಂಡಸರಿಗೆ ಲುಂಗಿ ಕಟ್ಟಲು ಉಡುದಾರ ಇಲ್ಲದಿದ್ದರೂ ಜನಿಸಿದ್ದಕ್ಕೆ ಆಧಾರ ಇರಲೇಬೇಕು!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top