ಭವಿಷ್ಯ

ಈ ಸಲದ ಮಕರ ಸಂಕ್ರಾಂತಿ ಹಬ್ಬ ಎರಡು ಮಹಾ ಸಂಯೋಗದಿಂದ ಕೂಡಿದೆನಿಮ್ಮ ರಾಶಿಯ ಪ್ರಕಾರ ಇವುಗಳನ್ನು ದಾನ ಮಾಡಿ ಮಾಡಿದ ಪಾಪಗಳು ಕಳೆದು ಪುಣ್ಯ ಲಭಿಸುತ್ತೆ

ಈ ಸಲದ ಮಕರ ಸಂಕ್ರಾಂತಿ ಹಬ್ಬ ಎರಡು ಮಹಾ ಸಂಯೋಗದಿಂದ ಕೂಡಿದೆನಿಮ್ಮ ರಾಶಿಯ ಪ್ರಕಾರ ಇವುಗಳನ್ನು ದಾನ ಮಾಡಿ ಮಾಡಿದ ಪಾಪಗಳು ಕಳೆದು ಪುಣ್ಯ ಲಭಿಸುತ್ತೆ

ಮಕರ ಸಂಕ್ರಾಂತಿ ಹಬ್ಬದ ದಿನ ನಿಮ್ಮ ರಾಶಿಯ ಪ್ರಕಾರ ಈ ರೀತಿಯ ದಾನಗಳನ್ನು ಮಾಡಿ.

ಹೊಸ ವರ್ಷ ಪ್ರಾರಂಭವಾದ ಮೊದಲ ತಿನಗಳಿನಲ್ಲೇ ಬರುವ ಮೊದಲ ಹಬ್ಬವೇ ಸ೦ಕ್ರಾತಿ ಹಬ್ಬ .2018 ನೇ ವರ್ಷ ಜನವರಿಯಲ್ಲಿ ಈ ಬಾರಿ ಮಕರ ಸಂಕ್ರಾಂತಿಯನ್ನು ಕರ್ನಾಟಕದಲ್ಲಿ ಜನವರಿ ಹದಿನೈದನೇ ತಾರೀಖಿನ೦ದು ಆಚರಿಸಲಾಗುತ್ತಿದೆ. ಈ ಬಾರಿಯ ಮಕರ ಸಂಕ್ರಾಂತಿಯು ಎರಡು ಮಹಾ ಸಂಯೋಗವನ್ನು ಹೊತ್ತು ತಂದಿದೆ. ಈ ದಿನ ದಾನ ಧರ್ಮಕ್ಕೆ ವಿಶೇಷವಾದ ಪುಣ್ಯ ಮತ್ತು ಮಹತ್ವವಾದ ಫಲವಿದೆ. ಆದ್ದರಿಂದ ನಿಮ್ಮ ರಾಶಿಯ ಅನುಸಾರ ನೀವು ಯಾವ ವಸ್ತುವನ್ನು ದಾನ ಮಾಡಬೇಕು ಎಂದು ತಿಳಿಯಿರಿ.
ನೀವು ಸಂಕ್ರಾಂತಿ ಹಬ್ಬದ ದಿನ ಗಂಗಾಸ್ನಾನ ಅಂದರೆ ಪುಣ್ಯ ಸ್ನಾನ ಮಾಡಿದ ನಂತರ ನಿಮಗೆ ಒಂದು ಸಾವಿರ ಅಶ್ವಮೇಧ ಯಾಗವನ್ನು ಮಾಡಿದಷ್ಟು ಪುಣ್ಯ ದೊರೆಯಬೇಕೆಂದರೆ……. ನಿಮ್ಮ ನಿಮ್ಮ ರಾಶಿಯ ಅನುಸಾರ ನೀವು ಈ ದಾನವನ್ನು ಮಾಡಲೇಬೇಕು.

ಮೇಷ ರಾಶಿ.

 

ಮೇಷ ರಾಶಿಯವರು ಯಾವುದಾದರೂ ತಾಮ್ರದ ವಸ್ತು ಮತ್ತು ಮೊಸರನ್ನು ಈ ದಿನ ದಾನ ಮಾಡಿ .

ವೃಷಭ ರಾಶಿ.

 

 

ಬೆಳ್ಳಿ ಅಥವಾ ಬೆಳ್ಳಿಯಿಂದ ಮಾಡಿದ ವಸ್ತುಗಳನ್ನು ದಾನ ಮಾಡಿ ಇದರ ಜೊತೆಗೆ ಎಳ್ಳಿನ ದಾನವನ್ನು ಮಾಡಬೇಕು. ಕಪ್ಪು ಎಳ್ಳು ಅಥವಾ ಬಿಳಿ ಎಳ್ಳಿನ ದಾನವನ್ನು ಅವಶ್ಯವಾಗಿ ಈ ದಿನ ಮಾಡಬೇಕು .

ಮಿಥುನ ರಾಶಿ.

 

 

ಹಳದಿ ಬಣ್ಣದ ವಸ್ತುಗಳು ಯಾವುದಾದರೂ ಸರಿ ಒಂದು ರುಮಾಲ ಆದರೂ ಪರವಾಗಿಲ್ಲ ಅದನ್ನು ದಾನ ಮಾಡಿ ಜೊತೆಗೆ ಬೆಲ್ಲವನ್ನು ದಾನ ಮಾಡಿ .

ಕಟಕ ರಾಶಿ.

 

 

ಉಣ್ಣೆಯ ಬಟ್ಟೆಗಳನ್ನು ಮತ್ತು ಎಳ್ಳಿನ ದಾನವನ್ನು ಮಾಡಬಹುದು. ಬಿಳಿ ಅಥವಾ ಕಪ್ಪು ಎಳ್ಳನ್ನು ಯಾವುದಾದರೂ ಸರಿ ದಾನ ಮಾಡಿ.

ಸಿಂಹ ರಾಶಿ.

 

 

ಸಿಂಹ ರಾಶಿಯವರು ಬೆಲ್ಲ ಮತ್ತು ಗೋಧಿಯನ್ನು ದಾನ ಮಾಡಬೇಕು.

ಕನ್ಯಾ ರಾಶಿ.

 

 

ಹೆಸರು ಬೇಳೆ ಮತ್ತು ಎಳ್ಳನ್ನು ದಾನ ಮಾಡಬೇಕು.

ತುಲಾ ರಾಶಿ.

 

 

ಸಪ್ತ ದಾನವನ್ನು ಮಾಡಬೇಕು. ಅಂದರೆ ಏಳು ತರಹದ ಧಾನ್ಯಗಳನ್ನು ಮತ್ತು ಬೆಲ್ಲವನ್ನು ದಾನ ಮಾಡಬೇಕು.

ವೃಶ್ಚಿಕ ರಾಶಿ.

 

 

ಯಾವುದಾದರೂ ಕೆಂಪು ಬಣ್ಣದ ವಸ್ತುಗಳನ್ನು ಮತ್ತು ಮೊಸರನ್ನು ದಾನ ಮಾಡಬೇಕು.

ಧನಸ್ಸು ರಾಶಿ .

 

 

ಹಳದಿ ಬಣ್ಣದ ಯಾವುದಾದರೂ ವಸ್ತು ಮತ್ತು ಬೆಲ್ಲವನ್ನು ದಾನ ಮಾಡಬೇಕು.

ಮಕರ ರಾಶಿ.

 

 

ಮಕರ ರಾಶಿಯವರು ಕಂಬಳಿ ಮತ್ತು ಬೆಲ್ಲವನ್ನು ದಾನ ಮಾಡಬೇಕು.

ಕುಂಭ ರಾಶಿ.

 

 

ಕುಂಭ ರಾಶಿಯವರು ಕೂಡ ಕಂಬಳಿ ಮತ್ತು ಹಸುವಿನ ಶುದ್ಧ ತುಪ್ಪವನ್ನು ದಾನ ಮಾಡಬೇಕು.

ಮೀನ ರಾಶಿ .

 

 

ಮೀನ ರಾಶಿಯವರು ತೊಗರಿ ಬೇಳೆಯನ್ನು ದಾನ ಮಾಡಬೇಕು. ಹೀಗೆ ಸಂಕ್ರಾಂತಿಯ ದಿನ ಎಳ್ಳು ,ಬೆಲ್ಲ, ಕಿಚಡಿ ಮೊಸರು ಕಂಬಳಿಗಳನ್ನು ದಾನ ಮಾಡಿ ಪುಣ್ಯವನ್ನು ಸಂಪಾದಿಸಿಕೊಳ್ಳಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top