fbpx
News

ನಾಯಿಗಳಿಗಾಗಿಯೇ ಇರುವ ಟ್ರೈನಿನ ಬಗ್ಗೆ ತಿಳಿದುಕೊಳ್ಳಿ!

ನಾಯಿಗಳಿಗಾಗಿಯೇ ಇರುವ ಟ್ರೈನಿನ ಬಗ್ಗೆ ತಿಳಿದುಕೊಳ್ಳಿ!

 

 

‘ನಾಯಿಗೂ ಒಂದು ಕಾಲ’ ಅಂದರೆ ಇದೇ ಇರಬೇಕು…ಯೂಗ್ಜೆನ್ ಬೋಸ್ಟಿಕ್‍ನ ಎಂಟು ಬೋಗಿಗಳ ಎಕ್ಸ್‍ಪ್ರೆಸ್ ಟ್ರೈನ್ ಹೊರಟರೆ ಅಲ್ಲಿ ‘ಕೂ…ಕೂ… ಚುಗ್, ಬುಗ್’ಗೆ ಬದಲಾಗಿ ‘ಬೌ… ಬೌ…ಔ…ಔ’ಗಳೇ ಹೆಚ್ಚು. ಏಕೆಂದರೆ ಇದು ಶ್ವಾನ್‍ಟ್ರೈನ್! ಅಂದರೆ ಇದು ನಾಯಿಗಳಿಗೆ ಮಾತ್ರವೇ ಇರುವ ರೈಲು!

 

 

ಯೂಗ್ಜೆನ್ ಅಜ್ಜನಿಗೆ ಅರಿವೆ ಚಿಂತೆಯಿಲ್ಲ-ಶ್ವಾನಗಳದ್ದೇ ಚಿಂತೆ. ಬೀಡಾಡಿ ನಾಯಿಗಳ ರಕ್ಷಕ ಈತ. ಹಲವು ನಾಯಿಗಳನ್ನು ರಕ್ಷಿಸಿದ್ದಾನೆ. ಅವುಗಳನ್ನು ಮುದ್ದಾಡಿದ್ದಾನೆ. ಹಸಿದಾಗ ಆಹಾರ ನೀಡಿದ್ದಾನೆ. ಪ್ರತಿಯಾಗಿ ಅವುಗಳು ಇವನ ತೋಟ ಕಾಯುತ್ತಿವೆ. ಅಜ್ಜ ಸಾಮಾನ್ಯದವನಲ್ಲಾ ರೀ….ಇದೇ ಕೆಲಸಕ್ಕೆ ಆಳುಗಳನ್ನು ನೇಮಿಸಿಕೊಂಡಿದ್ದರೆ ಇದಕ್ಕಿಂತಲೂ ಹತ್ತರಷ್ಟು ರೊಕ್ಕ ಖರ್ಚಾಗುತ್ತಿತ್ತು. ಅದೆಲ್ಲಾ ಏನಾದ್ರೂ ಇರ್ಲೀ ರೀ…

 

 

ಈಗ ಶ್ವಾನ್ ಟ್ರೈನ್ ವಿಷಯಕ್ಕೆ ಬರೋಣ… ವಾರದಲ್ಲಿ ಎರಡು ಬಾರಿ ‘ಬೌ ಬೌ ಎಕ್ಸ್‍ಪ್ರೆಸ್’ ಸಂಚರಿಸುತ್ತದೆ. ತನ್ನ 11 ಎಕರೆ ಫಾರಂ ಹೌಸ್ ಶುನಕಗಳ ಸಂಚಾರ ಭೂಮಿಯಾಗಿದೆ. ಈ ರೈಲಿಗೆ ಹಳಿ ಇಲ್ಲ. ಬದಲಿಗೆ ರಸ್ತೆಯಲ್ಲು ಸಂಚರಿಸುತ್ತವೆ. ಈ ಶ್ವಾನ್ ಟ್ರೈನ್ ಕಂಡವರಿಗೂ ಇಷ್ಟು ಮೋಜು.

 

 

 

ಹಲವು ಪ್ರಯೋಗಗಳನಂತರ, ಈ ಡಾಗ್ ಎಕ್ಸ್‍ಪ್ರೆಸ್ ಓಡಾಟಕ್ಕೆ ಬಂದಿದೆ. ಹಳೇ ಟ್ರಾಕ್ಟರ್ ಒಂದರ ಎಂಜಿನ್, ಫೈಬರ್‍ಗ್ಲಾಸ್‍ನ ಬೋಗಿಗಳಲ್ಲಿ ದಿಂಬುಗಳಿದ್ದು ನಾಯಿಗಳಿಗೆ ಸುಖಾಸನಗಳಿವೆ.

ಶುನಕ ಸುಖಕ್ಕಾಗಿ 87ರ ಯೂಗ್ಜೆನ್ ಸಾಕಷ್ಟು ನಾಯಿಪಾಡು ಪಟ್ಟಿದ್ದಾನೆ. ಈ ಡಾಗ್ ಟ್ರೈನ್, ಓಡಿಸುವ ಅಜ್ಜ, ಫಾರಂ ಹೌಸ್ ಎಲ್ಲವೂ ಅಮೆರಿಕದ ಟೆಕ್ಸಾಸ್‍ನಲ್ಲಿದೆ.

ಒಂದು ಡೌಟು…ನಾಯಿನ ಸಿಂಹಾಸನದ ಮೇಲೆ ಕೂರಿಸಿದರೆ ಅದನ್ನು ಕಂಡು ಡೈವ್ ಹೊಡೆಯುತ್ತದೆ ಎನ್ನುತ್ತಾರೆ. ಇಲ್ಲಿ ರೈಲಲ್ಲಿ ಕೂತ ಶ್ವಾನಗಳು ಅದನ್ನು ಕಂಡು… ಆಸೆಪಟ್ಟಿರುವ ಘಟನೆ ನಡೆದಿದೆಯಾ?

ಥೂ… ಏನ್ ಡೌಟ್ರಿ ನಿಮ್ಮದು…ಯೂಗ್ಜೆನ್ ಅಜ್ಜನ ಕೇಳಿ ಹೇಳ್ತೀವಿ!

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top