Astrology

ಈ ರಾಶಿಗಳಲ್ಲಿ ಹುಟ್ಟಿದವರು ಮೂವತ್ತು ವರ್ಷದೊಳಗೆ ಕಷ್ಟಗಳು ಕಳೆದು ಹಣಕಾಸಿನ ವಿಷಯದಲ್ಲಿ ಉತ್ತಮರಾಗುತ್ತಾರೆ !

ಈ ರಾಶಿಗಳಲ್ಲಿ ಹುಟ್ಟಿದವರು ಮೂವತ್ತು ವರ್ಷದೊಳಗೆ ಕಷ್ಟಗಳು ಕಳೆದು ಹಣಕಾಸಿನ ವಿಷಯದಲ್ಲಿ ಉತ್ತಮರಾಗುತ್ತಾರೆ !

ಈ ರಾಶಿಗಳಲ್ಲಿ ಹುಟ್ಟಿದವರು ಮೂವತ್ತು ವರ್ಷದೊಳಗೆ ಶ್ರೀಮಂತರಾಗುತ್ತಾರೆ.

ಕೆಲವು ರಾಶಿಗಳು ಬಹಳ ಅದೃಷ್ಟವಂತ ರಾಶಿಗಳು. ಅವುಗಳಲ್ಲಿ ಜನಿಸಿದವರು ಸಾಮಾನ್ಯವಾಗಿ ಹೆಚ್ಚು ಖುಷಿ ಹಾಗೂ ಶ್ರೀಮಂತಿಕೆಯನ್ನು ಅನುಭವಿಸುತ್ತಾರೆ. ಕೆಲವು ಮೂಲಗಳು ಹೇಳುವ ಪ್ರಕಾರ ಹನ್ನೆರಡು ರಾಶಿಗಳಲ್ಲಿ ಐದು ರಾಶಿಯವರು ಬಹಳ ಅದೃಷ್ಟವನ್ನು ತಂದು ಕೊಡುತ್ತದೆ. ಆ ರಾಶಿಯಲ್ಲಿ ಜನಿಸಿದವರು ತಮ್ಮ ಮೂವತ್ತು ವರ್ಷದೊಳಗೆ ಅತ್ಯಂತ ಹಿರಿಮೆಯ ಸಾಧನೆ ಹಾಗೂ ಶ್ರೀಮಂತಿಕೆಯನ್ನು ಅನುಭವಿಸುತ್ತಾರೆ ಎಂದು ಹೇಳಲಾಗುತ್ತದೆ. ಆ ರಾಶಿಗಳು ಯಾವುವು ಎಂದರೆ…

 

ಕನ್ಯಾ ರಾಶಿ.

ಈ ರಾಶಿಯಲ್ಲಿ ಜನಿಸಿದವರು ಬಹಳ ನಿರ್ಧಾರಯುತ ಪ್ರವೃತ್ತಿಯನ್ನು ಹೊಂದಿರುತ್ತಾರೆ. ತಾವು ಮಾಡುವ ಕೆಲಸದ ಸಂಪೂರ್ಣ ವಿವರ ಪಡೆಯುವುದಕ್ಕೆ ಮತ್ತು ಅದರ ಏಳಿಗೆಗಾಗಿ ಎಲ್ಲ ಶ್ರಮವನ್ನು ವ್ಯಯಿಸುತ್ತಾರೆ. ಇವರು ತಮ್ಮ ಜೀವನದಲ್ಲಿ ಬಹುಬೇಗ ಶ್ರೀಮಂತಿಕೆ ಹಾಗೂ ಹೆಚ್ಚಿನ ಹಣವನ್ನು ಗಳಿಸುತ್ತಾರೆ. ಇವರು ತಮ್ಮ ಗುರಿಯನ್ನು ಸಾಧಿಸಲು ಬೇಕಾದ ಎಲ್ಲ ಕೆಲಸಗಳನ್ನು ನೆರವೇರಿಸುತ್ತಾರೆ .
ಅದೃಷ್ಟದ ಚಿಹ್ನೆ ಇವರಿಗೆ ಭೂಮಿ ಇದರಿಂದ ಭೂಮಿಗೆ ಸಂಬಂಧಿಸಿದ ಕೆಲಸಗಳಲ್ಲಿ ಅಥವಾ ಹಣ ಹೂಡಿಕೆಯಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಹಣವನ್ನು ಗೌರವಿಸುವ ಇವರು ಅದರ ಸುತ್ತ ಆಯ ವ್ಯಯ ಹಾಗೂ ಉಳಿತಾಯದ ಬಗ್ಗೆ ಅರಿತಿರುತ್ತಾರೆ.

 

ವೃಷಭ ರಾಶಿ.

ಇವರು ಅತ್ಯಂತ ಶ್ರಮಜೀವಿಗಳು ಶ್ರಮಪಟ್ಟು ದುಡಿದು ಹೇಗೆ ಹಣ ಗಳಿಸಬೇಕು ಎನ್ನುವುದನ್ನು ಅರಿತಿರುತ್ತಾರೆ. ಅಲ್ಲದೇ ಜೀವನದಲ್ಲಿ ವಿನೋದದಿಂದ ಹೇಗೆ ಬದುಕಬೇಕು ಎನ್ನುವುದನ್ನು ಅರಿತಿರುತ್ತಾರೆ. ಇವರು ಸ್ವಭಾವ ಸ್ವಲ್ಪ ಮೊoಡಾಗಿದ್ದರೂ ಸಹ ಯಾವ ಕೆಲಸವನ್ನು ಮಾಡಬೇಕು ? ಎನ್ನುವ ವಿಚಾರದ ಕುರಿತು ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ತಮ್ಮ ಹಣವನ್ನು ಬಹಳ ಎಚ್ಚರಿಕೆಯಿಂದ ವ್ಯಯ ಮಾಡುತ್ತಾರೆ. ಇತರೆ ರಾಶಿ ಚಕ್ರಗಳಿಗೆ ಹೋಲಿಸಿದರೆ ಹೆಚ್ಚು ಹಣವನ್ನು ಉಳಿಸಬಲ್ಲರು.
ಜೀವನದಲ್ಲಿ ಹೆಚ್ಚು ಸ್ಥಿರತೆ ಮತ್ತು ಸುರಕ್ಷತೆಗೆ ಹೆಚ್ಚು ಬೆಲೆ ಕೊಡುತ್ತಾರೆ. ತಮ್ಮ ಮೂವತ್ತು ವರ್ಷದೊಳಗೆ ಹೆಚ್ಚು ಹಣವನ್ನು ಸಂಪಾದಿಸಿ ಐಷಾರಾಮಿ ಜೀವನವನ್ನು ಹೊಂದಿರುವ ಇವರು ತಮ್ಮ ಕನಸುಗಳನ್ನು ಸಾಧಿಸಲು ಬಹಳ ತಾಳ್ಮೆಯಿಂದ ಮತ್ತು ನಿರಂತರವಾಗಿ ಕೆಲಸ ಕೈಗೊಳ್ಳುತ್ತಾರೆ.

 

 

ವೃಶ್ಚಿಕ ರಾಶಿ.

ಈ ರಾಶಿಯವರು ಅರ್ಥಗರ್ಭಿತ ಮತ್ತು ಅತೀಂದ್ರಿಯ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಇವರಲ್ಲಿರುವ ಉತ್ತಮ ಆತ್ಮ ವಿಶ್ವಾಸದಿಂದಲೇ ಎಲ್ಲವನ್ನೂ ಸಾಧಿಸಿ ತೋರಿಸುತ್ತಾರೆ. ಶೈಕ್ಷಣಿಕವಾಗಿ ಉತ್ತಮ ಯಶಸ್ಸು ಹೊಂದುವ ಇವರು ಚಿಕ್ಕ ವಯಸ್ಸಿನಲ್ಲೇ ಅಧಿಕ ಹಣ ಹಾಗೂ ಉತ್ತಮ ಕೆಲಸವನ್ನು ಪಡೆದುಕೊಳ್ಳುತ್ತಾರೆ. ಸುಲಭವಾಗಿ ತಮ್ಮನ್ನು ತಾವು ಹೇಗೆ ಕಾಪಾಡಿಕೊಳ್ಳಬಹುದು ಎನ್ನುವುದನ್ನು ಅರಿತಿರುತ್ತಾರೆ. ತಮ್ಮ ತಪ್ಪುಗಳಿಂದ ಉಂಟಾದ ಪರಿಣಾಮಗಳ ಬಗ್ಗೆ ಸೂಕ್ತ ರೀತಿಯಲ್ಲಿ ಪಾಠ ಕಲಿತು ಅದರ ವಿಶ್ಲೇಷಣೆ ಮಾಡಿಕೊಳ್ಳುತ್ತಾರೆ. ಸ್ಪರ್ಧಾತ್ಮಕ ಸ್ವಭಾವದವರಾದ ಇವರು ತಮ್ಮ ಮೂವತ್ತು ವರ್ಷದೊಳಗೆ ಅತ್ಯಂತ ಗೌರವ ಹಾಗೂ ಸಂಪತ್ತನ್ನು ಪಡೆದುಕೊಳ್ಳುತ್ತಾರೆ. ಇವರು ಸಂತೋಷದ ಪ್ರಜ್ಞೆಯನ್ನು ಹೇಗೆ ನಿಭಾಯಿಸಬೇಕು ಎನ್ನುವುದನ್ನು ಚೆನ್ನಾಗಿ ಅರಿತವರಾಗಿರುತ್ತಾರೆ.

 

ಸಿಂಹ ರಾಶಿ.

ಈ ರಾಶಿಯಲ್ಲಿ ಜನಿಸಿದವರು ಅತ್ಯಂತ ಶಕ್ತಿಯುತರು,ಉತ್ಸಾಹಿಗಳು ಆಶಾವಾದಿಗಳು ಹಾಗೂ ಮನವನ್ನು ರಂಜಿಸುವ ಗುಣವನ್ನು ಹೊಂದಿರುತ್ತಾರೆ. ಇವರು ತಮ್ಮೊಂದಿಗೆ ಇತರರನ್ನು ಮುನ್ನಡೆಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಸೃಜನಶೀಲ ಪ್ರವೃತ್ತಿಯವರಾದ ಇವರು ತಮ್ಮ ಮೂವತ್ತು ವರ್ಷದೊಳಗೆ ಹೆಚ್ಚಿನ ಸಾಧನೆ ಹಾಗೂ ಐಶ್ವರ್ಯವನ್ನು ಪಡೆದುಕೊಳ್ಳುತ್ತಾರೆ. ಪ್ರಮುಖ ನಿರ್ಧಾರಗಳನ್ನು ಬಹಳ ನಿಷ್ಠೆಯಿಂದ ತೆಗೆದುಕೊಳ್ಳುವ ಇವರ ಸ್ವಭಾವದಲ್ಲಿ ಸ್ವಲ್ಪ ಅಹಂಕಾರ ಮತ್ತು ನಾನು ಎನ್ನುವ ಅಹಂ ಇರುವುದನ್ನು ಗಮನಿಸಬಹುದು.ಇವರು ಶ್ರೀಮಂತಿಕೆಯನ್ನು ಪಡೆದುಕೊಳ್ಳಲು ಅನುವಾಗುವಂತೆ ಅನೇಕ ಅವಕಾಶಗಳು ಬಹಳ ಸುಲಭವಾಗಿ ಇವರಿಗೆ ಲಭಿಸುವುದು.

 

 

ಮಕರ ರಾಶಿ .

ಈ ರಾಶಿಯಲ್ಲಿ ಜನಿಸಿದವರು ಅತ್ಯಂತ ಶ್ರೀಮಂತಿಕೆಯನ್ನು ಪಡೆದುಕೊಳ್ಳುವರು ಇವರು ಹೆಚ್ಚು ವಾಸ್ತವಿಕ ವಿಚಾರಗಳಿಗೆ ಮಹತ್ವ ನೀಡುವವರು. ಯಾವುದೇ ದೊಡ್ಡ ದೊಡ್ಡ ನಿರ್ಣಯವನ್ನು ತೆಗೆದುಕೊಳ್ಳುವ ಮೊದಲು ಸೂಕ್ತ ವಿವರಣೆ ಹಾಗೂ ಪರಿಶೀಲನೆಯನ್ನು ನಡೆಸುವರು. ಇವರು ತೆಗೆದುಕೊಳ್ಳುವ ನಿರ್ಣಯವನ್ನು ಮನಸ್ಸಿನಿಂದ ತೆಗೆದುಕೊಳ್ಳುವುದರಿಂದ ಜನರಿಗೆ ಇವರು ಅತ್ಯಂತ ಭಾವನಾತ್ಮಕ ಜೀವಿಗಳೆಂದು ಕಾಣಿಸುವರು. ಇವರು ಕೆಲವು ವಿಷಯಗಳಲ್ಲಿ ಹೆಚ್ಚು ಆರಾಮದಾಯಕ ಅನುಭವವನ್ನು ಪಡೆದುಕೊಳ್ಳುತ್ತಾರೆ. ಹಣ ಹೂಡಿಕೆ ಮಾಡುವಾಗ ಅತ್ಯಂತ ಜಾಗರೂಕತೆಯಿಂದ ಹಾಗೂ ಬುದ್ಧಿವಂತಿಕೆಯಿಂದ ವರ್ತಿಸುತ್ತಾರೆ. ಇವರು ಸದಾ ಆರ್ಥಿಕ ಬದ್ಧತೆ ಹಾಗೂ ಸ್ಥಿರತೆಯನ್ನು ಬಯಸುತ್ತಾರೆ. ಶಿಸ್ತು ಬದ್ಧರಾಗಿ ಇರುವ ಇವರು ಹಣವನ್ನು ಗೌರವಿಸುತ್ತಾರೆ. ಜೊತೆಗೆ ಅದರ ಆಯ ವ್ಯಯವನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುತ್ತಾರೆ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top