fbpx
ಹೆಚ್ಚಿನ

2 ಟಾರ್ಚ್ ಬೆಳಕಿನಲ್ಲಿ 32 ಜನರ ಕಣ್ಣಿನ ಶಸ್ತ್ರ ಚಿಕಿತ್ಸೆ. ಉತ್ತರ ಪ್ರದೇಶ ಸರ್ಕಾರಿ ಆಸ್ಪತ್ರೆಯ ದುಃಸ್ಥಿತಿ!

2 ಟಾರ್ಚ್ ಬೆಳಕಿನಲ್ಲಿ 32 ಜನರ ಕಣ್ಣಿನ ಶಸ್ತ್ರ ಚಿಕಿತ್ಸೆ.
ಉತ್ತರ ಪ್ರದೇಶ ಸರ್ಕಾರಿ ಆಸ್ಪತ್ರೆಯ ದುಃಸ್ಥಿತಿ!

 

ಉತ್ತರ ಪ್ರದೇಶದ ಉನ್ನಾವ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ವಿಭಾಗದಲ್ಲಿ ನಡೆದಿರುವ ಶಸ್ತ್ರ ಚಿಕಿತ್ಸೆಯೊಂದು ಸದ್ಯಕ್ಕೆ ಸಾಕಷ್ಟು ಸದ್ದು ಮಾಡಿದೆ.ಏಕೆಂದರೆ ಕಣ್ಣಿಗೆ ಸಂಬಂಧಿಸಿದ ಕ್ಯಾಟರೆಕ್ಟ್ ಶಸ್ತ್ರಚಿಕಿತ್ಸೆ (ಕಣ್ಣಿನ ಪೊರೆತೆಗೆಯುವ ಸಂಬಂಧ) ಕೇವಲ ಎರಡು ಟಾರ್ಚ್‍ನ ಬೆಳಕಿನಲ್ಲಿ ನಡೆದಿದೆ. ಅದು ಬರೋಬ್ಬರಿ 32 ಮಂದಿಗೆ!

 

 

ಹೌದು… ಖಾಸಗಿ ಎನ್‍ಜಿಒ ಒಂದು 32 ಮಂದಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಲೆಂದು ನವಾಬ್‍ ಗಣಿ ಹೆಲ್ತ್ ಕೇರ್ ಸೆಂಟರ್‍ಗೆ ಕರೆ ತಂದಿದೆ.ಆದರೆ ಇಲ್ಲಿ ಯಾವುದೇ ಪ್ರಾಥಮಿಕ ಸೌಲಭ್ಯಗಳು ವ್ಯವಸ್ಥಿತವಾಗಿಲ್ಲ.

ಎಲೆಕ್ಟ್ರಿಸಿಟಿ ಸೌಲಭ್ಯವನ್ನು ಹೊಂದಿರದ ಈ ಆಸ್ಪತ್ರೆ ಸರ್ಕಾರದ ಅಅವ್ಯವಸ್ಥೆಗೆ ಕನ್ನಡಿಯಂತಿದೆ.

 

 

 

ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಉತ್ತರ ಪ್ರದೇಶದ ಆರೋಗ್ಯ ಸಚಿವ ಸಿದ್ಧಾರ್ಥನಾಥ್ ಸಿಂಗ್, ಉನ್ನಾವನ ಆರೋಗ್ಯಾಧಿಕಾರಿ ರಾಜೇಂದ್ರ ಪ್ರಸಾದ್‍ ಅವರನ್ನ ಆ ಹುದ್ದೆಯಿಂದ ತೆಗೆದಿದ್ದಾರೆ.

ಇಲ್ಲಿ ಕೇವಲ ವಿದ್ಯುತ್‍ ಅವ್ಯವಸ್ಥೆ ಮಾತ್ರವಲ್ಲ; ಹಾಸಿಗೆ, ಹೊದಿಕೆ ಸೇರಿದಂತೆ ಪ್ರತಿಯೊಂದಕ್ಕೆ ಪರದಾಟವಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top