ವಿಶೇಷ

‘ದಾರ್‍ಬಾರ್’ ಬಾರಿನಲ್ಲಿ ದಾರ ‘ಎಳೆ’ದಾಡುವುದರಿಂದ ಮೆದುಳು, ಶರೀರ ‘ರಿಲ್ಯಾಕ್ಸ್’ಅಗತ್ತಂತೆ ನಿಜಾನಾ?

 

‘ದಾರ್‍ಬಾರ್’

‘ಎಳೆ’ದಾಡುವುದರಿಂದ ಮೆದುಳು, ಶರೀರ ‘ರಿಲ್ಯಾಕ್ಸ್’ಅಗತ್ತಂತೆ ನಿಜಾನಾ?

ಕುಡಿದು ತೂರಾಡುವುದಕ್ಕಿಂತಲೂ ಕುಳಿತು ‘ಎಳೆ’ದಾಡುವುದೇ ಮೇಲು! ಇದೇನು ವಿವೇಕವಾಣಿಯಲ್ಲ ಹೀಗಾಗಿ ವಿವೇಕ ಭಕ್ತರು ಕೋಪಿಸಿಕೊಳ್ಳುವ ಅಗತ್ಯವೂ ಇಲ್ಲ. ಹಾಗಾದರೆ ಏನು ಎಳೆದಾಡಬೇಕೆಂದು ತಿಳಿಯಲು ಇಲ್ಲಿದೆ ಮಾಹಿತಿ..

 

 

ಜಪಾನ್ ರಾಜಧಾನಿ ಟೋಕಿಯೋದಲ್ಲಿ ‘ಕಾಟನ್ ವಿಲೇಜ್’ ಬಾರಿದೆ. ಇಲ್ಲಿ ಕುಡಿತಕ್ಕೂ – ಎಳೆತಕ್ಕೂ ಅವಕಾಶವಿದೆ. ಮದ್ಯಕ್ಕೆ ಆರ್ಡರ್ ಮಾಡಿದರೆ ಹತ್ತಿ ಉಂಡೆ ಕೈಗಿಡುತ್ತಾರೆ. ನೂಲು ತೆಗೆಯಲು ಹೇಳುತ್ತಾರೆ. ಅರಿತಿಲ್ಲದವರಿಗೆ ತೆಗೆಯುವುದನ್ನೂ ಹೇಳಿಕೊಡುತ್ತಾರೆ. ಮದಿರೆಯಬಾಟಲಿ ಕೈಗೆ ಬರುವುದರೊಳಗೆ ನೂಲಬೇಕು. ನೂತಿದ್ದ ದಾರ ಬೇಕಿದ್ದರೆ ಜೋಬಿಗಿಳಿಸಿಕೊಳ್ಳಬಬಹುದು. ಬೇಕಿನಿಸಿದರೆ ಉಡುದಾರ/ಜನಿವಾರ ಮಾಡಿಕೊಂಡು ಧರಿಸಿಕೊಳ್ಳಬಹುದು. ಬೇಡವೆನಿಸಿದರೆ ಅಲ್ಲೇ ಬಿಟ್ಟು ಬರಬಹುದು.

 

 

‘ಕಾಯೋದು ಅಂದ್ರೇ ಸಾಯೋದು’ ಅನ್ನೋ ಮಾತನ್ನು ‘ಕಾಯೋದು ಅಂದ್ರೇ ನೂಲೋದು’ ಅಂತ ಬದಲಿಸಬೇಕು.

ಎಲ್ಲಾ ಓ.ಕೆ. ನೂಲೋದ್ ಯಾಕೆ?

‘ಎಳೆ’ದಾಡುವುದರಿಂದ ಮೆದುಳು, ಶರೀರ ‘ರಿಲ್ಯಾಕ್ಸ್’ ದಕ್ಕೀತು. ನಿತ್ಯದ ಜಂಜಾಟ ನೀಗಿಸಿ ಮನಸ್ಸು ‘ಫ್ರೆಶ್’ ಆಗಲಿದೆ. ಹಿಂದೆ ನಮ್ಮ ದೇಶದ ಸ್ವತಂತ್ರ್ಯ ಪೂರ್ವದಲ್ಲಿ ಹಲವರು ಇದೇ ಕೆಲಸವನ್ನು ಮಾಡುತ್ತಿದ್ದರು. ನಾವು ನೂಲುವುದನ್ನೂ ಬಿಟ್ಟೆವು. ಜಪಾನ್‍ನ ಬಾರ್‍ಗೆ ನಮ್ಮ ಇತಿಹಾಸ ಗೊತ್ತಿಲ್ಲದಿದರು ನೂಲಿಸಲು ಹೊರಟಿರುವುದು ಉತ್ತಮ ಬೆಳವಣಿಗೆಯನ್ನಲು ತಪ್ಪೇನಿಲ್ಲ! ಕೇವಲ ಕುಡಿಸಿ, ಹಾಳು ಮಾಡುವ ಬಾರ್‍ಗಳಿಂತಲೂ ಇರೋದ್ರಲ್ಲಿ ಬೆಟರ್ ಬಾರ್ ಅಲ್ವಾ?

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top