fbpx
ಹೆಚ್ಚಿನ

ರಾಜ್ಯಾದ್ಯಂತ ಕಂಠ ಪೂರ್ತಿ ಕುಡಿದ ಕುಡುಕರು.. ವರ್ಷದ ಕೊನೆಗೆ ಅಬಕಾರಿ ಇಲಾಖೆ ಗಳಿಸಿದ ಆದಾಯ ಗೊತ್ತಾದ್ರೆ ಬೆಚ್ಚಿ ಬೀಳ್ತಿರಾ.

ರಾಜ್ಯಾದ್ಯಂತ ಕಂಠ ಪೂರ್ತಿ ಕುಡಿದ ಕುಡುಕರು.. ವರ್ಷದ ಕೊನೆಗೆ ಅಬಕಾರಿ ಇಲಾಖೆ ಗಳಿಸಿದ ಆದಾಯ ಗೊತ್ತಾದ್ರೆ ಬೆಚ್ಚಿ ಬೀಳ್ತಿರಾ.

 

ಕುಡುಕರಿಂದ ಯಾರಿಗೆ ಲಾಭ ಯಾರಿಗೆ ನಷ್ಟ ಅನ್ಕೋತಿದೀರಾ ಹಾಗಾದ್ರೆ ಇಲ್ಲಿ ನೋಡಿ, ‘ಕುಡುಕರು ಹೆಚ್ಚಾಗಿದ್ದಾರೆ; ವರಮಾನವೂ ಹೆಚ್ಚಾಗುತ್ತಿದೆ’ ವರ್ಷದ ಕೊನೆಗೆ ಕುಡುಕರು ಕಂಠಪೂರ್ತಿ ಕುಡಿದಿದ್ದು ಅಬಕಾರಿ ಇಲಾಖೆಗೆ ಭರ್ಜರಿ ಆದಾಯ ಮಾಡಿಕೊಟ್ಟಿದ್ದಾರೆ..

 

 

ಕಳೆದ 2016 ರ ವರ್ಷಾಂತ್ಯದಲ್ಲಿ ಅಬಕಾರಿ ಇಲಾಖೆ ಗಳಿಸಿದ ಆದಾಯ ಈ ವರ್ಷಾಂತ್ಯದಲ್ಲಿ 100 ಕೋಟಿ ಹೆಚ್ಚಿದೆ.

2016 ವರ್ಷದ ಕೊನೆ ದಿನ ಬೆಂಗಳೂರು ನಗರದಲ್ಲಿ ಒಟ್ಟು 7.59 ಲಕ್ಷ ಬಿಯರ್ ಕೇಸ್ ಮತ್ತು 11.59 ದೇಸಿ ಮದ್ಯ ಕೇಸ್ ಮಾರಿದ್ದರು ಇದರಿಂದ ಒಟ್ಟು 325 ಕೋಟಿ ಆದಾಯ ಬಂದಿತ್ತು. ಇನ್ನು ಕರ್ನಾಟಕದಾದ್ಯಂತ ಒಟ್ಟು ಒಟ್ಟು 49.2 ಲಕ್ಷ ಬಿಯರ್ ಕೇಸ್ ಮತ್ತು 49.2 ದೇಸಿ ಮದ್ಯ ಕೇಸ್ ಮಾರಿದ್ದರು ಇದರಿಂದ ಒಟ್ಟು 1300 ಕೋಟಿ ಆದಾಯ ಬಂದಿತ್ತು.

2017 ವರ್ಷದ ಕೊನೆ ದಿನ ಬೆಂಗಳೂರು ನಗರದಲ್ಲಿ ಒಟ್ಟು 8 74 ಲಕ್ಷ ಬಿಯರ್ ಕೇಸ್ ಮತ್ತು 7.56 ದೇಸಿ ಮದ್ಯ ಕೇಸ್ ಮಾರಿದ್ದರು ಇದರಿಂದ ಒಟ್ಟು 360 ಕೋಟಿ ಆದಾಯ ಬಂದಿತ್ತು. ಇನ್ನು ಕರ್ನಾಟಕದಾದ್ಯಂತ ಒಟ್ಟು ಒಟ್ಟು 53.77 ಲಕ್ಷ ಬಿಯರ್ ಕೇಸ್ ಮತ್ತು 50.17 ದೇಸಿ ಮದ್ಯ ಕೇಸ್ ಮಾರಿದ್ದರು ಇದರಿಂದ ಒಟ್ಟು 1400 ಕೋಟಿ ಆದಾಯ ಬಂದಿದೆ.

 

ಎರಡು ವರ್ಷಗಳ ಡಿಸೆಂಬರ್ 31 ರ ಆದಾಯವನ್ನು ತಾಳೆ ಹಾಕಿದಾಗ ಬೆಂಗಳೂರು ನಗರದಲ್ಲಿ ಒಟ್ಟು 35 ಕೋಟಿ ಆದಾಯ ಹೆಚ್ಚಾಗಿದೆ ಇನ್ನು ರಾಜ್ಯಾದ್ಯಂತ ತಾಳೆ ಹಾಕಿದಾಗ ಒಟ್ಟು 100 ಕೋಟಿ ಆದಾಯ ಹೆಚ್ಚಾಗಿದೆ ಎಂದು ಗೊತ್ತಾಗುತ್ತೆ.

ರಾಜ್ಯದ ಅಬಕಾರಿ ಇಲಾಖೆಯ ಆದಾಯದ ಸಂಗ್ರಹಕ್ಕೆ ಯಾವುದೇ ಗುರಿ ಇಲ್ಲ, ಆದಾಯ ಸಂಗ್ರಹ ಕಡ್ಡಾಯವೂ ಅಲ್ಲ. ಬಜೆಟ್‌ ತಯಾರಿ ವೇಳೆ ಇಲಾಖೆಯಿಂದ ವಾರ್ಷಿಕ ಇಂತಿಷ್ಟು ಆದಾಯ ಬರಬಹುದೆಂಬ ಅಂದಾಜು ಮಾಡಲಾಗಿರುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top