fbpx
ಹೆಚ್ಚಿನ

ಈ ದೇಶದಲ್ಲಿ ಮಂಚದ ಸುಖಕ್ಕಾಗಿ 200 ಜನ ಹುಡುಗಿಯರು ಬೇಕಂತೆ! ನಿಮ್ಮ ಮಲಮೂತ್ರವನ್ನು ಬಿಸಾಡುವಂತಿಲ್ಲ!!

ಈ ದೇಶದಲ್ಲಿ ಮಂಚದ ಸುಖಕ್ಕಾಗಿ 200 ಜನ ಹುಡುಗಿಯರು ಬೇಕಂತೆ!
ನಿಮ್ಮ ಮಲಮೂತ್ರವನ್ನು ಬಿಸಾಡುವಂತಿಲ್ಲ!!

 

ಸತ್ತ ಮೇಲೆ ನರಕ ಅನುಭವಿಸುವುದು ಬೇರೆ ವಿಚಾರ. ಆದರೆ ಬದುಕಿದ್ದಾಗಲೇ ನರಕಯಾತನೆ ತೋರಿಸುವ ಹಲವಾರು ದೇಶಗಳು ಈ ಭೂಮಿ ಮೇಲಿವೆ. ಇಲ್ಲಿ ಪ್ರಜೆಗಳಿಗೆ ಅಕ್ಷರಶಃ ನರಕ ದರ್ಶನ ಮಾಡಿಸುತ್ತಾರೆ. ಇಂತಹ ರಾಷ್ಟ್ರಗಳ ಪಟ್ಟಿಯಲ್ಲಿ ಉತ್ತರಕೊರಿಯಾ ಒಂದು ರೀತಿಯಲ್ಲಿ ಮೇಲುಗೈ ಸಾಧಿಸುತ್ತಿದೆ.

 

 

 

ಉತ್ತರ ಕೊರಿಯಾ ತನ್ನ ವಿಚಿತ್ರ ನಿಯಮಗಳ ಮುಖೇನ ಅಲ್ಲಿನ ಜನರಿಗೆ ನರಕ ತೋರಿಸುತ್ತಿದೆ. ಇಲ್ಲಿನ ಕೆಲವು ನೀಚತನದ ನಿಯಮಾವಳಿಗಳು ಯಾವುವು ಎಂದು ನೋಡೋಣ…

ಹೆಣ್ಣಿನ ಮೇಲಿನ ಶೋಷಣೆ ಇಂದು ನಿನ್ನೆಯದಲ್ಲ. ಶತಶತಮಾನಗಳಿಂದ ನಿರಂತರವಾಗಿ ದಾಸ್ಯದ ತುತ್ತಾಗಿದ್ದಾಳೆ ಹೆಣ್ಣು. ಇನ್ನು ಉತ್ತರ ಕೊರಿಯಾದಲ್ಲಂತೂ ಹೆಣ್ಣು ಮಕ್ಕಳು ವ್ಯಭಿಚಾರದ ಸರಕೇ ಸರಿ. ಇಲ್ಲಿ 200 ಮಂದಿ ಆಯ್ದ ಹೆಣ್ಣು ಮಕ್ಕಳ ತಂಡವೊಂದನ್ನು ರಚಿಸಿದ್ದಾರೆ, ಈ ತಂಡ ಯಾವುದೋ ಒಲಂಪಿಕ್ ಕ್ರೀಡೆಗೆ ಇರಬೇಕೇನೋ ಎಂದು ಭಾವಿಸದಿರಿ. ಏಕೆಂದರೆ ಇವರ ಕೆಲಸ ಸರಕಾರಿ ಅಧಿಕಾರಿಗಳಿಗೆ ಮನರಂಜನೆ ನೀಡುವುದು ಹಾಗೂ ಮಂಚದ ಸುಖ ಕೊಡುವುದು!

 

 

ಇನ್ನು ನಿಮ್ಮಿಚ್ಛೆಯಂತೆ ನಿಮ್ಮ ಮಲಮೂತ್ರವನ್ನು ಬಿಸಾಡುವಂತಿಲ್ಲ. ಅದನ್ನು ಶೇಖರಿಸಿ ಸರ್ಕಾರಕ್ಕೆ ನೀಡಬೇಕು. ಏಕೆಂದರೆ ಅವರು ವ್ಯವಸಾಯಕ್ಕೆ ರಾಸಾಯನಿಕ ಗೊಬ್ಬರ ಬಳಸುವಂತಿಲ್ಲ. ಮಲದಿಂದ ತಯಾರಾದ ಗೊಬ್ಬರವೇ ಅವರ ಆಹಾರದ ಬೆಳೆಗೆ ಗೊಬ್ಬರವಾಗುವುದು.

 

 

ಈಗಿನ ಕಾಲದಲ್ಲಿ ಸಿನಿಮಾ ನೋಡದೆ ಇರಲು ಸಾಧ್ಯವೇ? ವಾರಕ್ಕೊಂದರಂತೆ ತಿಂಗಳಿಗೆ ನಾಲ್ಕೈದು ಸಿನಿಮಾ ನೋಡಲೇಬೇಕು ನಾವು. ಆದರೆ ಉತ್ತರ ಕೊರಿಯಾದಲ್ಲಿ ಸಿನಿಮಾ ನೋಡುವುದು ಹಾಗೂ ಬೈಬಲ್ ಓದುವುದು ಮಹಾಪರಾಧ. ಇದಕ್ಕೆ ಕೊಡುವುದು ಮರಣದಂಡನೆಯಂತಹ ಭೀಕರ ಶಿಕ್ಷೆಗಳೇ… ಹೋಗಲಿ ಬಿಡಿ ಸಿನಿಮಾ ನೋಡಿ ಜನ ಹಾಳಾಗುತ್ತಾರೆ ಎಂಬ ನಂಬಿಕೆ ಈ ದೇಶದಲ್ಲಿ ಇರಬಹುದೇನೋ ಅದಕ್ಕೆ ಅದರ ನಿಷೇಧವೇನೋ ಎಂದು ಭಾವಿಸಿದರೆ ಅದು ನಮ್ಮ ಮೂರ್ಖತನವಾದೀತು. ಏಕೆಂದರೆ ಹಾಳಾಗಲು ಬೇಕಾದ ಗಾಂಜಾ ಬೆಳೆಯಲು ಇಲ್ಲಿ ಸದವಕಾಶಗಳಿವೆ. ಸರ್ಕಾರವೇ ಸ್ವತಃ ಅದಕ್ಕಾಗಿ ಲೋನ್ ಕೂಡ ಕೊಡಲಾಗುತ್ತದೆ. ಇನ್ನು ಮಕ್ಕಳ ಮೆಲಂತೂ ಅವ್ಯಾಹತವಾಗಿ ಲೈಂಗಿಕ ಕಿರುಕುಳ ನಡೆಯುತ್ತವೆ ಇಲ್ಲಿ.

ನೋಡಿ, ಈ ಭೂಮಿ ಮೇಲೆ ಎಂಥೆಂತಹ ದೇಶಗಳಿವೆ. ಹಾಗೆ ನೋಡಿದರೆ ನಾವೇ ಧನ್ಯ ಅಲ್ಲವೇ…!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top