ತಿಂಡಿ ತೀರ್ಥ

ಚಪಾತಿ , ರೊಟ್ಟಿಯ ಜೊತೆಗೆ ರುಚಿಕರವಾದ ಪನೀರ್ ಬಟರ್ ಮಸಾಲಾ ಮಾಡ್ಕೊಂಡು ತಿಂದ್ರೆ ಆಹಾ ! ಸ್ವರ್ಗ

ಪನೀರ್ ಬಟರ್ ಮಸಾಲಾ :

 

ಬೇಕಾಗುವ ಸಾಮಾಗ್ರಿಗಳು :

100 ಗ್ರಾಂ ಪನ್ನೀರ್
2 ಚಮಚ ಬೆಣ್ಣೆ
2 ಚಿಕ್ಕದಾಗಿ ಕತ್ತರಿಸಿಕೊಂಡ ಟೊಮೊಟೊ
2 ಚಿಕ್ಕದಾಗಿ ಕತ್ತರಿಸಿಕೊಂಡ ಈರುಳ್ಳಿ
50 ಗ್ರಾಂ ಗೋಡಂಬಿ
ಸ್ವಲ್ಪ ಚಕ್ಕೆ
2-3 ಲವಂಗ
ಸ್ವಲ್ಪ ಕೊತ್ತಂಬರಿ ಸೊಪ್ಪು
1 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್
ಅರ್ಧ ಚಮಚ ಅರಿಶಿನ ಪುಡಿ
ಸ್ವಲ್ಪ ಒಣಗಿದ ಮೆಂತ್ಯ ಸೊಪ್ಪು
1 ಚಮಚ ಅಚ್ಚ ಖಾರದ ಪುಡಿ
ಅರ್ಧ ಚಮಚ ಗರಂ ಮಸಾಲಾ ಪುಡಿ
ರುಚಿಗೆ ಬೇಕಾದಷ್ಟು ಉಪ್ಪು

ಮಾಡುವ ವಿಧಾನ :

 

ಒಂದು ಬಾಣಲೆಯಲ್ಲಿ ಒಂದು ಚಮಚ ಬೆಣ್ಣೆ ಹಾಕಿ ನಂತರ ಅದಕ್ಕೆ ಚಿಕ್ಕದಾಗಿ ಕತ್ತರಿಸಿಕೊಂಡ ಈರುಳ್ಳಿ ,ಟೊಮೊಟೊ ಮತ್ತು ಗೋಡಂಬಿ ಹಾಕಿ ಚೆನ್ನಾಗಿ ಹುರಿದುಕೊಳ್ಳಿ ,ನಂತರ ಅದನ್ನು ಚೆನ್ನಾಗಿ ರುಬ್ಬಿಕೊಂಡು ಪಕ್ಕದಲ್ಲಿ ಇಟ್ಟುಕೊಳ್ಳಿ .

ಈ ಸಮಯದಲ್ಲಿ ಇನ್ನೊಂದು ಬಾಣಲೆಯನ್ನು ತೆಗೆದುಕೊಂಡು ಅದಕ್ಕೆ 1 ಚಮಚ ಬೆಣ್ಣೆ ಹಾಕಿ ಅದು ಬಿಸಿಯಾದ ನಂತರ ಅದಕ್ಕೆ ಲವಂಗ ,ಚಕ್ಕೆ ,ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಬಾಡಿಸಿಕೊಳ್ಳಿ

ನಂತರ ಇದಕ್ಕೆ ಸ್ವಲ್ಪ ನೀರು ಮತ್ತು ಆಗಲೇ ರುಬ್ಬಿಕೊಂಡ ಮಿಶ್ರಣವನ್ನು ಸೇರಿಸಿ ಅದಕ್ಕೆ ಚಿಕ್ಕದಾಗಿ ಕತ್ತರಿಸಿಕೊಂಡ ಪನೀರ್ ,ಅಚ್ಚ ಖಾರದ ಪುಡಿ,ಉಪ್ಪು ,ಗರಂ ಮಸಾಲಾ ಪುಡಿ ,ಅರಿಶಿನ ಪುಡಿ,ಸ್ವಲ್ಪ ಒಣಗಿದ ಮೆಂತ್ಯ ಸೊಪ್ಪು ಮತ್ತು ಕೊತ್ತಂಬರಿ ಎಲೆಗಳನ್ನು ಇದರಲ್ಲಿ ಹಾಕಿ ಸ್ವಲ್ಪ ಹೊತ್ತು ಬಿಸಿ ಮಾಡಿ .

ಬಹಳ ಸುಲಭವಾಗಿ ಮಾಡಿಕೊಂಡು ಈ ಪನೀರ್ ಬಟರ್ ಮಸಾಲಾ ಮಾಡಿಕೊಂಡು ರೋಟಿಯ ಜೊತೆ ಇದನ್ನು ಆಸ್ವಾದಿಸಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top