ವಿಶೇಷ

ವಿನೂತನ ಸಂಶೋಧನೆ ಗಾಳಿ ಛತ್ರಿ.. ಇದರ ಬೆಲೆ ಬರೋಬ್ಬರಿ 10 ಸಾವಿರ ಡಾಲರ್‍..

ವಿನೂತನ ಸಂಶೋಧನೆ ಗಾಳಿ ಛತ್ರಿ..
ಇದರ ಬೆಲೆ ಬರೋಬ್ಬರಿ 10 ಸಾವಿರ ಡಾಲರ್‍..

 

ಮಳೆ ಬರುತ್ತಿದ್ದರೂ ಈಕೆ ನೆನೆಯುತ್ತಿಲ್ಲ. ಏಕೆಂದರೆ ಟಾರ್ಚ್ ರೀತಿಯ ದಂಡ ಹಿಡಿದಿದ್ದಾಳೆ. ಇದೇ ಛತ್ರಿಯಂತೆ. ಅದೇನದು? ಮಾಹಿತಿ ಇಲ್ಲಿದೆ….

 

 

ಸಕ್ಕತ್ ‘ಛತ್ರಿ’ ಕಣ್ರೀ ಇದು. ಹೆಸರು ಏರ್‍ಅಂಬ್ರೆಲ ಅಲಿಯಾಸ್ ಗಾಳಿ ಕೊಡೆ. ಮಳೆ ಬರುತ್ತಿರುವಾಗ ಬಟನ್ ಹಿಡಿದರೆ ಸಾಕು…ಗಾಳಿಯನ್ನು ಹೀರಿ ಛತ್ರಿ ಹಿಡಿದ ದಿಕ್ಕಿನತ್ತ ‘ಬ್ಲೋ’ ಆಗುತ್ತದೆ. ಸುರಿಯುವ ಚೆಲ್ಲಾಪಿಲ್ಲಿಯಾಗಲಿದೆ. ಆಮೂಲಕ ನೆನೆಯದೆ ಮಳೆಯಲ್ಲೂ ನಡೆಯಬಹುದು.

ಇದರ ಕಾರ್ಯನಿರ್ವಹಣೆಯ ವ್ಯಾಪ್ತಿ ಏನು?

 

 

ಏರ್‍ಬ್ಲೋ ಆಗಿ ಒಂದು ಮೀಟರ್ ವ್ಯಾಸದಲ್ಲಿ ಮಳೆಯಾಗದಂತೆ ಮಾಡಲಿದೆ. ಅಂದಹಾಗೆ ಇದರ ಪವರ್ 30 ನಿಮಿಷಗಳಿಗೆ ಮಾತ್ರ ಇರಲಿದೆ. ನಂತರ ಬ್ಯಾಟರಿ ಬದಲಿಸಬೇಕು. ಇಲ್ಲ ಬ್ಯಾಟರಿ ಚಾರ್ಜ್ ಮಾಡಬೇಕು.

ಮಳೆ ಸುರಿಯುತ್ತಿದ್ಧಾಗಲೇ ಬ್ಯಾಟರಿ ಆಫ್ ಆದರೆ?

 

 

ನೆನೆಯುವುದು ಖಚಿತ. ಅಥವಾ ಮಳೆಯಲ್ಲೇ ಬ್ಯಾಟರಿ ಬದಲಿಸುವ ಸರ್ಕಸ್ ಮಾಡಬೇಕು. ಚೈನಾದವರ ಆವಿಷ್ಕಾರವಿದು. ಬೆಲೆ 10 ಸಾವಿರ ಡಾಲರ್‍ಗಳು.

ನಮ್ಮಲ್ಲೂ ಈ ಛತ್ರಿ ಬಂದರೆ ಕೊಳ್ಳುವಿರಾ?

ಇಲ್ಲ….10 ಸಾವಿರ ಡಾಲರ್ ಕೊಟ್ಟರೆ 10 ಸಾವಿರ ಛತ್ರಿಗಳೇ ಬಂದಿತು. ಅಂತಿರುವಾಗ ಈ ಛತ್ರಿ ನಮಗೇಕೆ ಅಲ್ವಾ?! ಅಷ್ಟಕ್ಕೂ ಇದು ಮಳೆ ಬಂದಾಗ ಮಾತ್ರ ಇದರ ಬಳಕೆ ಆದರೆ ನಮ್ಮ ಛತ್ರಿಗಳು ಹಾಗಲ್ಲಾ ಬಿಸಿಲ ಝಳದಿಂದ ತಪ್ಪಿಸಿಕೊಳ್ಳಲೂ ಬಳಸಬಹುದು ಏನಂತೀರಾ?!

ಆದರೆ ಏರಂಬ್ರೆಲದಿಂದ ಕಿಟಕಿ, ವಾಹನಗಳ ಮೇಲಿನ ಧೂಳು ಝಾಡಿಸಲು ಅನುಕೂಲವಾಗಲಿದೆ. ಮಾಮೂಲಿ ಛತ್ರಿಯಿಂದ ಈ ಕೆಲಸವಾಗದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top