ದೇವರು

ಹಲ್ಲಿ ಮೈಮೇಲೆ ಬಿದ್ದರೆ ಕಂಚಿಯ ಹಲ್ಲಿಯನ್ನು ಮುಟ್ಟಬೇಕು ಅಥವಾ ಕಂಚಿಗೆ ಹೋಗಿಬಂದವರ ಮುಟ್ಟಿ ಬರಬೇಕು ಅಂತ ಯಾಕೆ ಹೇಳ್ತಾರೆ ಗೊತ್ತಾ ?

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಹಲ್ಲಿ ಮೈಮೇಲೆ ಬಿದ್ದರೆ ಭಯದಿಂದ ಹೆದರಿ ಓಡಿಹೋಗುತ್ತೇವೆ , ಮೈಯಲ್ಲಿ ನಡುಕ ಶುರುವಾದರೆ ಸಂಶಯವೇ ಇಲ್ಲ , ಇನ್ನು ಶುಭ ವಿಷಯಗಳು ಮಾತಾಡುವಾಗ ಹಲ್ಲಿ ಲೊಚಗುಟ್ಟಿದರೆ ಆ ಕಾರ್ಯ ನಡೆದೇ ನಡೆಯುತ್ತದೆ ಎಂದು ಅನೇಕರು ನಂಬುತ್ತಾರೆ .

 

 

ಹಲ್ಲಿ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಇದ್ದು ಮನೆಯಲ್ಲಿನ ಹುಳು ಹುಪ್ಪಟೆಗಳನ್ನು ಇಂದು ಬದುಕುತ್ತದೆ ,ಇನ್ನು ಹಲ್ಲಿ ತಿನ್ನುವ ಊಟಕ್ಕೆ ಬಿದ್ದರೆ ವಿಷವಾಗುತ್ತದೆ ಎಂದು ಹಲವಾರು ನಂಬುತ್ತಾರೆ ಅಸಲಿಗೆ ಪ್ರಪಂಚದಲ್ಲಿ ಕೇವಲ 30 % ಹಲ್ಲಿಗಳು ಮಾತ್ರ ವಿಷಕಾರಿಯಾಗಿರುತ್ತದೆ .

 

 

ಇನ್ನು ಮೈ ಮೇಲೆ ಹಲ್ಲಿ ಬಿದ್ದರೆ ಯಾವ ಭಾಗದ ಮೇಲೆ ಬಿದ್ದರೆ ಏನು ಪರಿಣಾಮ ಎಂದು ಹೇಳುವ ಹಲ್ಲಿ ಶಾಸ್ತ್ರ ಸಹ ಇದೆ , ಇನ್ನು ಹಲ್ಲಿಯನ್ನು ಬಹಳ ವಿಶೇಷವಾಗಿ ಪೂಜೆ ಮಾಡುವ ಕಂಚಿ ಕಾಮಾಕ್ಷಿ ಅಮ್ಮನವರ ಸನ್ನಿಧಿಯಲ್ಲಿರುವ ಹಲ್ಲಿಯನ್ನು ಮುಟ್ಟಿದ್ರೆ ,ಮುಟ್ಟಿದ ಭಕ್ತರ ಯಾವುದೇ ದೇಹದ ಭಾಗದ ಮೇಲೆ ಹಲ್ಲಿ ಇನ್ನು ಮುಂದೆ ಬಿದ್ದರೆ ಯಾವುದೇ ದುಷ್ಪರಿಣಾಮ ಉಂಟಾಗುವುದಿಲ್ಲ ಎಂದು ಅನಾದಿಕಾಲದಿಂದಲೂ ಹೇಳುತ್ತಾರೆ .

 

 

ಇನ್ನು ಕಂಚಿ ಕಾಮಾಕ್ಷಿ ದೇವಿಯ ದೇವಾಲಯಕ್ಕೆ ಭೇಟಿ ನೀಡಿ ಹಲ್ಲಿ ಮುಟ್ಟದೆ ಇದ್ದರೆ ದೇವಸ್ಥಾನಕ್ಕೆ ಹೋಗಿಬಂದ ಹಿರಿಯರ ಕಾಲಿಗೆ ಮುಟ್ಟಿ ನಮಸ್ಕಾರ ಮಾಡಿದರೆ ಒಳ್ಳೆಯದು ಕಿರಿಯರಾದರೆ ಅವರನ್ನು ಮುಟ್ಟಿದರೆ ಹಲ್ಲಿ ಬಿದ್ದದ್ದರಿಂದ ಉಂಟಾದ ಕೆಟ್ಟ ಶಕುನಗಳು ದೂರಹೋಗುತ್ತವೆ ,ಇನ್ನು ಏನಾದರೂ ವಿಷಯಗಳು ಮಾತಾಡುವಾಗ ಅಥವಾ ಅಂದುಕೊಳ್ಳುವಾಗ ಹಲ್ಲಿ ಲೊಚಗುಟ್ಟಿದರೆ ‘ಕೃಷ್ಣ ಕೃಷ್ಣ’ ಎಂದು ಕೊಂಡರೆ ಒಳ್ಳೆಯದು .

 

 

ಇನ್ನು ಪೂರ್ವ ದಿಕ್ಕಿನಲ್ಲಿ ಹಲ್ಲಿ ಲೊಚಗುಟ್ಟಿದರೆ ಕೆಟ್ಟ ಪರಿಣಾಮಗಳು ಮನೆಯ ಮೇಲೆ ಬೀರುವುದು ಎಂಬ ಸಂದೇಶ ರವಾನಿಸುತ್ತದೆ , ಹಾಗೆಯೇ ರಾಹು ಪರಿಣಾಮ ಸಹ ಆಗಿರಬಹುದು .

ಬಂಗಾರ ಹಾಗು ಬೆಳ್ಳಿ ಹಲ್ಲಿಯ ವಿಶೇಷತೆಗಳೇನು ಗೊತ್ತಾ ?

 

ಪುರಾಣ ಕಥೆಗಳ ಪ್ರಕಾರ ಗೌತಮ ಮಹರ್ಷಿಗೆ ಇಬ್ಬರು ಶಿಷ್ಯರಿದ್ದರು , ಪೂಜೆಗೆ ನೀರುತರಲೆಂದು ಗೌತಮ ಮಹರ್ಷಿಗಳು ತಮ್ಮ ಶಿಷ್ಯಂದಿರಿಗೆ ಹೇಳುತ್ತಾರೆ , ಮಡಿಕೆ ತೆಗೆದುಕೊಂಡು ನದಿಯ ಕಡೆಗೆ ಹೊರಟರು ಶಿಷ್ಯರು ಹೀಗೆ ನೀರು ತುಂಬಿಸುವ ಸಮಯದಲ್ಲಿ ಮಡಿಕೆಗೆ ಹಲ್ಲಿ ಬಿದ್ದದ್ದನ್ನು ಶಿಷ್ಯರು ನೋಡಿಕೊಳ್ಳುವುದಿಲ್ಲ , ಮತ್ತೆ ಮರಳಿ ಆಶ್ರಮಕ್ಕೆ ಬಂದು ಮಡಿಕೆ ನೀರನ್ನು ತಮ್ಮ ಗುರುಗಳಿಗೆ ನೀಡುತ್ತಾರೆ , ಸತ್ತ ಹಲ್ಲಿಯನ್ನು ನೋಡಿದ ಗೌತಮ ಮಹರ್ಷಿಗಳಿಗೆ ಬಹಳ ಕೋಪ ಬಂದು ‘ಇನ್ನು ಮುಂದೆ ನೀವು ಹಲ್ಲಿಗಳಾಗಿ’ ಎಂದು ಶಪಿಸುತ್ತಾರೆ .

ಹೀಗೆ ತಮ್ಮ ಪಾಪ ವಿಮೋಚನೆಗಾಗಿ ವರದ ರಾಜ ಪೆರುಮಾಳ್ ಸ್ವಾಮಿ ದೇವಾಲಯಕ್ಕೆ ಬಂದರಂತೆ , ಹಲ್ಲಿಯ ರೂಪದಲ್ಲಿದ್ದ ಶಿಷ್ಯರು ದೇವರ ಆರಾಧನೆ ಮಾಡಿಕೊಂಡಿದ್ದರಂತೆ

 

 

ಹೀಗೆ ಸ್ವಾಮಿಯನ್ನು ಒಲಿಸಿಕೊಂಡು ಶಾಪವಿಮೋಚನೆ ಮಾಡಿಕೊಳ್ಳುತ್ತಾರಂತೆ , ತನ್ನ ಭಕ್ತರ ಕುರುಹಾಗಿ ಬೆಳ್ಳಿ ಹಾಗು ಚಿನ್ನದ ಹಲ್ಲಿಗಳು ದೇವಾಲಯದಲ್ಲಿ ನೆಲೆಗೊಂಡವಂತೆ ,
ಚಿನ್ನದ ಹಲ್ಲಿ ಸೂರ್ಯನ ಸಂಕೇತವಾದರೆ , ಬೆಳ್ಳಿ ಹಲ್ಲಿ ಚಂದ್ರನ ಸಂಕೇತ .

ಸರಸ್ವತಿ ದೇವಿಯಿಂದ ಶಾಪವಿಮೋಚನೆಗೊಂಡ ಇಂದ್ರ ಈ ಹಲ್ಲಿಗಳನ್ನು ನಿರ್ಮಾಣ ಮಾಡಿದನೆಂದು ಇನ್ನೊಂದು ಕಥೆ ಹೇಳುತ್ತದೆ .

 

 

ದೋಷ ನಿವಾರಣೆ :

 

ಕಂಚಿ ಕಾಮಾಕ್ಷಿ ದೇವಿಯ ದೇವಾಲಯಕ್ಕೆ ಭೇಟಿ ನೀಡಿ ಹಲ್ಲಿ ಮುಟ್ಟಿದರೆ ಹಿಂದೆ ಮಾಡಿದ ಎಲ್ಲ ಪಾಪಗಳು ಕಳೆದುಹೋಗುತ್ತವೆಯಂತೆ
ಅಷ್ಟೇ ಅಲ್ಲದೆ ಗ್ರಹ ದೋಷಗಳು , ಜಾತಕ ದೋಷಗಳು ನಿವಾರಣೆಯಾಗುತ್ತವೆಯಂತೆ .

 

ಮದುವೆ ಮಕ್ಕಳಾಗದೇ ನೊಂದವರು ಸಹ ತಮ್ಮ ಇಷ್ಟಾರ್ಥಸಿದ್ಧಿಗಾಗಿ ಕಂಚಿ ಕಾಮಾಕ್ಷಿ ದೇವಾಲಯದ ಬಂಗಾರ ಹಾಗು ಬೆಳ್ಳಿ ಹಲ್ಲಿಗಳನ್ನು ಮುಟ್ಟುತ್ತಾರೆ .

ದೇವರ ಮಹಿಮೆ ಸಾರುವ ಈ ಕಥೆಯನ್ನು ನಿಮ್ಮ ಸ್ನೇಹಿತರ ಜೊತೆಗೂ ಶೇರ್ ಮಾಡುವ ಮೂಲಕ ಹಂಚಿಕೊಳ್ಳಿ

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top