fbpx
ಧರ್ಮ

ಇಂದ್ರಪ್ರಸ್ಥ ನಗರದಲ್ಲಿ ಪಾಂಡವ ಕುಲ ತಿಲಕ ಧರ್ಮರಾಜನಿಗೆ ಪಟ್ಟಾಭಿಷೇಕ ಎಷ್ಟು ಅದ್ದೂರಿಯಾಗಿ ನಡೀತು ಗೊತ್ತಾ? ಇದಕ್ಕೆ ಕೌರವರು ಏನು ಕಂಡೀಶನ್ ಹಾಕಿದ್ರು ಅಂತಾನೂ ಪ್ರತಿಯೊಬ್ಬರೂ ತಿಳ್ಕೊಳ್ಳೆಬೇಕು

ಇಂದ್ರಪ್ರಸ್ಥ ನಗರದಲ್ಲಿ ಪಾಂಡವ ಕುಲ ತಿಲಕ ಧರ್ಮರಾಜನಿಗೆ ಪಟ್ಟಾಭಿಷೇಕ ಎಷ್ಟು ಅದ್ದೂರಿಯಾಗಿ ನಡೀತು ಗೊತ್ತಾ? ಇದಕ್ಕೆ ಕೌರವರು ಏನು ಕಂಡೀಶನ್ ಹಾಕಿದ್ರು ಅಂತಾನೂ ಪ್ರತಿಯೊಬ್ಬರೂ ತಿಳ್ಕೊಳ್ಳೆಬೇಕು

ಇಂದ್ರಪ್ರಸ್ಥ ನಗರದಲ್ಲಿ ಧರ್ಮರಾಜನಿಗೆ ಪಟ್ಟಾಭಿಷೇಕ .

 

 

ದ್ರೌಪದಿಯ ವಿವಾಹವಾದ ನಂತರ ತನ್ನ ಮಗಳು ಹೀಗೆ ಅಜ್ಞಾತ ಸ್ಥಳದಲ್ಲಿ ಬಡತನದಿಂದ ಇರುವುದು ದ್ರುಪದನಿಗೆ ಸರಿ ಕಾಣಲಿಲ್ಲ. ಆದ್ದರಿಂದ ವಿಳಂಬವಿಲ್ಲದೆ ಕೃಷ್ಣನನ್ನು ಬರ ಮಾಡಿಕೊಂಡು ತನ್ನ ಮನಸ್ಸಿನಲ್ಲಿರುವ ನೋವನ್ನು ಕಳವಳವನ್ನು ವ್ಯಕ್ತಪಡಿಸಿದನು. ಕೃಷ್ಣನಿಗೂ ಆತನ ಮನಸ್ಸಿನ ನೋವು, ದುಃಖ ಇರುವುದು ಕಾಣಿಸಿತು . ಆಗ ಆತನು ದ್ರುಪದನಿಗೆ ಸದ್ಯ ಪಾಂಡವರ ಬಳಿ ಸೈನ್ಯ ಸಲಕರಣೆ ಏನೂ ಇಲ್ಲ ಅವರು ಪರಾಕ್ರಮ ಶಾಲಿಗಳಾಗಿರುವುದೇನೋ ನಿಜ. ಪ್ರಸಂಗವಿದ್ದರೆ ಕೌರವರೊಡನೆ ಯುದ್ಧ ಮಾಡಬೇಕಾಗಬಹುದು. ಅವರ ಬಳಿ ಸೈನ್ಯ ಸಲಕರಣೆ ಮುಂತಾದುವುಗಳೇನೂ ಸಹ ಇಲ್ಲ. ಅವರನ್ನು ಕರೆ ಕಳುಹಿಸುತ್ತೇನೆ. ಅವರ ಸಂಗಡ ನೀನು ನಿನ್ನ ಸೈನ್ಯವನ್ನು ಕಳುಹಿಸಿಕೊಡು. ನಾನು ಅಣ್ಣನನ್ನು ಒಪ್ಪಿಸಿ ನಮ್ಮ ಯಾದವ ಸೈನ್ಯವನ್ನು ಕಳುಹಿಸುತ್ತೇನೆ.

ಹೀಗಾದಲ್ಲಿ ಏನಾದರೂ ಪರಿಹಾರ ಕಾಣಬಹುದು ಎಂದು ಇದಕ್ಕೆ ದ್ರುಪದನು ಒಪ್ಪಿದನು. ಮುಂದೆ ಒಂದು ವಾರದೊಳಗಾಗಿ ಪಂಚ ಪಾಂಡವರು ಪಾಂಚಾಲ ದೇಶದ ಮತ್ತು ದ್ವಾರಕೆಯ ಯಾದವ ಸೈನ್ಯ ಸಮೇತರಾಗಿ ಹಸ್ತಿನಾವತಿಗೆ ಬಂದು ಹೊರವಲಯದಲ್ಲಿ ಬಿಡಾರ ಹೂಡಿದರು.

 

 

ಇತ್ತ ಕೃಷ್ಣನು ಭೀಷ್ಮಾಚಾರ್ಯರ ಬಳಿ ತೆರಳಿ ನ್ಯಾಯವಾಗಿ ನೋಡಿದರೆ ದೃತರಾಷ್ಟ್ರನ ಅನರ್ಹತೆಗಾಗಿ ಸಿಂಹಾಸನವನ್ನು ಏರಿದ ಪಾಂಡುರಾಜನ ಪುತ್ರರೇ ರಾಜ್ಯದ ವಾರಸುದಾರರು . ಅಂಥದರಲ್ಲಿ ದುರ್ಯೋಧನನ ಕುಯುಕ್ತಿಗೆ ಬಲಿಯಾಗದೆ, ಅರಗಿನ ಮನೆಯಿಂದ ಪಾರಾಗಿ ಕಷ್ಟ ನಷ್ಟಗಳನ್ನು ಅನುಭವಿಸುತ್ತಾ ಅಜ್ಞಾಥರಂತೆ ಅಡವಿ ಅರಣ್ಯದಲ್ಲಿ ಕಾಲ ಕಳೆದಿದ್ದಾರೆ. ಆದದ್ದು ಆಗಿ ಹೋಯಿತು. ಧರ್ಮದಂತೆ ಅವರು ಕೇವಲ ಅರ್ಧ ರಾಜ್ಯ ಕೇಳುತ್ತಿದ್ದಾರೆ. ಕಾರಣವೇನೆಂದರೆ ದೊಡ್ಡಪ್ಪ ಧೃತರಾಷ್ಟ್ರನಿಗೆ ನೂರು ಜನ ಮಕ್ಕಳು ಆದರೂ ಅರ್ಧ ರಾಜ್ಯ ಹೊಂದಿ ಸುಖ ಶಾಂತಿಯಿಂದ ಇರಲಿ ಎಂಬ ಇಚ್ಛೆಯುಳ್ಳವರಾಗಿದ್ದಾರೆ. ನನಗಾದರೂ ಎಲ್ಲರೂ ಮಾವಂದಿರ ಮಕ್ಕಳೇ ಸರಿ ಸಮನಾಗಿ ಇರಲಿ ಎಂಬ ಭಾವನೆ ಹೊಂದಿದ್ದೇನೆ. ಈಗ ಅವರು ಎರಡೂ ರಾಜ್ಯಗಳ ಬಲಾಡ್ಯ ಸೈನ್ಯದೊಡನೆ ಬಂದಿದ್ದಾರೆ.

ದುರ್ಯೋಧನನು ಕೊಡುವುದಿಲ್ಲ ಎಂದರೆ ಅವರು ಬಿಡುವುದಿಲ್ಲ, ಯುದ್ಧವಾದರೆ ಯಾರಿಗೂ ಕ್ಷೇಮವಲ್ಲ. ಆದ್ದರಿಂದ ವಿಚಾರಿಸಿ ಅರ್ಧ ರಾಜ್ಯವನ್ನು ಪಾಂಡವರಿಗೆ ಕೊಡುವಂತೆ ದುರ್ಯೋಧನನಿಗೆ ತಿಳುವಳಿಕೆ ಹೇಳಿ ವ್ಯವಸ್ಥೆ ಮಾಡಿರಿ ಎಂದು ನುಡಿದು ಪಾಂಡವರ ಬಿಡಾರಕ್ಕೆ ತೆರಳಿದನು..

 

 

ಕೃಷ್ಣನ ಸಲಹೆಯಲ್ಲಿನ ಸಾಧಕ ಬಾಧಕಗಳನ್ನು ಅರ್ಥ ಮಾಡಿಕೊಂಡ ಭೀಷ್ಮಾಚಾರ್ಯರು ದೃತರಾಷ್ಟ್ರನ ಬಳಿ ತೆರಳಿ ದುರ್ಯೋಧನನನ್ನೂ ಕರೆಯಿಸಿ ಪಾಂಡವರಿಗೆ ಅರ್ಧ ರಾಜ್ಯ ಕೊಟ್ಟು ಬಿಡುವುದು ಲೇಸು ಎಂದನು. ದುರ್ಯೋಧನನಿಗೆ ಮನಸ್ಸಿಲ್ಲದಿದ್ದರೂ ಈಗ ನಾನು ಹಾರಾಡಿದರೆ ಅವರು ಬಿಡುವುದಿಲ್ಲ. ಮುಂದೆ ಶಕುನಿಮಾಮನ ಕುಯುಕ್ತಿಯಿಂದ ಕೊಟ್ಟ ಅರ್ಧ ರಾಜ್ಯವನ್ನು ಅಪಹರಿಸಿದರಾಯಿತು ಎಂದು ಮನದಲ್ಲಿಯೇ ಲೆಕ್ಕ ಹಾಕಿ “ಆಯಿತು ಅವರು ನಮ್ಮ ಸಹೋದರರೇ ಅರ್ಧ ರಾಜ್ಯ ಕೊಟ್ಟು ಬಿಡಿರಿ” ಎಂದು ಸಮ್ಮತಿ ಸೂಚಿಸಿದನು.

ನಂತರ ಖಾಂಡವ ಪ್ರಸ್ಥದಲ್ಲಿ ಪಾಂಡವರ ವಾಸ್ತವ್ಯಕ್ಕೆ ಒಂದು ಸುಂದರವಾದ ಅರಮನೆ ನಿರ್ಮಾಣವಾಗಿ ಅಲ್ಲಿಂದ ಅವರು ಆಡಳಿತ ನಡೆಸುವುದಕ್ಕೋಸ್ಕರ ಸಕಲ ವ್ಯವಸ್ಥೆಗಳನ್ನೂ ಹೊಂದಿದ ಹೊಸ ನಗರ ನಿರ್ಮಾಣವಾಯಿತು ಇದನ್ನು ಪಾಂಡವರು ಇಂದ್ರಪ್ರಸ್ತ ಎಂಬ ಹೆಸರಿನಿಂದ ಕರೆದು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡರು. ಯುದ್ಧದ ಅವಶ್ಯಕತೆ ಬೀಳಲಾರದ್ದರಿಂದ ಯಾದವ ಮತ್ತು ಪಾಂಚಾಲ ಸೈನ್ಯವನ್ನು ಧರ್ಮರಾಯನ ಪಟ್ಟಾಭಿಷೇಕವಾದ ನಂತರ ವಾಪಸ್ಸು ಕಳಿಸಿದರಾಯಿತು ಎಂದು ಹಾಗೆಯೇ ಉಳಿಸಿಕೊಂಡರು.

ನಂತರ ಕೃಷ್ಣನು ಒಂದು ಶುಭದಿನವನ್ನು ಗೊತ್ತು ಮಾಡಿ ಧರ್ಮರಾಜನ ಪಟ್ಟಾಭಿಷೇಕದ ವ್ಯವಸ್ಥೆ ಮಾಡಹತ್ತಿದನು.
ನಿಶ್ಚಿತ ದಿನದಿಂದ ಯುದಿಷ್ಟಿರನ ಪಟ್ಟಾಭಿಷೇಕ ಜರುಗಿತು. ಆ ದಿನ ಮುತ್ತಜ್ಜ ಭೀಷ್ಮರೂ, ವಿದ್ಯಾಗುರು ದ್ರೋಣಾಚಾರ್ಯರು, ಮುನಿ ಶ್ರೇಷ್ಠರಾದ ವೇದವ್ಯಾಸರು, ದೂರ್ವಾಸರೂ ಮುಂತಾದ ಋಷಿಮುನಿಗಳೂ, ಅನೇಕ ಮಾಂಡಲಿಕ ರಾಜರೂ ಆಗಮಿಸಿದ್ದರು. ಇದನ್ನು ಸಹಿಸದ ದೃತರಾಷ್ಟ್ರನು ಕಣ್ಣು ಕಾಣದ ನೆಪ ಮಾಡಿ ಬರದಿದ್ದರೆ, ಕೌರವ ಸಹೋದರರು ಕರ್ಣನ ಸಮೇತ ಆಗಮಿಸಿದ್ದರು. ಸಿಂಹಾಸನಾರೋಹಣದ ನಂತರ ಒಂದು ವಾರ ಕಾಲ ಪುಣ್ಯಕಾರ್ಯಗಳು ಜರುಗಿದವು. ಕಪ್ಪ ಕಾಣಿಕೆಗಳ ಸಮೇತ ಆಗಮಿಸಿದ್ದ ಮಾಂಡಲಿಕ ರಾಜರಿಗೆ ಮರ್ಯಾದೆ ಉಡುಗೊರೆ ಸಂದಾಯವಾದರೆ ಬ್ರಾಹ್ಮಣರಿಗೆ ತೃಪ್ತಿಯಾಗುವಂತೆ ಭೋಜನ ಮತ್ತು ದಕ್ಷಿಣೆಗಳು ದೊರೆತವು.ಎಲ್ಲರೂ ಪಾಂಡವರನ್ನು ಹರಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top