ವಿಶೇಷ

ಈ ಬಾಳೆ ಹಣ್ಣು ಖರೀದಿಸಲು ಮೊದಲೇ ಬುಕ್ ಮಾಡಬೇಕಾ? ಇದರ ವಿಶೇಷತೆ ಏನು ಗೊತ್ತಾ

ಈ ಬಾಳೆ ಹಣ್ಣು ಖರೀದಿಸಲು ಮೊದಲೇ ಬುಕ್ ಮಾಡಬೇಕಾ? ಇದರ ವಿಶೇಷತೆ ಏನು ಗೊತ್ತಾ.

ಅನುಮಾನುವೇ ಬೇಡ ಇದು ಬಾಳೆಹಣ್ಣು. ಮೂಂಗೀ ಬಾಳೆ ಅಂತೆ. ಅಂದರೆ ಅನನ್ಯ ಕದಳಿ ಹಣ್ಣು. ನೋಡಲು ಮಜಬೂತಾಗಿದ್ದರೂ ತಿನ್ನಲು ಮಜವಾಗಿಲ್ಲ. ಸಿಪ್ಪೆ ಮಾಮೂಲಿ ಬಾಳೆಗಿಂತಲೂ ತೆಳುವಿದೆ. ರುಚಿಯಲ್ಲಿ ಕೊಂಚ ವಗರು-ಹುಳಿ!

 

 

ಇಷ್ಟೇನಾ ವಿಶೇಷ?

ಅಲ್ಲ. ಇದು ಕೃತಕವಾಗಿರೋದೆ ವಿಶೇಷ. ಸೇವಿಸಬಹುದಾದ ಬಾಳೆ ಹಣ್ಣಿನ ಸಿಪ್ಪೆಯಿಂದ ಕಸಿ ಮಾಡಿ ಮೂಂಗಿಯನ್ನು ತಯಾರಿಸಿದ್ದಾರೆ. ಶೇ. 100 ಯಶಸ್ಸಗಿಟ್ಟಿಸುವ ಹವಣಿಕೆಂiÀiಲ್ಲಿದ್ದಾರೆ.

ಚೀನಿಯರು ನಕಲಿ ಮೊಟ್ಟೆ, ನಕಲಿ ಅಕ್ಕಿ, ನಕಲಿ ಕೋಸು ಮಾಡಿದ್ದು ಹಳೇ ಸುದ್ದಿ ಇದೀಗ ಜಪಾನೀಯರು ಈ ನಕಲಿ ಬಾಳೆ ಸೃಷ್ಟಿಸಿರುವುದೇ ವಿಸ್ಮಯ. ಹಾಗೆಂದು ಚೀನೀಯರಂತೆ ‘ಯದ್ವಾ-ತದ್ವಾ’ ಮಾಡಿಲ್ಲ ಈ ‘ಕುಳ್ಳ’ ಜಪಾನ್.

 

 

ಸುಮಾರು 20,000 ವರ್ಷಗಳ ಹಿಂದೆ ಹಿಮಯುಗದ ಅಂತ್ಯದಲ್ಲಿದ್ದ ‘ಫ್ರೀಜ್ ಥಾ ಅವೇಕನಿಂಗ್’ ಎಂಬ ಸ್ಥಿತಿಯನ್ನೇ ಮರುಸೃಷ್ಟಿ ಮಾಡಿದ್ದಾರೆ. -60 ಡಿಗ್ರಿಸೆಲ್ಶಿಯಸ್‍ನಲ್ಲಿ ಬಾಳೆ ಕಸಿ ಮಾಡಿ ಫಲ ತೆಗೆಸೋಷ್ಟರಲ್ಲಿ ಇವರಿಗೆ ‘ಬಾಳ’ ಸಾಕಾಗಿದೆ. ಸಾಕಷ್ಟು ಬೆವರದೆ, ಗಡ ಗಡ ನಡುಗಿ ಅನನ್ಯಬಾಳೆ ತೆಗೆದಿದ್ದಾರೆ. ಜಪಾನಿನ ಒಕಯಾಮದ ತೋಟಗಾರಿಕಾ ಇಲಾಖೆಯ ಸಂಶೋಧನಾ ಮತ್ತು ಅಭಿವೃದ್ಧಿ ವಿಭಾಗದ ‘ಫಲ’ವಿದು.

ಪ್ರತಿವಾರ ಸುಮಾರು 10 ಬಾಳೆಹಣ್ಣುಗಳನ್ನು ಮಾತ್ರವೇ ಇವರು ಬೆಳೆಸಲು ಶಕ್ಯವಾಗಿದ್ದು, ಓಕಯಾಮದ ‘ತೆನ್ಮಾನ್ಯ’ ಎಂಬಲ್ಲಿ ಮಾತ್ರವೇ ದೊರೆಯಲಿದೆ.

ಕೊಂಡುಕೊಳ್ಳುವಿರಾದರೆ ಮೊದಲೆ ಬುಕ್ ಮಾಡಬೇಕು. ಸರದಿ ಬಂದಾಗ 6 ಡಾಲರ್ ತೆರಬೇಕು!

ಇಷ್ಟುಹಣ (ರೂ. 400) ತೆತ್ತರೆ ಒಂದು ಬಾಳೆ ಸಿಗಲಿದೆ.

ಈ ಪಾಟಿ ರೇಟಲ್ಲಿ ನಮ್ಮಲ್ಲೂ ಹಣ್ಣು ಮಾರಾಟ ಮಾಡಿದರೆ?

ಮಾರುವವನ ‘ಬಾಳೇ’ ಬಂಗಾರವಾಗಲಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top