ಜ್ಯೋತಿಷ್ಯ

ಜನವರಿ 04 : ನಿತ್ಯ ಭವಿಷ್ಯ ಮತ್ತೆ ಪಂಚಾಂಗ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಗುರುವಾರ, ೦೪ ಜನವರಿ ೨೦೧೮
ಸೂರ್ಯೋದಯ : ೦೬:೪೬
ಸೂರ್ಯಾಸ್ತ : ೧೮:೦೨
ಶಕ ಸಂವತ : ೧೯೩೯ ಹೇವಿಲಂಬಿ
ಅಮಂತ ತಿಂಗಳು : ಪುಷ್ಯ
ಪಕ್ಷ : ಕೃಷ್ಣ ಪಕ್ಷ
ತಿಥಿ : ತದಿಗೆ
ನಕ್ಷತ್ರ : ಆಶ್ಲೇಷ
ಯೋಗ : ವಿಷ್ಕುಂಭ
ಪ್ರಥಮ ಕರಣ : ವಣಿಜ – ೧೧:೦೦ ವರೆಗೆ
ಸೂರ್ಯ ರಾಶಿ : ಧನು
ಅಭಿಜಿತ್ ಮುಹುರ್ತ : ೧೨:೦೨ – ೧೨:೪೭
ಅಮೃತಕಾಲ : ೨೬:೨೭+ – ೨೭:೫೪+

ರಾಹು ಕಾಲ: ೧೩:೪೯ – ೧೫:೧೩
ಗುಳಿಕ ಕಾಲ: ೦೯:೩೫ – ೧೧:೦೦
ಯಮಗಂಡ: ೦೬:೪೬ – ೦೮:೧೧

 

ಮೇಷ (Mesha)

ನೀವು ಕಾರ್ಯಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಿರಿ. ಪರರನ್ನು ಕುರಿತು ಟೀಕೆ ಟಿಪ್ಪಣಿಗಳನ್ನು ಮಾಡದಿರಿ. ಆದರೆ ಅನ್ಯರ ಬಗೆಗೂ ನೀವು ಎಚ್ಚರಿಕೆ ವಹಿಸುವುದು ಒಳ್ಳೆಯದು. ಬೇಕೆಂತಲೇ ನಿಮ್ಮ ಬುದ್ಧಿ ಚಾತುರ‍್ಯವನ್ನು ಒರೆ ಹಚ್ಚುವ ಕೆಲಸ ಮಾಡುವರು.

 

ವೃಷಭ (Vrushabha)

ನಿಮ್ಮ ಹಿತಚಿಂತಕರನ್ನು ಅಥವಾ ಸ್ನೇಹಿತರನ್ನು ಬೆಂಬಲಿಸುವಿರಿ. ಅದರಿಂದ ನಿಮಗೆ ಮುಂದಿನ ದಿನಗಳಲ್ಲಿ ಒಳಿತಾಗುವುದು. ಮಗನ ಸಲುವಾಗಿ ನಡೆಸಿದ ಪೂಜೆಗಳು ಇಂದು ಫಲ ಕೊಡುವ ಸಾಧ್ಯತೆ ಇದೆ. ಆರ್ಥಿಕ ಸ್ಥಿತಿ ತೃಪ್ತಿಯಾಗಿರುತ್ತದೆ.

 

ಮಿಥುನ (Mithuna)

ರಾಜಕೀಯ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಹೆಚ್ಚಿನ ಬೆಂಬಲ ದೊರೆಯುವುದಿಲ್ಲ. ಆದಾಗ್ಯೂ ಮನುಷ್ಯ ಪ್ರಯತ್ನಶೀಲನಾಗಬೇಕು. ಪ್ರಯತ್ನಶೀಲನಿಗೆ ಭಗವಂತನು ಒಲಿಯುವನು. ಆರ್ಥಿಕ ಸ್ಥಿತಿ ಸುಭದ್ರವಾಗಿರುವುದು.

 

ಕರ್ಕ (Karka)

ಮನಸ್ಸಿನ ತಾಕಲಾಟದಲ್ಲಿ ಗೊಂದಲ ಏರ್ಪಡುವ ಸಾಧ್ಯತೆ ಇದೆ. ದೈವ ಕಾರ್ಯಗಳು ನೆಮ್ಮದಿ ನೀಡುವುದು. ಹಣಕಾಸಿನ ಪರಿಸ್ಥಿತಿ ಸಂಜೆಯ ವೇಳೆಗೆ ಅನುಕೂಲವಾಗುವುದು. ಕುಟುಂಬದ ಸದಸ್ಯರೊಡನೆ ಹೊರ ಸಂಚಾರ ಮಾಡುವಿರಿ.

 

ಸಿಂಹ (Simha)

ಸಮಯ ಪ್ರಜ್ಞೆಯಿಂದ ವ್ಯವಹರಿಸಿ. ಸ್ನೇಹಿತರೊಂದಿಗೆ ಮೋಜು ಅನುಭವಿಸುವಿರಿ. ನಿಮ್ಮ ಕೆಲಸ ಕಾರ್ಯಗಳಲ್ಲಿ ಮಕ್ಕಳ ಸಹಾಯ, ಸಹಕಾರ ನಡೆಯುವುದರಿಂದ ಅಧಿಕ ಒತ್ತಡದಿಂದ ಪಾರಾಗುವಿರಿ.

 

ಕನ್ಯಾರಾಶಿ (Kanya)

ಸಾಧು ಸ್ವಭಾವದವರಾದ ನಿಮ್ಮಿಂದ ಪದೇ ಪದೆ ಹಣವನ್ನು ಪಡೆಯಲು ಉತ್ಸುಕರಾಗುವರು. ಈಬಗ್ಗೆ ನೀವು ಎಚ್ಚರಿಕೆಯಿಂದ ಇರಬೇಕು. ಹಣ ಕೊಟ್ಟು ಸ್ನೇಹವನ್ನು ಹಾಳು ಮಾಡಿಕೊಳ್ಳಬೇಡಿರಿ.

 

ತುಲಾ (Tula)

ಮಹತ್ವದ ಯೋಜನೆಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ಹೊಸ ಯೋಜನೆಗಳ ತಯಾರಿ ಮತ್ತು ಅನುಷ್ಠಾನಗಳಿಗೆ ಒಳ್ಳೆಯ ಸಮಯವಿದು. ಕುಟುಂಬದ ಜನರೊಡನೆ ಮಾತುಕತೆಯು ಫಲಪ್ರದವಾಗುವುದು. ಆರೋಗ್ಯ ಉತ್ತಮವಾಗಿರುತ್ತದೆ.

 

ವೃಶ್ಚಿಕ (Vrushchika)

ಅನೇಕ ಸಮಸ್ಯೆಗಳಿಂದ ಗೊಂದಲದ ಗೂಡಾಗಿದ್ದ ಕುಟುಂಬದಲ್ಲಿ ನೆಮ್ಮದಿ ಕಾಣಲು ಆರಂಭವಾಗಿದೆ. ಆರ್ಥಿಕ ಸಮಸ್ಯೆಗಳು ಆದಾಯದಿಂದ ಸುಧಾರಿಸಲಿವೆ. ಮಾವನ ಮನೆಯಿಂದ ಬರಲಿರುವ ಎಲ್ಲ ರೀತಿಯ ಸಹಾಯಗಳನ್ನು ಸ್ವೀಕರಿಸಿರಿ.

 

ಧನು ರಾಶಿ (Dhanu)

ಹಣಕಾಸಿನ ವಿಚಾರದಲ್ಲಿ ಅಲ್ಪ ಅಡೆ ತಡೆ ಉಂಟಾಗುವುದು. ಆದಾಗ್ಯೂ ಗುರು ಕೃಪೆಯಿಂದ ಖರ್ಚಿಗೆ ತಕ್ಕಷ್ಟು ಹಣ ಒದಗಿ ಬರುವುದು. ಆದರೆ ಉಳಿತಾಯ ಮಾಡಲು ಆಗುವುದಿಲ್ಲ. ಶನಿ ಮತ್ತು ಆಂಜನೇಯ ಸ್ತೋತ್ರವನ್ನು ಪಠಿಸಿರಿ.

 

ಮಕರ (Makara)

ಹೊಸ ಕೆಲಸಗಳನ್ನು ಹುಡುಕುವವರಿಗೆ ಹೇರಳ ಅವಕಾಶಗಳು ದೊರೆಯಲಿವೆ. ದೈವ ಕೃಪೆಯಿಂದ ಶುಭಫಲ ಉಂಟಾಗುವುದು. ಸ್ನೇಹಿತರು ಸಹಾಯ ಕೋರಿ ಬರಲಿದ್ದು, ಸಾಧ್ಯವಾದಷ್ಟು ಮಟ್ಟಿಗೆ ನೆರವು ನೀಡಿರಿ. ಹಣಕಾಸಿನ ಸ್ಥಿತಿಯು ಉತ್ತಮಗೊಳ್ಳುವುದು.

 

ಕುಂಭರಾಶಿ (Kumbha)

ಸಕಾರಾತ್ಮಕ ಶಕ್ತಿಯು ನಿಮ್ಮಿಂದ ಉತ್ತಮವಾದ ಕೆಲಸವನ್ನು ಮಾಡಿಸುವುದು. ಇದಕ್ಕೆ ಪೂರಕವಾಗಿ ಹಣಕಾಸು ಕೂಡ ಒದಗಿ ಬರುವುದು. ಸ್ನೇಹಿತರು ನಿಮ್ಮ ಸಹಾಯಕ್ಕೆ ಬರುವರು. ಕೌಟುಂಬಿಕ ಜೀವನ ಉತ್ತಮವಾಗಿರುತ್ತದೆ.

 

ಮೀನರಾಶಿ (Meena)

ಸ್ನೇಹಿತರು ಸಹಾಯ ಕೋರಿ ಬರಲಿದ್ದು, ಅವರಿಗೆ ಸಾಧ್ಯವಾದಷ್ಟು ಮಟ್ಟಿಗೆ ನೆರವು ನೀಡಿರಿ. ನಿರುದ್ಯೋಗಿ ಮಗನಿಗೆ ಸಾಧಾರಣ ವೇತನದ ನೌಕರಿ ದೊರೆಯುವ ಸಾಧ್ಯತೆ ಇರುತ್ತದೆ. ಮಿತಿ ಮೀರುತ್ತಿರುವ ಖರ್ಚುಗಳಿಗೆ ಕಡಿವಾಣ ಹಾಕಿರಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top