fbpx
News

ಶವದ ಪೆಟ್ಟಿಗೆಯಲ್ಲಿ ಮಲಗಿಕೊಳ್ಳೋ ಥೆರಪಿ ಬಗ್ಗೆ ತಿಳಿದುಕೊಳ್ಳಬೇಕಾ? ಇದನ್ನು ಓದಿ.

ಶವದ ಪೆಟ್ಟಿಗೆಯಲ್ಲಿ ಮಲಗಿಕೊಳ್ಳೋ ಥೆರಪಿ ಬಗ್ಗೆ ತಿಳಿದುಕೊಳ್ಳಬೇಕಾ? ಇದನ್ನು ಓದಿ.

 

 

ಆತ್ಮಹತ್ಯೆಗೆ ಯತ್ನಿಸಿದವರು ಸಿಕ್ಕಿಬಿದ್ದರೆ ಅವರಿಗೆ ಕರೆದು ಬುದ್ಧಿ ಹೇಳುತ್ತೇವೆ. ‘ಈಸಬೇಕು…ಇದ್ದು ಜೈಸಬೇಕು…’ಎಂದೆಲ್ಲಾ ಬುದ್ದಿ ಹೇಳಿ ಅವರಿಗೆ ಮತ್ತೆ ಆತ್ಮಹತ್ಯೆಗೆ ಪ್ರಯತ್ನಿಸದಂತೆ ತಡೆಯುತ್ತೇವೆ. ಆದರೆ ಇಲ್ಲಿ ಮಾತ್ರ ವಿಚಿತ್ರ! ಶವದಪಟ್ಟಿಗೆಯಲ್ಲಿ ಮಲಗಿಸುತ್ತಾರೆ.

 

 

ಯಾಕೆ ಗೊಟಕ್ ಅನ್ನಲಿ ಎಂದೇ?

ಅಲ್ಲ. ಅದೊಂದು ವಿಚಿತ್ರ ಚಿಕಿತ್ಸೆ! ಅಂದಹಾಗೆ ಮಧ್ಯಮಧ್ಯದಲ್ಲಿ ಪ್ರಶ್ನೆ ಕೇಳದೆ ಮುಂದೆ ಓದಿ…ಸಾಯಲು ಯತ್ನಿಸಿದವರನ್ನು ಕಾಫಿನ್‍ಬಾಕ್ಸ್‍ಗೆ ಇಳಿಸುವ ಮುನ್ನ ಬಂಧು, ಬಳಗ, ಸ್ನೇಹಿತರಿಗೆ ಸ್ವಯಂ ಸಾವಿನ ಸುದ್ದಿಯ ಪತ್ರ ಬರೆಸುತ್ತಾರೆ. ಕ್ಯಾಂಡಲ್ ಹಚ್ಚಿ, ಸಂಸ್ಕಾರದ ಮಂತ್ರಗಳ ಪಠಣವಾಗುತ್ತದೆ. ಸಾವಿನ ಅಧಿದೇವತೆಯ ಪೋಷಾಕು ತೊಟ್ಟವನು ಕಣ್ಣುಮುಚ್ಚುವಂತೆ ತಿಳಿಸುತ್ತಾನೆ. ಅದರಂತೆ ಶವದಪೆಟ್ಟಿಗೆಗೆ ಇಳಿದ ‘ಆತ್ಮಹಂತಕ’ ಪವಡಿಸುತ್ತಾನೆ. ಒಂದು ತಾಸು ಪೆಟ್ಟಿಗೆಯಲ್ಲಿ ಮಲಗಿರಬೇಕು. ಹೊರಬಂದ ನಂತರ ಆತ್ಮಹತ್ಯೆಯ ವ್ಯಾಧಿಕಾಡದು ಅವನಿಗೆ ನಿಧನವಾಗು ವಿಷಯವನ್ನು ನಿಧಾನವಾಗುತ್ತದಂತೆ.

 

 

ದಕ್ಷಿಣ ಕೊರಿಯಾದಲ್ಲಿ ಕೆಲಸದ ಒತ್ತಡ ಬಹಳ, ಸ್ಪರ್ಧೆಗಳನ್ನು ಎದುರಿಸಲಾಗದೆ ನಿತ್ಯ ಅಂದಾಜು 40-50 ಮಂದಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಈ ಸಮೂಹಸನ್ನಿಗೆ ‘ಕಾಫಿನ್ ಬಾಕ್ಸ್’ ಚಿಕಿತ್ಸೆ ಮದ್ದಾಗಿದ್ದು ಸಾವಿನ ಸಂಸ್ಕಾರದ ಮಂತ್ರ-ತಂತ್ರಗಳ ನಂತರ ಹಲವರಿಗೆ ಬದುಕಿನ ಜ್ಞಾನೋದಯ ತರಿಸುತ್ತಿದೆ!

 

 

ಈ ಚಿಕಿತ್ಸೆ ಪುಗಸಟ್ಟೆಯಲ್ಲ. ರೊಕ್ಕ ಕೊಟ್ಟು ಹೀಗೆ ಬದುಕಿಸಿಕೊಳ್ಳಬೇಕು. ಈ ಥೆರಪಿಯಿಂದ ಅದೆಷ್ಟು ಜನ ಬದುಕಿದರೋ ಗೊತ್ತಿಲ್ಲ… ಆದರೆ ಈ ಚಿಕಿತ್ಸೆ ನೀಡುತ್ತಿರುವ ವ್ಯಕ್ತಿಯದ್ದು ಐಷಾರಾಮಿ ಬದುಕೇ ಇರಬೇಕು!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top