fbpx
ಮಾಹಿತಿ

ವಾಸನೆ ಕಂಡು ಹಿಡಿಯುವ ನಾಯಿಯೇ ಮೂಸಿ ಮೂರ್ಚೆ ಬಿದ್ದರೆ ಏನ್ ಮಾಡೋದು ?

ಮೂಸುವ ನಾಯಿ ಮೂರ್ಚೆ ಹೋದರೇ…?

 

 

 

ವಾಸನೆ ರಹಿತ ಕಾಲಿದ್ದರೆ ‘ಹನ್-ಚಾನ್’ ಬಾಲ ಆಡಿಸಿ ಸ್ವಾಗತಿಸುತ್ತದೆ. ಅಲ್ಪ ಪ್ರಮಾಣದ ವಾಸನೆ ಇದ್ದರೆ ಬೊಗಳೀತು. ದುರ್ಗಂಧ ಬೀರುವ ಕಾಲಿದ್ದರೆ ಮೂರ್ಚೆ ಬೀಳಲಿದೆ! ಅಂತಹ ವಿಶಿಷ್ಟ ಶ್ವಾನವಿದು.

ನಿಜವಾ?

ಹೌದು. ಆದರೆ ಇದು ಜೀವಂತ ನಾಯಿಯಲ್ಲ. ಬದಲಿಗೆ ಕಾಲ್ಗುಣ ಪತ್ತೆ ಹಚ್ಚಲೆಂದೇ ಜಪಾನೀಯರು ಸೃಷ್ಟಿಸಿರುವ ಕೃತಕ ಕುತ್ತೆಯಿದು.

ಈ ಸಂಶೋಧನೆ ಏಕೆ?

 

 

 

ಪಾದಗಳಿಂದ ಅತಿ ಬೆವರು ಬಂದಲ್ಲಿ ಅಂತಹವರು ಶೂ ಧರಿಸಿದ್ದರೆ ಗಬ್ಬುನಾಥ ಬರಲಿದೆ. ಸೂಕ್ಷ್ಮ ಮೂಗಿನ ಹೈಟೆಕ್ ಜನರಿಗೆ ಇದು ವಾಕರಿಕೆ ತರಿಸಲಿದೆ. ಹೀಗಾಗಿ ಶೂ ಧರಿಸಿ ಬರುವವರೆಂದರೆ ಇವರಿಗೆ ಅಲರ್ಜಿ. ‘ಪಾದಬೆವರಿಗಳು’ ಮೀಟಿಂಗ್‍ಗೆ ಬಂದರೆ ಕುಳಿತು ಭೋಜನ/ಚರ್ಚೆ ಮಾಡುವುದು ಹೇಗೆ? ಈ ‘ಸೂಕ್ಷ್ಮಮೂಗಿಗಳು’ ಇಂತಹ ಶ್ವಾನಗಳ ಸಂಶೋಧನೆಗೆ ಸುಪಾರಿ ಕೊಟ್ಟಿದ್ದಾರೆ.

ನಾಯಿ ‘ಬಾಲಆಡಿಸಿ’ ಸ್ವಾಗತ ಹೇಳುವ ಮಂದಿಗೆ ಮಣೆಹಾಕುತ್ತಾರೆ. ಬೊಗಳಿಸಿ ಕೊಂಡವರಿಗೆ ಶೂ ರಹಿತವಾಗಿ ಬರಲು ಸೂಚಿಸುತ್ತಾರೆ. ನಾಯಿ ಮೂರ್ಚೆ ಹೋದವರಿಗೆ ಆಚೆಯೇ ನಿಲ್ಲುವಂತೆ ಅಪ್ಪಣೆ ಮಾಡುತ್ತಾರೆ!

ಯಾರದ್ದು ಈ ಆವಿಷ್ಕಾರ?

ಜಪಾನ್‍ನ ‘ರಾಷ್ಟ್ರೀಯ ತಾಂತ್ರಿಕ ಸಂಸ್ಥೆ’ ಈ ರೋಬೋ ನಾಯಿಯ ಸೃಷ್ಟಿಕರ್ತರಾಗಿದ್ದಾರೆ. ಇವುಗಳಲ್ಲಿ ವಾಸನೆ ಗ್ರಹಿಸಿ-ಸ್ಪಂಧಿಸುವ ‘ಸೆನ್ಸಾರ್’ಗಳನ್ನು ಅಳವಡಿಸಲಾಗಿದ್ದು ಅದೇ ಇವುಗಳ ಚೇತನ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top