fbpx
News

ಜಗತ್ತಿನಲ್ಲಿ ಯಾವೆಲ್ಲಾ ರೀತಿಯ ಬಿಸಿನೀರಿನ ಘಟಕಗಳಿವೆ ನೋಡಿ.

ಜಗತ್ತಿನಲ್ಲಿ ಯಾವೆಲ್ಲಾ ರೀತಿಯ ಬಿಸಿನೀರಿನ ಘಟಕಗಳಿವೆ ನೋಡಿ.

ನಮ್ಮಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳಿರುವಂತೆ ನೆರೆಯ ಚೀನಾದ ಕೆಲವು ಪ್ರಾಂತ್ಯಗಳಲ್ಲಿ ಬಿಸಿನೀರಿನ ಕೇಂದ್ರಗಳಿವೆ.

ಸ್ನಾನ ಮಾಡಲಿಕ್ಕಾ ಅಥವಾ ಇದೇನು ಅಭಿವೃದ್ಧಿ ಸಂಕೇತವೋ?

 

 

ಎರಡೂ ಅಲ್ಲ. ಆರೋಗ್ಯದ ಅಗತ್ಯಕ್ಕೆ ಇವುಗಳ ಸ್ಥಾಪನೆಯಾಗಿವೆ. 1949ರಲ್ಲಿ ಚೀನಾದ ನಗರವೊಂದರ ಸ್ಥಳೀಯ ಆಡಳಿತ ನೀರು ಪೂರೈಕೆ ಆರಂಭಿಸಿದಾಗ ಮಲಿನ ನೀರು ಹರಿದು ರೋಗಗಳು ಕಾಡಿತು. ಹಲವರು ಸಾವಿಗೂ ಶರಣಾದರು. ಆನಂತರ ಬಿಸಿ ನೀರು ಪೂರೈಕೆಯಾಗತೊಡಗಿತು. ಅದೇ ಅಭ್ಯಾಸವಾಯಿತು. ತಲೆ ಮಾರುಗಳು ಬದಲಾದರೂ ತಣ್ಣೀರು ಮರೀಚಿಕೆ. ಇಲ್ಲಿನ ಹೋಟೆಲ್‍ಗಳಲ್ಲೂ ಇದೇ ಪದ್ಧತಿ. ಕೆಲವು ಬಡಾವಣೆಗಳಲ್ಲಿ ಒಲೆ ಉರಿ ಹಾಕಿ, ಬಿಸಿನೀರು ಪೂರೈಸುವ ಖಾಸಗಿ ಕೇಂದ್ರಗಳೂ ಇವೆ.ಪಾನೀಯವೆಂಬಂತೆ ಜನ ಬಿಸಿ ನೀರು ಆಸ್ವಾದಿಸುತ್ತಾರೆ. ಹವಾಗುಣ ಯಾವುದೇ ಇರಲಿ-ಬಿಸಿ ಉಷ್ಣೋದಕವೇ ಇವರ ಆಧಾರ. ಮನೆಗೋದ್ರೆ ಮಜ್ಜಿಗೆ ಕೇಳರು-ಬಿಸಿ ನೀರು ಕೊಡುತ್ತಾರೆ.

 

 

ಮುಂಜಾನೆಯೇ ಎದ್ದು ಉಷ್ಣೋದಕ ಸೇವಿಸಿದರೆ ಪಚನ ಶಕ್ತಿ ವೃದ್ಧಿಯಾಗಲಿದೆಯಂತೆ. ಹಿಂದಿನ ರಾತ್ರಿ ಜೀರ್ಣವಾದ ಆಹಾರ ಸುಲಭವಾಗಿ ‘ಸಂಡಾಸು’ ಸೇರಲಿದೆಯಂತೆ. ಕರುಳು, ಯಕೃತ್ತು ಎಲ್ಲಕ್ಕೂ ಬಿಸಿನೀರು ಮಸ್ತ್ ಮದ್ದೆಂಬುದು ಅವರ ನಂಬಿಕೆ. ಅವರ ಪುರಾತನ ಚಿಕಿತ್ಸಾ ಪದ್ಧತಿಗಳಲ್ಲೂ ಬಿಸಿ ನೀರೇ ಶ್ರೇಷ್ಠವೆಂಬ ಉಲ್ಲೇಖವಿದೆ. ಅದನ್ನೇ ಹಲವರು ಇಂದಿಗು ಅನುಸರಿಸುತ್ತಿದ್ದಾರೆ. ಹೀಗಾಗಿಯೇ ಚೀನಿಯರು ಬಿಸಿನೀರಿನ ಥರ್ಮಾಸ್ ಪ್ಲಾಸ್ಕ್‍ಗಳನ್ನು ತಮ್ಮೊಂದಿಗೆ ಒಯ್ಯುತ್ತಾರೆ.

 

 

ಕಾಲೆಳೆಯೋದು: ಎರೆಹುಳದಿಂದ ಆನೆ ತನಕ ಸಿಕ್ಕಿದ್ದೆಲ್ಲಾ ತಿನ್ನುವ ಚೀನಿಯರಿಗೆ ಅಜೀರ್ಣವಾಗದಿರಲು ಬಿಸಿನೀರೇ ದಿವ್ಯೌಷಧ!

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top