fbpx
News

ಈ ಹೋಟೆಲ್ ನಲ್ಲಿ ಜನ ಮಲ್ಕೊಂಡು ಕೂಡ ಊಟ ಮಾಡ್ತಾರೆ.

ಈ ಹೋಟೆಲ್ ನಲ್ಲಿ ಜನ ಮಲ್ಕೊಂಡು ಕೂಡ ಊಟ ಮಾಡ್ತಾರೆ.

 

 

ನಮ್ಮ ದರ್ಶನಿ/ಹೋಟೆಲ್‍ಗಳಲ್ಲಿ ನಿಂತು/ಕೂತು ತಿನ್ನೋರು ಇದ್ದಾರೆ. ಆದರೆ ಬಿದ್ಕೊಂಡು ತಿನ್ನೋರು ಕೂಡ ಇದ್ದಾರೆ ಗೊತ್ತಾ…?

ಗೊತ್ತು… ದ್ರಾಕ್ಷಿ… ತಾಂಬೂಲ!

 

 

ಛೇ ಛೇ…ತಡರಾತ್ರಿಯ ಗಂಡ-ಹೆಂಡತಿಯ ಟೈಪ್‍ನಲ್ಲಿ ಯೋಚಿಸದೆ, ಅಕ್ಷರಶಃ ಮಲಗಿ ತಿನ್ನಬಹುದಾದ ಸುದ್ದಿ ಇಲ್ಲಿದೆ…ಲಂಡನ್‍ನ ಲಿಯೋನಾರ್ಡ್ ರಸ್ತೆಯಲ್ಲಿನ ಇಕಿಯ ಬೆಡ್‍ಕೆಫೆ ಹೊಟೆಲ್‍ನಲ್ಲಿ ಮಲಗಿ ತಿನ್ನಬಹುದು.

ಅಂದಹಾಗೆ ಈ ಕೆಫೆಯಲ್ಲಿ ಲಭ್ಯವಿರುವ ಖಾದ್ಯಕ್ಕೆ ಆರ್ಡರ್ ಹೇಳಿ ಪವಡಿಸಿದರೆ ಪರಿಚಾರಿಕೆಯರು ಮಂಚದ ಬಳಿಗೇ ಬಂದು ಬಡಿಸಿ ಹೋಗುತ್ತಾರೆ.

ದಿಂಬು, ಹೊದೆಯಲು ಹೊದಿಕೆ ಮೃದುವಾದ ಹಾಸಿಗೆ ಎಲ್ಲವೂ ಇದೆ. ಮಕ್ಕಳು ಇಲ್ಲಿನ ಮೃದುವಾದ ಹಾಸಿಗೆಗಳ ಮೇಲೆ ಹತ್ತಿ ಕುಣಿಯಲು ಅಭ್ಯಂತರವಿಲ್ಲ.

 

 

ಮಧ್ಯಾಹ್ನದ ಊಟಕ್ಕೆ ಕುಳಿತವರಿಗೆ ಕ್ಷಮಿಸಿ… ಮಲಗಿದವರಿಗೆ ಊಟ ಬಡಿಸಿ ಲೈಟ್ ಆಫ್ ಮಾಡಿ ನಿದ್ದೆಗೆ ಅವಕಾಶ ಮಾಡಿಕೊಡುತ್ತಾರೆ. ಅಲ್ಲದೆ, ಮನೆಗಳಲ್ಲಿ ಹೇಗೆ ನಿದ್ದೆ ಮಾಡಬೇಕು? ಮಲಗುವ ಕೋಣೆ ಹೇಗಿರಬೇಕು… ಎಂದೆಲ್ಲಾ ಪಾಠ ಹೇಳುತ್ತಾರೆ…

ಇವರ ಪಾಠ ಕೇಳುತ್ತಿದ್ದಾಗಲೇ ನಿದ್ದೆ ಬಂದರೆ?

ನಿದ್ದೆ ಮಾಡಲು ಅಡ್ಡಿಯಿಲ್ಲ.

 

 

ಬೆಡ್ ಫುಡ್ ಅಜೀರ್ಣವಾಗಿ ‘ಮಲ’ಗಿದ್ದಲ್ಲೇ ಬಂದ್ರೇ….?

ಬೆಡ್‍ಪ್ಯಾನ್ ಹಿಡಿಯೋದಿಲ್ಲ. ಹುಡುಕಿ ಮಾಡಿ ಬರಬೇಕು.

ಇಕಿಯಾ ಹೋಟೆಲ್‍ನ ‘ಮಲಗೂಟ’ಕ್ಕೆ ಭಾರಿ ರೊಕ್ಕ ಕೊಡಬೇಕು. ಕೊಡದಿದ್ದರೆ ಇಕಿಯಾ ಮಂದಿ ‘ಇಕ್ಕಿ’ಬಿಡ್ತಾರೆ!

ಕೂತು ಉಂಡ್ರೆ ಕುಡಿಕೆ ಹೊನ್ನು ಸಾಲದು ಅಂತಾರೆ ಮಲಗಿ ಉಂಡ್ರೆ ಮಡಕೆ ಹೊನ್ನು ಸಾಲದು ಎನ್ನಲು ಅಡ್ಡಿಯಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top