ದೇವರು

ಗಂಗಾಜಲವನ್ನ ಮನೆಯಲ್ಲಿ ಇಟ್ಟುಕೊಂಡ್ರೆ ಶಾಸ್ತ್ರಗಳ ಪ್ರಕಾರ ಯಾವ ರೀತಿ ಶೇಖರಿಸಿ ಇಟ್ಕೋಬೇಕು ಅಂತ ತಿಳ್ಕೊಳ್ಳೆಬೇಕು !

ಗಂಗಾಜಲವನ್ನ ಮನೆಯಲ್ಲಿ ಇಟ್ಟುಕೊಂಡ್ರೆ ಶಾಸ್ತ್ರಗಳ ಪ್ರಕಾರ ಯಾವ ರೀತಿ ಶೇಖರಿಸಿ ಇಟ್ಕೋಬೇಕು ಅಂತ ತಿಳ್ಕೊಳ್ಳೆಬೇಕು !

ಶಾಸ್ತ್ರಗಳ ಪ್ರಕಾರ ಈ ಯಾವ ರೀತಿ ಗಂಗಾಜಲವನ್ನು ಅಂದರೆ ಗಂಗಾ ನದಿಯಿಂದ ತೆಗೆದುಕೊಂಡು ಬಂದ ನೀರನ್ನು ಮನೆಯಲ್ಲಿ ಶೇಖರಿಸಿ ಇಟ್ಟುಕೊಳ್ಳಬೇಕು …….

ನಿಮಗೆಲ್ಲ ಗೊತ್ತಿರುವ ಹಾಗೆ ಗಂಗಾಜಲವನ್ನು ಅತ್ಯಂತ ಪವಿತ್ರ ಎಂದು ಪರಿಗಣಿಸಲಾಗಿದೆ. ಶಾಸ್ತ್ರಗಳ ಪ್ರಕಾರ ಪೂಜೆ ಪ್ರಾರ್ಥನೆಗಳನ್ನು ಮಾಡುವ ಮೊದಲು ಗಂಗೆಯಿಂದಲೇ ಆ ಸ್ಥಳವನ್ನು ಶುದ್ಧ ಗೊಳಿಸಲಾಗುವುದು.
ಗಂಗೆಯ ನೀರನ್ನು ಮನೆಯಲ್ಲಿ ಇಟ್ಟುಕೊಳ್ಳುವುದಕ್ಕೆ ಹಲವು ನಿಯಮಗಳಿವೆ…. ಆದ್ದರಿಂದ ಮನೆಯಲ್ಲಿ ಗಂಗಾಜಲವನ್ನು ಇಟ್ಟರೆ ಇದರ ಪವಿತ್ರತೆಯನ್ನು ಉಳಿಸಿಕೊಳ್ಳಲು ನಿಮಗೆ ಶಾಸ್ತ್ರಗಳ ನಿಯಮಗಳನ್ನು ಅವಶ್ಯವಾಗಿ ಪಾಲಿಸಲೇಬೇಕು.
ನಿಮಗೆ ಇಂದು ನಾವು ಕೆಲವು ನಿಯಮಗಳನ್ನು ಹೇಳುತ್ತೇವೆ. ನಿಮಗೆ ಗಂಗಾ ನದಿಯ ನೀರನ್ನು ಮನೆಯಲ್ಲಿ ತಂದು ಇಟ್ಟುಕೊಳ್ಳುವಾಗ ಅವಶ್ಯವಾಗಿ ಈ ನಿಯಮಗಳನ್ನು ತಪ್ಪದೇ ಪಾಲಿಸಿ .
ಗಂಗಾಜಲವನ್ನು ಪ್ಲಾಸ್ಟಿಕ್ ಬಾಟಲಿಗಳಲ್ಲಿ ಶೇಖರಿಸಿ ಇಟ್ಟುಕೊಳ್ಳಬೇಡಿ

 

ನಮ್ಮಲ್ಲಿ ಅನೇಕ ಜನರು ಗಂಗೆಯ ಪವಿತ್ರವಾದ ದೇವ ಸ್ವರೂಪವಾದ ನೀರು ಎಂದು ಪ್ಲಾಸ್ಟಿಕ್ ಬಾಟಲಿಗಳಲ್ಲಿ ಗಂಗಾ ನೀರನ್ನು ತುಂಬಿಸಿಕೊಂಡು ಮನೆಗೆ ತೆಗೆದುಕೊಂಡು ಬಂದು ಇಟ್ಟುಕೊಳ್ಳುತ್ತಾರೆ .ಇದನ್ನು ಶುಭ ಎಂದು ಪರಿಗಣಿಸಲಾಗುವುದಿಲ್ಲ.
ವೈಜ್ಞಾನಿಕ ದೃಷ್ಟಿಯಿಂದಲೂ ಸಹ ಹೇಳುವುದಾದರೆ ಪ್ಲಾಸ್ಟಿಕ್ ಕೂಡ ಮಾಲಿನ್ಯತೆಯನ್ನು ಉಂಟು ಮಾಡುತ್ತದೆ ಎಂದು ಹೇಳಲಾಗಿದೆ. ಪ್ಲಾಸ್ಟಿಕ್ ಬಾಟಲಿಗಳಲ್ಲಿ ನಾವು ಸಾಮಾನ್ಯ ನೀರನ್ನು ಸಹ ಶೇಖರಿಸಿದ್ದರು ಅದು ಅನೇಕ ರಾಸಾಯನಿಕ ಉತ್ಪನ್ನಗಳಿಂದ ಕೂಡಿದ್ದು ಅದು ನಮ್ಮ ದೇಹಕ್ಕೆ ಹಾನಿಯನ್ನು ಉಂಟು ಮಾಡುತ್ತದೆ. ಆದ್ದರಿಂದ ಗಂಗಾಜಲವನ್ನು ಯಾವುದೇ ಕಾರಣಕ್ಕೂ ಪ್ಲಾಸಿಕ್ ಬಾಟಲಿಗಳಲ್ಲಿ ಶೇಖರಿಸಿ ಇಟ್ಟುಕೊಳ್ಳಬೇಡಿ .

 

ಗಂಗಾಜಲವನ್ನು ಯಾವ ಪಾತ್ರೆಯಲ್ಲಿ ಶೇಖರಿಸಿಟ್ಟರೆ ಉತ್ತಮ ಶುಭ…

ಗಂಗಾಜಲವನ್ನು ಪ್ಲಾಸ್ಟಿಕ್ ಬಾಟಲಿಗಳಲ್ಲಿ ಇಡುವುದು ಒಳ್ಳೆಯದಲ್ಲ ಬದಲಾಗಿ ಬೆಳ್ಳಿಯ ಪಾತ್ರೆಯಲ್ಲಿ ಗಂಗಾಜಲವನ್ನು ಶೇಖರಿಸಿ ಇಟ್ಟರೆ ಒಳ್ಳೆಯದು. ನಿಮಗೆ ಒಂದು ವೇಳೆ ಬೆಳ್ಳಿಯ ಪಾತ್ರೆಯಲ್ಲಿ ಶೇಖರಿಸಿ ಇಡುವುದಕ್ಕೆ ಆಗುವುದಿಲ್ಲ ಎಂದರೆ ಬೆಳ್ಳಿಯ ಪಾತ್ರೆಗಳು ಇಲ್ಲವೆಂದಾದರೆ ತಾಮ್ರದ ಪಾತ್ರೆಗಳಲ್ಲಿ ಸಹ ಇಡಬಹುದಾಗಿದೆ. ಹೀಗೆ ಇಡುವುದರಿಂದ ಕೆಲಸ ಕಾರ್ಯಗಳು ಯಶಸ್ಸನ್ನು ಕಾಣುತ್ತವೆ.

ಗಂಗಾ ಜಲವನ್ನು ಮನೆಯ ಯಾವ ಸ್ಥಳದಲ್ಲಿ ಇಡಬೇಕು .

ಗಂಗಾಜಲವನ್ನು ನೀವು ನಿಮ್ಮ ಮನೆಯ ಯಾವುದೇ ಕೋಣೆಯಲ್ಲಿ ಬೇಕಾದರೂ ಇಡಬಹುದು. ಆದರೆ ನೆನಪಿಡಿ ಯಾವ ಕೋಣೆಯಲ್ಲಿ ಗಂಗಾಜಲವನ್ನು ಇಟ್ಟಿದ್ದೀರೋ ಅಲ್ಲಿ ಸ್ವಚ್ಛತೆಯನ್ನು ಸದಾಕಾಲ ಕಾಪಾಡಿಕೊಳ್ಳಿ .ನಿಮಗೆ ಬೇಕಾದರೆ ಗಂಗಾಜಲವನ್ನು ಪೂಜಾ ಕೋಣೆಯಲ್ಲಿಯೂ ಸಹ ಇಡಬಹುದು .
ಗಂಗಾಜಲವನ್ನು ಈಶಾನ್ಯ ಕೋಣೆಯಲ್ಲಿ ಇರಿಸಿ…. .

 

ಯಾಕೆಂದರೆ ಈಶಾನ್ಯ ಕೋಣೆಯಲ್ಲಿ ಗಂಗಾಜಲವನ್ನು ಇಡುವುದರಿಂದ ಅದನ್ನು ಅತ್ಯಂತ ಶುಭ ಎಂದು ಪರಿಗಣಿಸಲಾಗಿದೆ. ನಿಮಗೆ ಗೊತ್ತಿರಬಹುದು ಗಂಗಾಜಲವನ್ನು ಮನೆಯಲ್ಲಿ ತಂದು ಇಟ್ಟುಕೊಳ್ಳುವುದರಿಂದ ನಕಾರಾತ್ಮಕ ಶಕ್ತಿಗಳು ತೊಲಗಿ ಧನಾತ್ಮಕ ಶಕ್ತಿಗಳು ಉತ್ಪನ್ನವಾಗುವವು ……
ಸಕಾರಾತ್ಮಕ ಮತ್ತು ಧನಾತ್ಮಕ ಅಲೆಗಳ ತರಂಗಗಳು ಮತ್ತು ಶಕ್ತಿಗಳು ಉತ್ಪನ್ನವಾಗುತ್ತವೆ. ಹಾಗೆ ನಿಮ್ಮ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯು ಸಹ ಮನೆಯಿಂದ ದೂರವಾಗುತ್ತದೆ .
ಮನೆಯಲ್ಲಿ ಗಂಗಾಜಲವನ್ನು ಇರುವ ಸಮಯದಲ್ಲಿ ಈ ವಿಷಯಗಳನ್ನು ಅಗತ್ಯವಾಗಿ ನೆನಪಿನಲ್ಲಿಟ್ಟುಕೊಳ್ಳಿ …..

 

ಯಾಕೆಂದರೆ ಗಂಗಾಜಲವನ್ನು ಬೆಳಕು ಇಲ್ಲದ ಕೋಣೆಯಲ್ಲಿ ಇಡಬಾರದು ಮತ್ತು ಸೂರ್ಯನ ಬೆಳಕು ಪ್ರವೇಶವಾಗದೆ ಇರುವ ಸ್ಥಳದಲ್ಲಿಯೂ ಸಹ ಇಡಬೇಡಿ. ಜೊತೆಗೆ ನಿಮ್ಮ ಮನೆಯಲ್ಲಿ ಗಂಗಾಜಲವನ್ನು ಉಪಯೋಗಿಸಿಕೊಳ್ಳುವ ಮುನ್ನ ನಿಮ್ಮ ಕೈಗಳನ್ನು ಸ್ವಚ್ಛ ಮಾಡಿ ತೊಳೆದು ನಂತರ ಪ್ರಾರ್ಥನೆ ಮಾಡಿ ಗಂಗಾಜಲಕ್ಕೆ ನಮಸ್ಕರಿಸಿ. ನಂತರವೇ ಉಪಯೋಗಿಸಿ ಇದರಿಂದ ಗಂಗಾ ಮಾತೆಯ ಆಶೀರ್ವಾದವೂ ಸಹ ನಿಮಗೆ ದೊರೆಯುವುದು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top