fbpx
News

ಈ ವ್ಯಕ್ತಿ ಏಕೆ ಹೀಗೆ ಮುಖವನ್ನು ತೂತು ಮಾಡಿಕೊಂಡಿದ್ದಾನೆ ಗೊತ್ತಾ?

ಈ ವ್ಯಕ್ತಿ ಏಕೆ ಹೀಗೆ ಮುಖವನ್ನು ತೂತು ಮಾಡಿಕೊಂಡಿದ್ದಾನೆ ಗೊತ್ತಾ?

 

 

‘ನಿನ್ನ ಮುಖಕ್ಕೆ ತೂತು ಬೀಳಾ!’ ಅಂತ ಬೈದರೆ ಜರ್ಮನಿಯ ಜೋಲ್ ಮಿಗ್ಲರ್‍ಗೆ ಕೋಪಬಾರದು. ಏಕೆಂದರೇ….

ಮೂಗು ಸೇರಿದಂತೆ 11 ಕುಳಿಗಳನ್ನು ಕೊರೆಸಿಕೊಂಡಿದ್ದಾನೆ. ಕೆಲವು 34 ಎಂ.ಎಂ. ಇನ್ನಷ್ಟು 40 ಎಂ.ಎಂ. ದೊಡ್ಡದಿವೆ. ಇವುಗಳಿಗೆ ಬಿರುಡೆಗಳನ್ನು ಮಾಡಿಸಿಕೊಂಡು ಬೇಕೆಂದಾಗ ನಾಲಿಗೆ ಹೊರ ಚಾಚಿ ಚೇಷ್ಟೆ ಮಾಡುತ್ತಾನೆ. ಒಂದು ಕಪಾಳದಿಂದ ದಾರ ತೂರಿಸಿ ಮತ್ತೊಂದರಿಂದ ಹೊರತೆಗೆಯುತ್ತಾನೆ.

 

 

‘ತೂತು ಬಾಯಿಗಿಂತಲೂ ಬೊಚ್ಚಬಾಯಿ ಮೇಲು!’ ಎಂಬ ಕನ್ನಡ ಗಾದೆಗೆ ವ್ಯತಿರಿಕ್ತವಾಗಿ ‘ಬೊಚ್ಚಬಾಯಿಗಿಂತಲೂ ತೂತುಬಾಯಿಯೇ ಮೇಲು’ ಎಂದಾನು-ಜೋಲ್. ಗಿನ್ನೀಸ್‍ನವರು ದಾಖಲೆ ಎಂದ ಮೇಲೆ ಈತನ ತೆವಲು ಇನ್ನಷ್ಟು ಹೆಚ್ಚಾಗಿದೆ.

ಅಂದಹಾಗೆ ಈತನೇ ಹೀಗೆಲ್ಲಾ ಮಾಡಿಕೊಂಡಿಲ್ಲ. ಬದಲಿಗೆ ಕಾಸ್ಮೆಟಿಕ್ ಸರ್ಜರಿ ತಜ್ಞರಿಗೆ ಲಕ್ಷಾಂತರ ಹಣ ನೀಡಿ ತೂತು ಕೊರೆಸಿಕೊಂಡಿದ್ದಾನೆ.

ಜೋಲ್‍ನಿಂದಾಗಿ…. ರೌದ್ರಮುಖ, ನಗೆಮುಖ ಪಟ್ಟಿಗೆ ಹೊಸ ಸೇರ್ಪಡೆ… ‘ಜೋಲ್’ಮುಖ!

 

 

ನಮ್ಮ ರಾಜಕಾರಣಿಗಳಿಗೂ ಇಂತಹ ಬಾಯಿ ಇದ್ದರೆ ಹುರಿದು ಮುಕ್ಕಲು ಅನುಕೂಲವಾಗಲಿದೆ! ಮುಖ್ಯಬಾಯಿಂದ ಬಲಗೈಯ್ಯಲ್ಲಿ ತುರುಕಿಕೊಂಡು ಪಕ್ಕದ ಬಾಯಿಂದ ಎಡಗೈಯ್ಯಲ್ಲಿ ಇನ್ನಷ್ಟು ತುರುಕಿಕೊಳ್ಳಬಹುದು ಅಲ್ವಾ…?

ನೊ… ವಿಪಕ್ಷದವರು ಸುಮ್ಮನೆ ಇರಲ್ಲ… ಬಲಗೆನ್ನೆಯ ಬಾಯಿಗೆ ಒಳಗಿರುವುದೆಲ್ಲಾ ತೆಗೆದು ಬಿಡುತ್ತಾರೆ! ಹೀಗಾಗಿಯೇ ನಮ್ಮ ರಾಜಕಾರಣಿಗಳು ಇಂತಹ ಜೋಲ್ ಬಾಯಿ ಇರುವುದಿಲ್ಲ. ಅವರಿಗೇನಿದ್ದರು ನಾಲಿಗೆ ಹರಕು ಬೇಕಿದ್ದರೆ ಈಶ್ವರಪ್ಪ, ಶೋಭಾ, ಅನಂತ್‍ಕುಮಾರ್ ಹೆಗಡೆ, ಸಿಟಿ ರವಿ ಅವರನ್ನೇ ಗಮನಿಸಿ…

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top