ಮಾಹಿತಿ

ಗಂಡನ ಚಿಕಿತ್ಸೆಗೆ ದುಡ್ಡಿಲ್ಲ ಎಂದು ತನ್ನ 15 ದಿನದ ಮಗುವನ್ನು ಕೇವಲ 45 ಸಾವಿರ ರೂ.ಗೆ ಮಾರಿದ ತಾಯಿ!

ಗಂಡನ ಚಿಕಿತ್ಸೆಗೆ ದುಡ್ಡಿಲ್ಲ ಎಂದು ತನ್ನ 15 ದಿನದ ಮಗುವನ್ನು ಕೇವಲ 45 ಸಾವಿರ ರೂ.ಗೆ ಮಾರಿದ ತಾಯಿ!

 

 

ನಮ್ಮ ದೇಶ ಭಾರತ ಒಂದು ಬಡ ರಾಷ್ಟ್ರ ಎಂದು ಸ್ವಾತಂತ್ರ ಬಂದಾಗಿನಿಂದಲೂ ಹೇಳಿಕೊಂಡು ಬಂದಿದ್ದೇವೆ ಆ ಮಾತು ಈಗಲೂ ಅಷ್ಟೇ ಪ್ರಸ್ತುತವಾದುದ್ದು ಏಕೆಂದರೆ ಸಿರಿವಂತರು ದೇಶದ ಸಂಪತ್ತನ್ನು ತಮ್ಮ ಹೊಟ್ಟೆಯಲ್ಲಿ ತುಂಬಿಸಿಕೊಳ್ಳುತ್ತಿದ್ದರೆ ಕೆಳವರ್ಗದ ಜನರು ಈಗಲೂ ಅದೇ ಸ್ಥಿತಿಯಲ್ಲಿಯೇ ಇದ್ದಾರೇ. ನಮ್ಮ ದೇಶದಲ್ಲಿ ಇಂದಿಗೂ ವ್ಯವಸ್ಥೆ ಸರಿ ಇಲ ಎನ್ನುವುದಕ್ಕೆ ಇಂದಿನ ಈ ಕರುಣಾಜಕ ಕಥೆಯೂ ಕೂಡ ಒಂದು ಸಾಕ್ಷಿ,

 

 

ಉತ್ತರ ಪ್ರದೇಶದ ಬಡ ಮಹಿಳೆಯೊಬ್ಬಳು ತನ್ನ ಸ್ವಂತ ಹದಿನೈದು ದಿನದ ನವಜಾತ ಶಿಶುವನ್ನು ಮಾರಿದ್ದಾಳೆ ಅದೂ ಕೇವಲ 45 ಸಾವಿರ ರೂಪಾಯಿಗಳಿಗೆ. ಕಾರಣ ಬಡತನದ ಬೇಗೆ, ಈ ಮಹಿಳೆಯ ಗಂಡ ಕೆಲವು ದಿನಗಳಿಂದ ಸಾಂಕ್ರಾಮಿಕ ಕಾಯಿಲೆಯಿಂದ ಬಳಲುತ್ತಿದ್ದು ಚಿಕಿತ್ಸೆಗೆ ಸಾವಿರಗಟ್ಟಲೆ ಖರ್ಚಾಗುತ್ತದೆ ಎಂದು ಆಸ್ಪತ್ರೆಯ ಡಾಕ್ಟರ್’ಗಳೇ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ. ಈ ಬಗ್ಗೆ ಸಹಾಯ ಕೋರಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರೂ ಯಾವ ಪ್ರಯೋಜನವೂ ಆಗಿರಲಿಲ್ಲ.

 

 

ಆಗ ತನ್ನ ಗಂಡನನ್ನು ಉಳಿಸಿಕೊಳ್ಳಲು ವಿಧಿ ಇಲ್ಲದೆ ತನ್ನ ಮಗುವನ್ನು ಮಾರಿದ್ದಾಳೆ. ಹೇಗೋ ಅದೃಷ್ಟವಶಾತ್ ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಆಕೆಯ ಮಗುವನ್ನು ಬಿಡಿಸಿಕೊಟ್ಟು ಅವಳ ಗಂಡನ ಆಸ್ಪತ್ರೆಯ ಖರ್ಚನ್ನು ಕೂಡ ಭರಿಸುವುದಾಗಿ ಹೇಳಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top