ತಿಂಡಿ ತೀರ್ಥ

ನಾಟಿ ಸ್ಟೈಲ್ ಹಿತಿಕಿದ ಅವರೇಕಾಳು ಮತ್ತು ಕೈಮಾ ಉಂಡೆ ಸಾರು ಮಾಡ್ಕೊಂಡು ತಿಂದ್ರೆ ಬಲು ರುಚಿ ನೋಡಿ

ಹಿತಿಕಿದ ಅವರೇಕಾಳು ಮತ್ತು ಕೈಮಾ ಉಂಡೆ ಸಾರು 

 

ಬೇಕಾಗುವ ಸಾಮಗ್ರಿ :

ಮಟನ್ ಕೈಮ ಅರ್ಧ ಕೆಜಿ
ಹಿತಕಿದ ಅವರೇಕಾಳು ಒಂದೂವರೆ ಕಪ್
ಚಿಕ್ಕದಾಗಿ ಕತ್ತರಿಸಿಕೊಂಡ ಈರುಳ್ಳಿ 2
ಚಿಕ್ಕದಾಗಿ ಕತ್ತರಿಸಿಕೊಂಡ ಟೊಮೇಟೊ 1
ಉಪ್ಪು ರುಚಿಗೆ
ಹುರಿಗಡಲೆ ಅಥವಾ ಕಡ್ಲೆ ಪಪ್ಪು 3 ಚಮಚ
ತುರಿದ ತೆಂಗಿನ ಕಾಯಿ ಅರ್ಧ ಕಪ್
ಹಸಿ ಮೆಣಸಿನ ಕಾಯಿ 2
ಶುಂಠಿ ಸ್ವಲ್ಪ
ಬೆಳ್ಳುಳಿ 1
ಕೊತ್ತಂಬರಿ ಸೊಪ್ಪು ಸ್ವಲ್ಪ
ಚಕ್ಕೆ 2 ಇಂಚ್
ಲವಂಗ 4
ಕಾಳು ಮೆಣಸಿನ ಪುಡಿ 1 1/2 ಚಮಚ
ಧನಿಯಾ ಪುಡಿ 2 1/2 ಚಮಚ
ಹಚ್ಚ ಖಾರದ ಪುಡಿ 2 ಚಮಚ
ಅರಿಶಿಣ 1 /4 ಚಮಚ
ಎಣ್ಣೆ 3 ಚಮಚ
ಮೊಟ್ಟೆ 1

ಮಾಡುವ ವಿಧಾನ :

 

 

ಹುರಿಗಡಲೆಯನ್ನು ಮಿಕ್ಸಿಯಲ್ಲಿ ಚೆನ್ನಾಗಿ ಪುಡಿ ಮಾಡಿಕೊಂಡು ಪಕ್ಕದಲ್ಲಿ ಇಟ್ಟುಕೊಳ್ಳಿ ,ನಂತರ ಮಿಕ್ಸಿಗೆ ತುರಿದ ತೆಂಗಿನ ಕಾಯಿ ,ಹಸಿ ಮೆಣಸಿನ ಕಾಯಿ,ಶುಂಠಿ,ಬೆಳ್ಳುಳಿ ,ಚಕ್ಕೆ ,ಲವಂಗ,ಕಾಳು ಮೆಣಸಿನ ಪುಡಿ,ಧನಿಯಾ ಪುಡಿ ,ಹಚ್ಚ ಖಾರದ ಪುಡಿ ,ಅರಿಶಿಣ,ಎಣ್ಣೆಯಲ್ಲಿಬಾಡಿಸಿಕೊಂಡ ಸ್ವಲ್ಪ ಈರುಳ್ಳಿ ಮತ್ತು ನೀರು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಬೇಕು .

ಇನ್ನೊಂದು ಬಾಣಲೆಯಲ್ಲಿ ಸ್ವಲ್ಪ ಕತ್ತರಿಸಿಕೊಂಡ ಈರುಳ್ಳಿ ,ಟೊಮೇಟೊ ,ಹಿತಿಕಿದ ಅವರೇಕಾಳು ಮತ್ತು ಸ್ವಲ್ಪ ಅರಿಶಿಣ ಹಾಕಿ ಅವರೇಕಾಳಿನ ವಾಸನೆ ಹೋಗುವವರೆಗೂ ಚೆನ್ನಾಗಿ ಸ್ವಲ್ಪ ಎಣ್ಣೆ ಹಾಕಿ ಬಾಡಿಸಿಕೊಳ್ಳಬೇಕು.ನಂತರ ಇದಕ್ಕೆ ರುಬ್ಬಿಕೊಂಡ ಮಸಾಲೆಯ ಮಿಶ್ರಣವನ್ನು ಮತ್ತು 1 1 /2 ಲೋಟ ನೀರನ್ನು ಹಾಕಿ ಕುದಿಯಲು ಬಿಡಬೇಕು .

ಈ ಸಮಯದಲ್ಲಿ ಮಟನ್ ಕೈಮಗೆ ಪುಡಿಮಾಡಿಕೊಂಡ ಹುರಿಗಡಲೆ ,ಉಪ್ಪು ಮತ್ತು ಮೊಟ್ಟೆ ಸೇರಿಸಿ ಚೆನ್ನಾಗಿ ಕಲಸಿಕೊಳ್ಳಬೇಕು.ಕಲಸಿಕೊಂಡ ಈ ಕೈಮ ಮಿಶ್ರಣವನ್ನು ಒಂದು ಸುತ್ತು ರುಬ್ಬಿಕೊಳ್ಳಬೇಕು. ಮೊದಲು ಮಾಡಿಕೊಂಡ ಮಸಾಲೆ ಸೇರಿಸಿ ರುಬ್ಬಿಕೊಳ್ಳಿ .ರುಬ್ಬಿಕೊಂಡ ಕೈಮವನ್ನು ಚಿಕ್ಕ ಚಿಕ್ಕ ಉಂಡೆಗಳಾಗಿ ಮಾಡಿಟ್ಟುಕೊಳ್ಳಬೇಕು.

ಆಗಲೇ ಕುದಿಯಲು ಇಟ್ಟ ಮಸಾಲೆಗೆ ಸ್ವಲ್ಪ ಉಪ್ಪು ಸೇರಿಸಿ ಅನಂತರ ಕೈಮ ಉಂಡೆಗಳನ್ನು ಇದರಲ್ಲಿ ಸೇರಿಸಿ ಚೆನ್ನಾಗಿ ಕುದಿಯಲುಬಿಡಬೇಕು ನಂತರ ಇದಕ್ಕೆ ಕೊನೆಯಲ್ಲಿ ಸ್ವಲ್ಪ ಕೊತ್ತಂಬರಿ ಸೊಪ್ಪು ಸೇರಿಸಿ .

ಬಹಳ ಸುಲಭವಾಗಿ ಹಿತಿಕಿದ ಅವರೇಕಾಳು ಕೈಮಉಂಡೆ ಸಾರು ಮಾಡಿಕೊಂಡು ತಿನ್ನಿ

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top