ದೇವರು

ಆಕಳ ಸಗಣಿಯಿಂದ ಮನೆಯಲ್ಲೇ ವಿಭೂತಿ ತಯಾರಿಸುವ ವಿಧಾನ ತಿಳಿದುಕೊಳ್ಳಿ

ಆಕಳ ಸಗಣಿಯಿಂದ ಮನೆಯಲ್ಲೇ ವಿಭೂತಿ ತಯಾರಿಸುವ ವಿಧಾನ ತಿಳಿದುಕೊಳ್ಳಿ

 

ವಿಭೂತಿಯನ್ನು ಭಸ್ಮ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ನಮ್ಮ ಸಂಪ್ರದಾಯದಲ್ಲಿ ವಿಭೂತಿಗೆ ವಿಶೇಷವಾದ ಸ್ಥಾನಮಾನ ಇದೆ..ಹಣೆಗೆ ಮತ್ತು ದೇಹದ ವಿವಿದೆಡೆಗೆ ವಿಭೂತಿ ಹಚ್ಚಿಕೊಳ್ಳುವ ಸಂಪ್ರದಾಯ ಇನ್ನೂ ಅನೇಕ ಕಡೆ ಆಚರಿಸುತ್ತ ಬಂದಿದ್ದಾರೆ. ವಿಭೂತಿಯಿಲ್ಲದೆ ಮನೆಯಿಂದ ಹೊರಗೆ ಕಾಲಿಡಬಾರದು ಅನ್ನುವ ನಂಬಿಕೆ ಆಗಿನ ಕಾಲದ ಜನಮಾನಸದಲ್ಲಿದೆ. ಆಯುರ್ವೇದದಲ್ಲಿ ವಿಭೂತಿ ಅಥ್ವಾ ಭಸ್ಮಕ್ಕೆ ವಿಶೇಷ ಮಹತ್ವವಿದೆ. ಮುಂಚೆ ವಿಭೂತಿಯನ್ನು ಮನೆಯಲ್ಲೇ ತಯಾರಿಸುತ್ತಿದ್ದರು. ನಮಗೆ ಈಗ ಮಾರುಕಟ್ಟೆಯಲ್ಲಿ ಒಳ್ಳೆಯ ವಿಭೂತಿ ಸಿಗುತ್ತಿಲ್ಲ.

 

 

ವಿಭೂತಿಗೆ ತಯಾರಿಸಲು ಬೇಕಾಗುವ ಸಾಮಗ್ರಿಗಳು:
ದೇಸಿ ಹಸುವಿನ ಸಗಣಿ 2 ಕಿಲೋ, ಸುಮಾರು ಒಂದು ಲೀಟರ ನಷ್ಟು ಗೋಮೂತ್ರ , ಗೋಮಯ(ಸಗಣಿ) ಒಂದೆರಡು ಕಿಲೋದಷ್ಟು. ಹತ್ತಿ ನೂಲಿನ ಬಿಳಿ ವಸ್ತ್ರ.

 

 

ಮಾಡುವ ವಿಧಾನಃ

ವಿಭೂತಿಯನ್ನು ತಯಾರಿಸಲು ಹಸುವಿನ ಸಗಣಿ ಬೇಗಾಗುತ್ತದೆ, ಮಣ್ಣು ಹಾಗು ಕಸವಿಲ್ಲದ ಹಸುವಿನ ಸಗಣಿಯ ಸಹಾಯದಿಂದ ಬೆರಣಿ ತಟ್ಟಿ, ಅದು ಸಂಪೂರ್ಣ ಚೆನ್ನಾಗಿ ಒಣಗುವರೆಗೂ ಬಿಸಿಲಿಗೆ ಇಡೀ . ಒಣಗಿದ ಬೆರಣಿಯನ್ನು ಶಿವರಾತ್ರಿ ದಿನದಂದು ಹೊತ್ತಿಸಿ ಬೂದಿ ಮಾಡಿಕೊಳ್ಳಿ. ಆ ಬೂದಿ ಆರಿಸಿ ನಂತರ ಅದನ್ನು ನೀರಿನಲ್ಲಿ ಕಲಸಿ; ಹತ್ತಿ ನೂಲಿನ ಬಟ್ಟೆಯಿಂದ ಸೋಸಿಕೊಳ್ಳಿ. ಈಗ ಬೂದಿ ತಳದಲ್ಲಿ ನಿಂತಮೇಲೆ, ವಾಪಾಸು ಬೇರೆ ನೀರನ್ನು ಹಾಕಿ ಕಲಸಿ ,ಬಟ್ಟೆಯಿಂದ ಸೋಸುವುದು. ಹೀಗೆ ನೀರು ಬದಲಿಸಿ ಬದಲಿಸಿ ಸೋಸುವುದು ಏಳುಬಾರಿ! ಕೊನೆಗೆ ತಳದಲ್ಲಿ ಕುಳಿತ ಬೂದಿಯನ್ನು ಸ್ವಚ್ಛವಾದ ಜಾಗದಲ್ಲಿ ಒಣಗಿಸಿ ಇಡಬೇಕು.

 

ಇನ್ನು ಅಕಾಲ ಮೂತ್ರವನ್ನು ಏಳುಬಾರಿ ಸೋಸಿಕೊಳ್ಳಬೇಕು. ಆ ಸೋಸಿದ ಗೋಮೂತ್ರದಲ್ಲಿ; ಗೋಮಯದ ಬೂದಿಯನ್ನು ಗಟ್ಟಿಯಾಗಿ ಕಲೆಸಿ, ಸಾಮಾನ್ಯವಾಗಿ ಚಿಕ್ಕಗಾತ್ರದ ಉಂಡೆಗಳನ್ನು ಮಾಡಿಕೊಳ್ಳುವುದು. ಈ ಉಂಡೆಗಳನ್ನು ಸರಿಯಾದ ಶುಭ್ರಜಾಗದಲ್ಲಿ ಒಣಗಿಸುವುದು. ನಂತರ ಆ ಉಂಡೆಗಳನ್ನು ಹುಡಿಮಾಡದೆ, ಗೋವಿನ ಬೆರಣಿಯ ಬೆಂಕಿಯಲ್ಲೇ ಹೊತ್ತಿಸುವುದು.ಅದು ಹೊತ್ತಿ ಕೆಂಪು ಬಣ್ಣಕ್ಕೆ ಬಂದಮೇಲೆ ;ಅದನ್ನು ಬೇರೆ ಬೇರೆಯಾಗಿ ಹರವಿ ತಂಪು ಮಾಡಿ. ಇದೀಗ ಬಿಳಿಯಾದ, ಗಟ್ಟಿಯಾದ ಬೇಗನೆ ಸುಲಭದಲ್ಲಿ ಹುಡಿಯಾಗದ, ಹೀಗೆ ತಯಾರು ಮಡಿದ ವಿಭೂತಿ ಉಂಡೆಗಳು ಬಹಳ ದಿನಗಳ ವರೆಗೂ ಬಾಳಿಕೆ ಬರುತ್ತವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top