ವಿಶೇಷ

ಇದು ಅಂತಿಂತಾ ವಾಚ್ ಅಲ್ಲ ‘ಬೇ’ ವಾಚ್! ಇದರ ಬಗ್ಗೆ ನೀವು ತಿಳಿದುಕೊಳ್ಳಬೇಕಾ?

ಇದು ಅಂತಿಂತಾ ವಾಚ್ ಅಲ್ಲ ‘ಬೇ’ ವಾಚ್! ಇದರ ಬಗ್ಗೆ ನೀವು ತಿಳಿದುಕೊಳ್ಳಬೇಕಾ?

 

 

 

ಕುಲಗೆಟ್ಟ ಗಡಿಯಾರವೂ ದಿನಕ್ಕೆ ಎರಡು ಬಾರಿ ಸರಿಯಾದ ಸಮಯ ತೋರುತ್ತದೆ. ಆದರೆ ‘ಪ್ಲೇಗ್ರೌಂಡ್ ಲೆಬಿರಿಂತ್’ ವಾಚ್ ಟೈಮ್ ತೋರುವುದಿಲ್ಲ. ಧರಿಸಿದವರೇ ಸಮಯ ಊಹಿಸಬೇಕು!

ಹಾಗಾದ್ರೆ ಇದು ಮಕ್ಕಳು ಧರಿಸುವ ಜಾತ್ರೆ ವಾಚಾ?

ಅಲ್ಲ. ಶ್ರೀಮಂತರು ಕ್ಷಮಿಸಿ ‘ಐಷಾರಾಮಿ’ಗಳಿಗೆಂದೇ ಇವುಗಳನ್ನು ತಯಾರು ಮಾಡಲಾಗಿದೆ. ಸ್ವಿಸ್ ದೇಶದ ಹಾಟೆಲೆನ್ಸ್ ಕಂಪೆನಿಯ ಈ ಕೈಗಡಿಯಾರಕ್ಕೆ ರೂ.8,35,978(12,000 Sತಿiss ಜಿಡಿಚಿಟಿಛಿs) ಬೆಲೆ ನಿಗದಿಪಡಿಸಿದೆ.

ಸಮಯ, ಸಂದರ್ಭ ತೋರಿಸದಿದ್ದರೂ ಈ ಪಾಟಿ ದುಬಾರಿ ಏಕೆ?

ಚಿನ್ನ, ಪ್ಲಾಟಿನಂಗಳನ್ನು ಬಳಸಿ ‘ವಾಚ್ ಕೇಸ್’ ಮಾಡಲಾಗಿದೆ. ಉತ್ತಮ ಲೆದರ್‍ನಿಂದ ಬೆಲ್ಟ್ ಹೆಣೆದು ಪೋಣಿಸಲಾಗಿದೆ.

 

 

 

ಚರ್ಮದ ಕಾಯಿಲೆ ಉಳ್ಳವರು ಧರಿಸಿದರೂ ಅಲರ್ಜಿಯಾಗುವುದಿಲ್ಲವಂತೆ. ಅಂಥಹ ಉತ್ಕøಷ್ಟತೆಯ ಖಾತ್ರಿಯನ್ನು ಕಂಪೆನಿ ನೀಡುತ್ತಿದೆ.

ಎಲ್ಲಕ್ಕಿಂತಲೂ ಹೆಚ್ಚಾಗಿ ಗಡಿಯಾರದಲ್ಲೇ ಪ್ಲಾಟಿನಂ ಬಾ¯ನ್ನು ಅಳವಡಿಸಲಾಗಿದೆ. ಕೈ ಅಲುಗಾಡಿಸುತ್ತಾ ನಿಶ್ಚಿತ ‘ಹೊಲ್’ ಒಳಗೆ ಇಳಿಸಬೇಕು. ಬೆರಳುಗಳಲ್ಲಿ ಹಿಡಿದು ಈ ಆಟ ವಾಡುವಂತಿಲ್ಲ. ಬದಲಿಗೆ ಕೈಗಳಿಗೆ ಧರಿಸಿಯೇ ಮಾಡಬೇಕು. ಸರಳವಾದರೂ ಇದೊಂದು ‘ಸಕ್ಕತ್’ ಚಾಲೆಂಜಿಂಗ್. ಈ ಪುಟ್ಟ ಆಟಕ್ಕಾಗಿಯೇ ದೊಡ್ಡ ಮೊತ್ತದ ಹಣತೆತ್ತು ಕೊಳ್ಳುವವರೂ ಇದ್ದಾರೆ. ಹಲವರು ಆನ್‍ಲೈನ್ ಕ್ಯೂನಲ್ಲಿ ನಿಂತಿದ್ದಾರೆ. ಇದರೊಂದಿಗೆ ಕಾಲ ಕಳೆಯುತ್ತಿದ್ದರೆ ಸಮಯ ಸವೆದು ಹೋಗುವುದೇ ತಿಳಿಯದು.

ಪ್ರಾಯಶಃ ಈ ಕಾರಣಕ್ಕಾಗಿಯೇ ಟೈಮ್ ತೋರದಂತೆ ಮಾಡಿರಬೇಕು!?

ಗೊತ್ತಿಲ್ಲ ಗಡಿಯಾರವಲ್ಲದ ‘ಬೇ’ವಾಚ್‍ನ ಶೋ ರೂಂ ಆರಂಭಿಸಲು ಮುಖ್ಯಮಂತ್ರಿಗಳನ್ನು ಕೋರಿದರೆ ಹೇಗೆ?

ತಮ್ಮ ಹ್ಯೂಬ್ಲೆಟ್ ವಾಚ್ ನೆನೆಪಾಗಿ ಅವರು ‘ವಾಚ್‍ಮಗೋಚರ’ವಾಗಿ ನಿಂದಿಸಬಹುದು!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top