fbpx
ಹೆಚ್ಚಿನ

ಜೋಗಿ ಬಿಟ್ಟಲೇ ಬೀಡು’… ಹೈಟೆಕ್ ಜೋಪಡಿ ಕಚೇರಿಯಲ್ಲಿ ಕಣ್ಣರಳಿಸಿ ನೋಡಿ !

ಜೋಗಿ ಬಿಟ್ಟಲೇ ಬೀಡು’… ಹೈಟೆಕ್ ಜೋಪಡಿ ಕಚೇರಿಯಲ್ಲಿ ಕಣ್ಣರಳಿಸಿ ನೋಡಿ !

 

ಹೈಟೆಕ್ ಜೋಪಡಿ-ಕಚೇರಿಯಲ್ಲಿ ನೋಡಿ…

ಚಿಕ್ಕಮಕ್ಕಳು ಗೂಡು ಕಟ್ಟಿಕೊಂಡು ಆಡುತ್ತಾರಲ್ಲಾ ಅದೇ ಈಗ ದೊಡ್ಡವರ ಪಾಡು! ಏನದು ಪಡಬೇಕಾದ ಪಾಡು ಎಂದರೇ…

 

 

ಇದು ಪಾಸ್‍ಪಾಡ್- ಏಕೆಂದರೆ ಕೆಲಸದ ಒತ್ತಡ ಹೆಚ್ಚಾದಾಗ, ಧ್ಯಾನ ಮಾಡಲು, ನಿದ್ದೆ ಬಂದಾಗ ಮಲಗಲು, ಕತ್ತಲಿನ ವಾತಾವರಣದಲ್ಲಿ ಮನಸ್ಸು ಹಗುರ ಮಾಡಿಕೊಳ್ಳಲು ಸಲೀಸು.

 

ಬಾಸ್ ಒಪ್ಪಿದರೆ ಕಚೇರಿಗೂ ಇದು ಉತ್ತಮ. ಬೇಡವೆನಿಸಿದರೆ ವಿಹಾರಕ್ಕೆ ತೆರಳಿದಾಗ ಅಲ್ಲಿಯು ಇದನ್ನು ಬಳಸಬಹುದು. ಮನೆಯ ಅಂಗಳದಲ್ಲಿ ಹೀಗೆ ಎಲ್ಲೆಂದರಲ್ಲಿ ಉಪಯೋಗಿಸಬಹುದು. ಹೆಚ್ಚಾಗಿ ಇದು ಬಳಕೆಯಾಗುತ್ತಿರುವುದು ಕಚೇರಿಗಳಲ್ಲಿ ನೋಡಲು ಪುಟ್ಟ ಗುಡಿಸಲು, ಗೂಡಾದರೂ…ಪುಟ್ಟ ಗೂಡಾದರೂ ಮೊಬೈಲ್ ಚಾರ್ಜಿಂಗ್, ರೀಡಿಂಗ್ ಲ್ಯಾಂಪ್, ಟ್ಯಾಬ್ಲೆಟ್ ತೂಗಿಹಾಕಲು ಕೊಕ್ಕೆ ಎಲ್ಲವೂ ಇದೆ. ಸ್ವೀಡನ್ ಸಂಶೋಧಕರ ಈ ಪಾಸ್‍ಪಾಡ್‍ನ ಬೆಲೆ 10 ಸಾವಿರ ಡಾಲರ್‍ಗಳು…

 

 

‘ಜೋಗಿ ಬಿಟ್ಟಲೇ ಬೀಡು’… ಅಂತಾರಲ್ಲಾ ರೀ… ಹಾಗೆ ಈ ಪಾಸ್‍ಪಾಡ್. ಸುಲಭವಾಗಿ ಮಡಚಿ ಒಯ್ಯಬಹುದು. ಹೆಚ್ಚು ಭಾರವಿಲ್ಲ. ಕೊಳ್ಳುಗರಿಗೆ ಮಾತ್ರ ಇದು ಬಲು ಭಾರ.

 

ನಮ್ಮ ಸರ್ಕಾರದ, ಬಿಬಿಎಂಪಿ ಕಚೇರಿಗಳಲ್ಲೂ ಇದರ ಬಳಕೆ ಬಂದರೆ ಹೇಗೆ?

ಬೇಡ…! ಇಲ್ಲಿರುವ ನಮ್ಮ ಅಧಿಕಾರಿಗಳ ಕುರ್ಚಿಗಳೇ ಪಾಸ್‍ಪಾಡ್‍ಗಿಂತಲೂ ಉತ್ತಮ. ಇದರಲ್ಲಿ ಕೂತಲ್ಲಿ ತೂಕಡಿಕೆ, ನೆಮ್ಮದಿ, ಲಂಚದ ಹಣ ಎಲ್ಲವೂ ಬರಲಿದೆ. ಈ ಕುರ್ಚಿಗಳನ್ನೇ ಸ್ವೀಡನ್‍ಗೆ ಕಳುಹಿಸುವುದು ಲೇಸು!

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top