ದೇವರು

ಕೊಪ್ಪಳದ ಗವಿಸಿದ್ದೇಶ್ವರ ಮಹಾರಥೋತ್ಸವಕ್ಕೆ ಹರಿದುಬಂತು ದಾಖಲೆಯ ಐದು ಲಕ್ಷ ಜನಸ್ತೋಮ.! ಫೋಟೋಗಳಲ್ಲಿ ನೋಡಿ.

ಕೊಪ್ಪಳದ ಗವಿಸಿದ್ದೇಶ್ವರ ಮಹಾರಥೋತ್ಸವಕ್ಕೆ ಹರಿದುಬಂತು ದಾಖಲೆಯ ಐದು ಲಕ್ಷ ಜನಸ್ತೋಮ.! ಫೋಟೋಗಳಲ್ಲಿ ನೋಡಿ.

 

 

ಇತಿಹಾಸ ಪ್ರಸಿದ್ಧ ಕೊಪ್ಪಳದ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ನಡೆಯುತ್ತಿದ್ದು ಬುಧವಾರ ಅಪಾರ ಭಕ್ತರ ಸಮ್ಮುಖ ಮಹಾರಥೋತ್ಸವ ನಡೆಯಿತು. ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರು ಧ್ವಜಾರೋಹಣ ಮಾಡುವ ಮೂಲಕ ಮಹಾರಥೋತ್ಸವಕ್ಕೆ ಚಾಲನೆ ನೀಡಿದರು.

ಸುಮಾರು ಇದ್ದು ಲಕ್ಷಕ್ಕಿಂತಲೂ ಹೆಚ್ಚು ಜನರು ಸೇರಿ ಹರ್ಷೋದ್ಗಾರದಿಂದ ಗವಿ ಸಿದ್ದೇಶ್ವರನ ಮಹಾರಥವನ್ನು ಎಳೆದರು. ವಾದ್ಯ ಮೇಳಗಳು ಮಹಾ ರಥೋತ್ಸವಕ್ಕೆ ಸಾಥ್ ನೀಡಿದವು. ಈ ವೇಳೆ ಭಕ್ತಾದಿಗಳ “ಜಯ ಗವಿಸಿದ್ದೇಶ, ಜಯ ಗವಿಸಿದ್ದೇಶ.” ಎಂಬ ಕೂಗು ಮುಗಿಲು ಮುಟ್ಟಿತ್ತು. ಜನವರಿ 03 ರಿಂದ ಶುರುವಾಗಿರುವ ಗವಿಸಿದ್ದೇಶ್ವರ ಜಾತ್ರಾ ರಥೋತ್ಸವ ಜನವರಿ 05 ರವರೆಗೆ ನಡೆಯಲಿವೆ.

 

 

 

 

ಗವಿಸಿದ್ದೇಶ್ವರನ ಮಹಾರಥೋತ್ಸವಕ್ಕೆ ಸೇರಿದ್ದ ಮಹಾ ಜನಸ್ತೋಮ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದು ನೋಡೋದಕ್ಕೆ ಅದ್ಭುತವಾಗಿವೆ. ಆ ಅಪೂರ್ವ ಭಾವಚಿತ್ರಗಳಲ್ಲಿ ಕೆಲವೊಂದನ್ನು ನಿಮಗಾಗಿ ಹೆಕ್ಕಿತಂದಿದ್ದೇವೆ ಇಲ್ಲಿ ನೋಡಿ.

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top