fbpx
ಭವಿಷ್ಯ

ಜನವರಿ 03 : ನಿತ್ಯಭವಿಷ್ಯ ಮತ್ತೆ ಪಂಚಾಂಗ

ಬುಧವಾರ, ೦೩ ಜನವರಿ ೨೦೧೮
ಸೂರ್ಯೋದಯ : ೦೬:೪೬
ಸೂರ್ಯಾಸ್ತ : ೧೮:೦೧
ಶಕ ಸಂವತ : ೧೯೩೯ ಹೇವಿಲಂಬಿ
ಅಮಂತ ತಿಂಗಳು : ಪುಷ್ಯ
ಪಕ್ಷ : ಕೃಷ್ಣ ಪಕ್ಷ
ತಿಥಿ : ಬಿದಿಗೆ
ನಕ್ಷತ್ರ : ಪುನರ್ವಸು
ಯೋಗ : ವೈಧೃತಿ
ಪ್ರಥಮ ಕರಣ : ತೈತಲೆ – ೧೪:೨೦ ವರೆಗೆ
ಸೂರ್ಯ ರಾಶಿ : ಧನು
ಅಭಿಜಿತ್ ಮುಹುರ್ತ : ಯಾವುದೂ ಇಲ್ಲ
ಅಮೃತಕಾಲ : ೨೪:೨೬+ – ೨೫:೫೨+
ರಾಹು ಕಾಲ: ೧೨:೨೪ – ೧೩:೪೮
ಗುಳಿಕ ಕಾಲ: ೧೦:೫೯ – ೧೨:೨೪
ಯಮಗಂಡ: ೦೮:೧೦ – ೦೯:೩೫

 

ಮೇಷ (Mesha)

 

ಆರೋಗ್ಯ ಸಮಸ್ಯೆಯ ಸಾಧ್ಯತೆಯಿದೆ. ನೀವು ತೂಕ ಹೆಚ್ಚಿಸಿಕೊಳ್ಳುವ ಸಾಧ್ಯತೆಯಿರುವುದರಿಂದ ಆಹಾರದ ಮೇಲೆ ನಿಗಾ ಇರಲಿ. ನೀವು ಬಾಳಸಂಗಾತಿ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ವೆಚ್ಚ ಮಾಡಬಹುದು

 

ವೃಷಭ (Vrushabha)

ಮಕ್ಕಳ ವಿದ್ಯಾಭ್ಯಾಸದಲ್ಲಿನ ಪ್ರಗತಿ. ದೂರಾಲೋಚನೆಯಿಂದ ಕೈಗೊಂಡ ಕೆಲಸ ಕಾರ್ಯಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ಪ್ರೇಮ ವಿವಾಹ ಸಂಬಂಧಗಳು ಉತ್ತಮ ರೀತಿಯಲ್ಲಿ ಕೂಡಿಬರಲಿದೆ. ನಿರುದ್ಯೋಗಿಗಳಿಗೆ ಸೂಕ್ತ ಉದ್ಯೋಗ ಲಭ್ಯವಾಗಲಿದೆ.

 

ಮಿಥುನ (Mithuna)

ನೀವು ವೈಯಕ್ತಿಕ ಬದುಕಿನಲ್ಲಿ ನೈತಿಕ ಮೌಲ್ಯಗಳಿಗೆ ಆದ್ಯತೆ ನೀಡುವುದರಿಂದ ಕುಟುಂಬದಲ್ಲಿ ಘನತೆ ಹೆಚ್ಚಲಿದೆ. ನಿಮ್ಮ ಜನರ ಸಹಕಾರದಿಂದಲೇ ಸ್ವತ್ತು ವಿವಾದಗಳು ಇತ್ಯರ್ಥಗೊಂಡು ವ್ಯಾಪಾರ ವಹಿವಾಟುಗಳಲ್ಲಿ ಉತ್ತಮ ಬೆಳವಣಿಗೆ ಕಾಣುವಿರಿ. ವೈದ್ಯರು , ಸಂಶೋಧಕರಿಗೆ ಪ್ರಗತಿ ಇದೆ.

 

ಕರ್ಕ (Karka)

ನಿಧಾನವಾಗಿ ನೀವು ಆತ್ಮವಿಶ್ವಾಸವನ್ನು ಗಳಿಸುತ್ತೀರಿ ಮತ್ತು ಏನನ್ನಾದರೂ ಸಾಧಿಸಲು ಬಯಸುತ್ತೀರಿ. ಯಶಸ್ಸನ್ನು ಸಾಧಿಸಲು ನೀವು ವರ್ಷಪೂರ್ತಿ ಕಠಿಣ ಪರಿಶ್ರಮ ವಹಿಸಬೇಕು.

 

ಸಿಂಹ (Simha)

ನಿಮಗೆ ಹಿರಿಯರ ಹಾಗೂ ಸೋದರಿಯರ ನೆರವಿನಿಂದ ರಚನ್ಮಾತಕ ಕಾರ್ಯಗಳ ನಿರ್ವಹಣೆ, ಸಂಶೋಧನೆಗೆ ಹಿತೈಷಿಗಳಿಂದ ಉತ್ತೇಜನ ಲಭಿಸಲಿದೆ. ವೈವಾಹಿಕ ಮಾತುಕತೆಗಳಲ್ಲಿ ಕೊಂಚ ಹಿನ್ನಡೆ ಇದ್ದು ನಿರುತ್ಸಾಹವೆನಿಸಲಿದೆ.

 

ಕನ್ಯಾರಾಶಿ (Kanya)

ನೀವು ಸಂಪೂರ್ಣ ಬೆಂಬಲ ಪಡೆಯುತ್ತೀರಿ. ಕೆಲವು ಕಚೇರಿ ಕಾರಣಗಳಿಂದ ಅಥವಾ ಕೆಲಸದ ಕಾರಣಗಳಿಂದ ನೀವು ಕುಟುಂಬದಿಂದ ದೂರಹೋಗಬೇಕಾದೀತು. ಕುಟುಂಬದಲ್ಲಿ ಯಾವುದೇ ಪವಿತ್ರ ಆಚರಣೆಗಳು ನಡೆಯಬಹುದು

 

ತುಲಾ (Tula)

ಧಿಕ ಸುತ್ತಾಟದಿಂದ ಆಯಾಸ ಕಾಣಿಸಿಕೊಳ್ಳಲಿದೆ. ಹೊಸ ಯೋಜನೆಗೆ ಚಾಲನೆ ದೊರೆತು ನಿರೀಕ್ಷೆಗೂ ಮೀರಿದ ಸಂಪಾದನೆ ಉಂಟಾಗಲಿದೆ. ಶಿಕ್ಷಕರುಗಳಿಗೆ ಪುರಸ್ಕಾರ. ರಾಜಕಾರಣಿಗಳಿಗೆ ಉತ್ತಮ ನ್ಯಾಯ ಸಿಗಲಿದೆ.

 

ವೃಶ್ಚಿಕ (Vrushchika)

ನಿಮಗೆ ಲೇವಾದೇವಿ ಹಾಗೂ ಇತರ ವಹಿವಾಟುಗಳಲ್ಲಿ ಬಂಧುಗಳ ನಕಾರಾತ್ಮಕ ಪ್ರತಿಕ್ರಿಯೆಯಿಂದ ಸಹನೆ ಉಡುಗಿ ಹೋಗಲಿದೆ. ಇದರಿಂದ ಧಾರ್ಮಿಕ ಭಾವನೆ ಕುಗ್ಗಿ ನಾಸ್ತಿಕತೆಯತ್ತ ಹೆಜ್ಜೆ ಹಾಕುವ ಸಂಭವವಿದ್ದು, ದೇವಿ ಆರಾಧನೆಯಿಂದ ಸರಿಯಾಗಲಿದೆ.

 

ಧನು ರಾಶಿ (Dhanu)

ಮಾನಸಿಕ ಒತ್ತಡಗಳು ಕಡಿಮೆಯಾಗಿ ನಿರಾಳತೆ ಮೂಡುವುದು. ಸಹೋದರರ ಸಹಕಾರದಿಂದಾಗಿ ವೃತ್ತಿಯಲ್ಲಿನ ಸಮಸ್ಯೆಗಳು ಪರಿಹಾರ. ಸೂಕ್ತ ನಿರ್ಣಯದಿಂದಾಗಿ ಗೌರವ ಪ್ರಾಪ್ತಿ. ರಾಜಕೀಯ ಬಿಡುವಿನ ದಿನವಾಗಲಿದೆ.

 

ಮಕರ (Makara)

ನಿಮಗೆ ಹೊಸ ಕೆಲಸ ಕಾರ್ಯಗಳ ಆರಂಭಕ್ಕೆ ಮತ್ತು ಒಡಂಬಡಿಕೆಗಳಿಗೆ ಸೂಕ್ತ ಕಾಲವಿದೆ. ಚಿಕ್ಕವರ ಮುನ್ನಡೆಗೆ ಸಹಾಯ, ಸಹಕಾರ ನೀಡುವುದರಿಂದ ಸಂತೃಪ್ತಿ ಲಭಿಸಲಿದೆ. ನೀವು ಅಂದುಕೊಂಡಂತೆ ನಿಮಗೆ ಸಮಾಜದಲ್ಲಿಯೂ ಮಾನ್ಯತೆ ಲಭಿಸಲಿದೆ.

 

ಕುಂಭರಾಶಿ (Kumbha)

ವೃತ್ತಿ ನಿರತ ಮಹಿಳೆಯರಿಗೆ ಬದಲಾವಣೆಗಳು ಸಂಭವಿಸುವ ಸಾಧ್ಯತೆ. ಆಧ್ಯಾತ್ಮಿಕ ಜೀವನದಲ್ಲಿ ನೆಮ್ಮದಿ ದೊರಕುವುದು. ಬರಹಗಾರರು, ಪತ್ರಿಕಾ ರಂಗದಲ್ಲಿರುವವರಿಗೆ ಹೆಚ್ಚಿನ ಕೀರ್ತಿ ಮತ್ತು ಹಣವನ್ನು ತಂದುಕೊಡಲಿದೆ. ಅನವಶ್ಯಕ ವ್ಯವಹಾರಗಳಿಗೆ ಕೈ ಹಾಕದಿರಿ.

 

ಮೀನರಾಶಿ (Meena)

ಕೌಟುಂಬಿಕ ಹಾಗೂ ವೈವಾಹಿಕ ಸಂಗತಿಗಳಲ್ಲಿ ಇದನ್ನು ನಿಯಂತ್ರಿಸಬೇಕಾಗಿದೆ. ಜನವರಿಯಿಂದ ಮಾರ್ಚ್‌ವರೆಗೆ ನಿಮ್ಮ ಆರೋಗ್ಯ ಕ್ಷೀಣಿಸಬಹುದು. ಮಾತನ್ನು ಹೊರಹಾಕುವ ಮೊದಲು ಯೋಚಿಸಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top