fbpx
ಭವಿಷ್ಯ

2 ಜನವರಿ : ನಿತ್ಯಭವಿಷ್ಯ ಮತ್ತೆ ಪಂಚಾಂಗ

ಮಂಗಳವಾರ, ೦೨ ಜನವರಿ ೨೦೧೮
ಸೂರ್ಯೋದಯ : ೦೬:೪೫
ಸೂರ್ಯಾಸ್ತ : ೧೮:೦೧
ಶಕ ಸಂವತ : ೧೯೩೯ ಹೇವಿಲಂಬಿ
ಅಮಂತ ತಿಂಗಳು : ಪುಷ್ಯ
ಪಕ್ಷ : ಶುಕ್ಲ ಪಕ್ಷ
ತಿಥಿ : ಹುಣ್ಣಿಮೆ
ನಕ್ಷತ್ರ : ಆರಿದ್ರ
ಯೋಗ : ಇಂದ್ರ
ಪ್ರಥಮ ಕರಣ : ಬವ
ಸೂರ್ಯ ರಾಶಿ : ಧನು
ಅಭಿಜಿತ್ ಮುಹುರ್ತ : ೧೨:೦೧ – ೧೨:೪೬
ಅಮೃತಕಾಲ : ೩೦:೪೩+ – ೩೨:೦೭+
ರಾಹು ಕಾಲ: ೧೫:೧೨ – ೧೬:೩೬
ಗುಳಿಕ ಕಾಲ: ೧೨:೨೩ – ೧೩:೪೮
ಯಮಗಂಡ: ೦೯:೩೪ – ೧೦:೫೯

ಮೇಷ ರಾಶಿ


ನೀವು ಯಾರನ್ನು ಅತಿ ವಿಶ್ವಾಸಾರ್ಹರು ಎಂದು ತಿಳಿದುಕೊಂಡಿದ್ದೀರೋ ಅವರಿಂದಲೇ ಈ ವಾರ ವಂಚನೆಗೆ ಒಳಗಾಗುವ ಸಂಭವವಿರುತ್ತದೆ.ಸರಿ,ತಪ್ಪುಗಳನ್ನು ಅರಿತು ಮುಂದುವರೆಯುವುದು ಬುದ್ಧಿವಂತರ ಲಕ್ಷಣ.ಖಾಸಗಿ ಕಂಪನಿ ನೌಕರರು ತಮ್ಮ ಕೆಲಸ ಕಾರ್ಯಗಳಲ್ಲಿ ಉತ್ಸಾಹ ಕಳೆದುಕೊಳ್ಳುವರು.
ನಿಮ್ಮ ಹೆಸರನ್ನು ಬೇರೆಯವರು ದುರುಪಯೋಗ ಪಡೆಸಿಕೊಳ್ಳುವರು. ಜೀವನವನ್ನು ಮತ್ತೊಬ್ಬರೊಂದಿಗೆ ಹೋಲಿಸಿಕೊಳ್ಳುವುದು ಥರವಲ್ಲ. ವಾರಾಂತ್ಯದಲ್ಲಿ ಉದ್ಯೋಗದಲ್ಲಿ ಬದಲಾವಣೆ ಕಂಡು ಬರುವುದು.

ವೃಷಭ

ಸಹೋದ್ಯೋಗಿಗಳ ವಿಶ್ವಾಸವನ್ನು ಗಳಿಸುವ ನಿಮಗೆ ಅವರಿಂದಲೇ ಹೆಚ್ಚು ಹಣಕಾಸಿನ ನೆರವು ದೊರೆಯುವುದು.ಉದ್ಯೋಗಸ್ಥ ಮಕ್ಕಳಿಂದ ಹಣದ ಸಹಾಯ ದೊರೆಯುವುದು. ಹಣಕಾಸಿನ ವಿಚಾರದಲ್ಲಿ ಯಾರನ್ನು ನಂಬದಿರುವುದೇ ಕ್ಷೇಮ.
ಆಸ್ತಿ ಸಂಬಂಧಿತ ವ್ಯಾಜ್ಯಗಳನ್ನು ರಾಜಿ ಪಂಚಾಯ್ತಿಯಲ್ಲಿ ಬಗೆಹರಿಸಿಕೊಳ್ಳುವುದು ಉತ್ತಮ.ಸೋದರನ ಗೃಹ ನಿರ್ವಹಣೆಗೆ ಅಧಿಕ ಖರ್ಚು ಬರುವುದರಿಂದ ಲಕ್ಷ್ಮೀ ಸ್ತೋತ್ರ ಪಠಿಸಿರಿ.ಮಗನ ದಾಂಪತ್ಯ ಜೀವನದಲ್ಲಿ ಸಂತಸ ಮೂಡುವುದು.

ಮಿಥುನ (Mithuna)

ಗೃಹ ವ್ಯವಹಾರಕ್ಕೆ ಸಂಬಂಧಪಟ್ಟ ವಿವಾದವೊಂದು ಅನಿರೀಕ್ಷಿತ ತಿರುವು ಪಡೆಯಲಿದೆ.ಇದರಲ್ಲಿ ನಿಮ್ಮ ಪಾತ್ರವಿಲ್ಲದಿದ್ದರೂ ಅನಾವಶ್ಯಕ ಆಪಾದನೆ ಬರುವುದು.ಈ ವಿಷಯದಲ್ಲಿ ಸಾಕಷ್ಟು ಜಾಗೃತರಾಗಿರಿ.ನಿರುದ್ಯೋಗಿ ಸೋದರನಿಗೆ ಸಾಧಾರಣ ವೇತನದ ನೌಕರಿ ದೊರೆಯಲಿದೆ.ತಾತ್ಕಾಲಿಕವಾಗಿ ಅದನ್ನು ಮಾಡುವುದು ಒಳ್ಳೆಯದು.
ಹಿರಿಯರ ಸಲಹೆಗಳು ಸೂಕ್ತವಾಗಿದ್ದಲ್ಲಿ ಸ್ವೀಕರಿಸಿ,ಮಕ್ಕಳ ವಿದ್ಯಾಭ್ಯಾಸದಲ್ಲಿ ಸಾಕಷ್ಟು ಪ್ರಗತಿ ಕಂಡು ಬರಲಿದೆ.ಬೇರೆಯವರ ನಿಮ್ಮಿತವಾಗಿ ಮಾಡುವ ಪ್ರಯಾಣದ ಖರ್ಚು,ನೀವೇ ಮಾಡಬೇಕಾಗುವುದು.

ಕರ್ಕ (Karka)

ಪರಸ್ಪರ ಆಲೋಚನೆ, ವಿಚಾರ, ವಿನಿಮಯದಿಂದ ಮಾತ್ರ ಅಂದುಕೊಂಡ ಕಾರ್ಯಗಳು ಕೈಗೂಡಲಿವೆ. ಮಾಡುವ ದಾನಗಳು ಯೋಗ್ಯರಿಗೆ ಮುಟ್ಟುವಂತೆ ನೋಡಿಕೊಳ್ಳಿ.ಯಾರಾದರೂ ಕೇಳಿದಲ್ಲಿ ಮಾತ್ರ ಸಲಹೆಗಳನ್ನು ನೀಡಿರಿ.ಹುದ್ದೆಯಲ್ಲಿ ಮುಂಬಡ್ತಿಯೊಂದಿಗೆ ವೇತನದಲ್ಲಿ ಹೆಚ್ಚಳ ಕಂಡು ಬರಲಿದೆ.
ಮತ್ತೊಬ್ಬರ ವ್ಯವಹಾರದಲ್ಲಿ ಮಧ್ಯಸ್ಥರಾಗುವುದರಿಂದ ನೀವು ನಷ್ಟ ಅನುಭವಿಸಬೇಕಾಗುವುದು.ವಿಶೇಷ ಔತಣಕೂಟಗಳಲ್ಲಿ ಭಾಗವಹಿಸುವಿರಿ.ಮಡದಿಯ ಆರೋಗ್ಯದಲ್ಲಿ ವ್ಯತ್ಯಯ ಕಂಡು ಬರುವುದು.ಸೂಕ್ತ ಚಿಕಿತ್ಸೆ ಕೊಡಿಸಿರಿ.

ಸಿಂಹ (Simha)


ದೇವತಾನುಗ್ರಹವಿರುವುದರಿಂದ ನಿಮ್ಮ ನಿರೀಕ್ಷಿತ ಕೆಲಸಕಾರ್ಯಗಳು ನಿಶ್ಚಿತ ರೂಪದಲ್ಲಿ ನಡೆದು ಹೋಗಲಿವೆ. ಉದ್ಯೋಗಿಗಳಿಗೆ ಉತ್ತಮ ಉದ್ಯೋಗದ ಅವಕಾಶಗಳು ಸಿಗಲಿವೆ. ದಿನಾಂತ್ಯ ಶುಭ.

ಕನ್ಯಾರಾಶಿ (Kanya)


ಅನಿರೀಕ್ಷಿತ ವೃತ್ತಿ ಕ್ಷೇತ್ರದಲ್ಲಿ ಅಪವಾದ ಭೀತಿ ತಂದೀತು. ಶುಭಮಂಗಲ ಕಾರ್ಯಗಳಿಗೆ ಅವಸರ ಮಾಡದಿರಿ. ಸದ್ಯದಲ್ಲೇ ವೃತ್ತಿ ಕ್ಷೇತ್ರದಲ್ಲಿ ಮುಂಭಡ್ತಿ ಯೋಗವಿದೆ. ವಿದ್ಯಾರ್ಥಿಗಳಿಗೆ ಶುಭ ಫ‌ಲಿತಾಂಶ.

ತುಲಾ (Tula)


ಆಧಿಕ ನಿರ್ಧಾರಗಳು ನಿಮ್ಮ ಚಿಂತನೆ ಮೇಲೆ ಹೊಂದಿ ಕೊಂಡಿರುತ್ತದೆ. ಧೈರ್ಯದಿಂದ ಮುಂದುವರಿಯಿರಿ. ವೈಯಕ್ತಿಕ ಆರೋಗ್ಯದ ಬಗ್ಗೆ ಗಮನ ಹರಿಸಬೇಕು. ದಾಂಪತ್ಯದಲ್ಲಿ ಉತ್ತಮ ಹೊಂದಾಣಿಕೆ ಇರುತ್ತದೆ.

ವೃಶ್ಚಿಕ (Vrushchika)


ವಿದ್ಯಾರ್ಥಿಗಳಿಗೆ ತಮ್ಮ ಉತ್ತಮ ಭವಿಷ್ಯದಂತೆ ಮುನ್ನಡೆಗೆ ಸಕಾಲ. ಯೋಗ್ಯ ವಯಸ್ಕರು ಕಂಕಣಬಲವನ್ನು ಹೊಂದಲಿದ್ದಾರೆ. ವಿದ್ಯಾರ್ಥಿಗಳಿಗೆ ಶುಭವಿದೆ. ಅತಿಥಿಗಳ ಆಗಮನದಿಂದ ಸಂತಸ.

ಧನು ರಾಶಿ (Dhanu)


ಅಜ್ಞಾನವನ್ನು ನೀಗಿಸುವ ನಿಮ್ಮ ಕ್ರಿಯಾಶೀಲತೆಯು ನಿಮ್ಮ ಬೆಳವಣಿಗೆಗೆ ಸಾರ್ಥಕ ಕಾಣಿಕೆಯೊಂದನ್ನು ನೀಡಲಿದೆ.

ಮಕರ (Makara)


ಮಾತುಗಳು ನಿಮ್ಮ ಜೀವಂತಿಕೆಯೇ ಆಗಿದೆಯಾದರೂ, ಕೃತಘ್ನರು ಮಾತಿನಿಂದ ನಿಮಗೆ ಪೇಚು ತಂದಾರು.

ಕುಂಭರಾಶಿ (Kumbha)


ಹೊಸ ರೀತಿಯ ಬದಲಾವಣೆಗಳಿಗಾಗಿ ಈಗ ಯೋಚಿಸಬಹುದಾಗಿದೆ. ನಿಮ್ಮ ಚಾತುರ್ಯಕ್ಕೆ ಗೆಲುವು ಲಭ್ಯ.

ಮೀನರಾಶಿ (Meena)


ವಸತಿಯ ಸ್ಥಳದ ಬದಲಾವಣೆಗಾಗಿ ಬೆಳವಣಿಗೆಯೊಂದು ತೀರ ಅನಿರೀಕ್ಷಿತವಾಗಿ ಎದುರಾಗಬಹುದಾಗಿದೆ. .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top