ವಿಶೇಷ

ಈ ಸ್ಪೂನನ್ನೇ ತಿನ್ನಬಹುದು ಅಂದರೆ ನೀವು ನಂಬುತ್ತೀರಾ? ನಂಬಲೇಬೇಕು?

ಈ ಸ್ಪೂನನ್ನೇ ತಿನ್ನಬಹುದು ಅಂದರೆ ನೀವು ನಂಬುತ್ತೀರಾ? ನಂಬಲೇಬೇಕು?

ಖಾದ್ಯ ಸ್ಪೂನ್ ಬಳಸಿ – ನೀರುಳಿಸಿ

ಚಮಚಾಗಿರಿ ತಗ್ಗಿಸಲು ಸ್ಪೂನ್‍ಗಳನ್ನೇ ತಿಂದು ಹಾಕಬೇಕು! ಎಂದು ಪ್ರಾಮಾಣಿಕರು ಆಗಾಗ ‘ಚಮಚಾ’ಗಳ ವಿರುದ್ಧ ಗುಡುಗುತ್ತಾರೆ. ನಮ್ಮ ಈ ಮಾತುಗಳನ್ನು ನೆರೆಯ ಹೈದ್ರಾಬಾದಿಗಳು ಕದ್ದು ಕೇಳಿರಬೇಕು. ಈ ಗುಮಾನಿ ಏಕೆಂದರೆ ಅಕ್ಷರಶಃ ತಿಂದುಹಾಕುವಂತಹ ಸ್ಪೂನ್‍ಗಳನ್ನು ತಯಾರಿಸಿದ್ದಾರೆ.

 

 

ಚಹಾ, ಕಾಫಿ, ಪಾಯಸ, ಇನ್ನಿತರೆ ಬಿಸಿ ಹಾಗೂ ಸಿಹಿ ಪಾನೀಯಗಳನ್ನು ಕಲಕಿಕೊಳ್ಳುವ ಸ್ಪೂನ್‍ಗಳಿವೆ. ಅಲ್ಲದೆ ಸೂಪ್, ಸಾಂಬಾರ್, ಚಟ್ನಿ, ರಸಂ ಮುಂತಾದ ಖಾರದ ವಸ್ತುಗಳನ್ನು ಕಲಕಿಕೊಳ್ಳುವ ಚಮಚಾಗಳು ಇವೆ…!

ಸಿಹಿ ಮತ್ತು ಖಾರಕ್ಕೆ ಬೇರೆ ಬೇರೆ ಚಮಚಾಗಳೇಕೆ?

ಹೌದು. ಧಾನ್ಯ, ಅಕ್ಕಿ, ಹಾಗೂ ಗೋದಿಯ ಮಿಶ್ರಣದೊಂದಿಗೆ ತಯಾರಾದ ಖಾರದ ಚಮಚಗಳಿಂದ ಸಾಂಬಾರ್, ಸೂಪ್‍ಗಳನ್ನು ಸೇವಿಸಲು ಬಳಸಬಹುದು. ಶುಂಠಿ, ಬೆಳ್ಳುಳ್ಳಿ, ಏಲಕ್ಕಿ, ಕಾಳುಮೆಣಸು, ಪುದಿನಾ, ಮುಂತಾದ ಫ್ಲೇವರ್‍ಗಳ ಚಮಚಗಳು ಬಂದಿದ್ದು ಇವುಗಳಿಂದ ಸೂಪ್ ಮುಂತಾದ ಹೆಚ್ಚಿನ ಮಸಾಲೆಯ ಪಾನೀಯಗಳನ್ನು ಸೇವನೆಗೆ ಯೋಗ್ಯ. ಅಕ್ಕಿ, ಗೋದಿ, ಯಾಲಕ್ಕಿಗಳಿಂದ ಸ್ಪೂನ್‍ಗಳನ್ನು ಮಾಡಿದ್ದು ಇವುಗಳನ್ನು ಪಾಯಸ ಮುಂತಾದ ಸಿಹಿ ತಿನಿಸುಗಳನ್ನು ತಿಂದು ತೇಗಲು ಬಳಸಬಹುದು. ತೊಳೆದಿಡಬೇಕಿಲ್ಲ. ಬದಲಿಗೆ ಸ್ಪೂನ್ ಸಮೇತ ಉದರಕ್ಕಿಳಿಸಬಹುದು. ಇವುಗಳು ತಿನಿಸುಗಳ ರುಚಿ ಹೆಚ್ಚಿಸಲಿದೆ. ತಿಂದ್ಹಾಕಿ ನೀರುಳಿಸಬಹುದು.

 

 

ಹೈದ್ರಾಬಾದ್‍ನ ಕಂಪೆನಿಯೊಂದು ಈ ಸ್ಪೂನ್‍ಗಳ ಪೇಟೆಂಟ್‍ಗಿಟ್ಟಿಸಿಕೊಂಡಿದೆ. ಭಾರತದಲ್ಲಿ ಈ ಕಲ್ಪನೆ ಇದೇ ಮೊದಲಂತೆ. ಬಿಡುಗಡೆಗೆ ಭರ್ಜರಿ ತಯಾರಿ ನಡೆದಿದೆ.

ಇಂತಹ ಖಾದ್ಯ ಚಮಚಗಳನ್ನು ಉಚಿತವಾಗಿ ಮತ್ತೊಂದು ಕಂಪೆನಿ ನೀಡಿದರೆ ಏನನ್ನಬಹುದು?

ಸ್ಪೂನ್ಸರರ್ಸ್ !

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top